ನ್ಯೂಸ್

ಪವನ್ ಕಲ್ಯಾಣ್ ಜನ್ಮದಿನದಿಂದಲೇ ಅಭಿಮಾನಿಗಳಿಗೆ ಶಾಕ್​! ಇದು ನಿಜವೇ ಎಂದು ಪ್ರಶ್ನಿಸಿದ ಫ್ಯಾನ್ಸ್

ಆಂಧ್ರಪ್ರದೇಶ: ಪ್ರಸ್ತುತ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಟಾಲಿವುಡ್​ನ ಸ್ಟಾರ್​ ನಟ ಪವನ್ ಕಲ್ಯಾಣ್ ಇಂದು ತಮ್ಮ 56ನೇ ಜನ್ಮದಿನಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಕಳೆದ ಕೆಲವು ದಿನಗಳಿಂದ ಸಿನಿಮಾ ಕೆಲಸಗಳಿಗಿಂತಲೂ ರಾಜಕೀಯ ಕರ್ತವ್ಯಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇನ್ನು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಪವನ್ ಕಲ್ಯಾಣ್​, ಜನ್ಮದಿನದ ಸಲುವಾಗಿ ತಮ್ಮ ಯಾವುದೇ ಚಿತ್ರಗಳ ವಿಶೇಷ ಪೋಸ್ಟರ್​​ಗಳನ್ನು ರಿಲೀಸ್ ಮಾಡಬೇಡಿ ಎಂದು ಆಯಾ ಚಿತ್ರತಂಡಕ್ಕೆ ಮನವಿ ಮಾಡಿದ್ದರು. ಈ ಮಧ್ಯೆ ನಟನ 'ಓಜಿ' ಚಿತ್ರಕ್ಕೆ ಸಂಬಂಧಿಸಿದ ಫೋಟೋಗಳು ಜಾಲತಾಣಗಳಲ್ಲಿ ಸೋರಿಕೆಯಾಗಿವೆ!

ಹುಟ್ಟುಹಬ್ಬದ ವಿಶೇಷ ಎಂದು ಪೋಸ್ಟರ್ ಅಥವಾ ಗ್ಲಿಂಪ್ಸ್‌ ವಿಡಿಯೋಗಳನ್ನು ಬಿಡುಗಡೆ ಮಾಡದಂತೆ 'ದೇ ಕಾಲ್ ಹಿಮ್ ಓಜಿ' ಮತ್ತು 'ಹರಿ ಹರ ವೀರ ಮಲ್ಲು' ಚಿತ್ರತಂಡಕ್ಕೆ ಪವನ್ ಕಲ್ಯಾಣ್ ಮನವಿ ಮಾಡಿದ್ದರು. ಈ ವಿಷಯಕ್ಕೆ ಕೊಂಚ ಬೇಸರಕ್ಕೊಳಗಾದರು ಸಹ ತಮ್ಮ ನೆಚ್ಚಿನ ಜನ್ಮದಿನವನ್ನು ಸಂಭ್ರಮಿಸುತ್ತಿದ್ದ ಅಭಿಮಾನಿಗಳಿಗೆ ತೀವ್ರ ಅಸಮಾಧಾನ ಮೂಡಿಸಿದ್ದು ಓಜಿ ಸಿನಿಮಾದ ಸೆಟ್​ನ ವೈರಲ್ ಫೋಟೋಗಳು.

ವರದಿಗಳ ಪ್ರಕಾರ, 'ಓಜಿ' ಚಿತ್ರೀಕರಣದ ಸೆಟ್‌ನಲ್ಲಿ ಪವನ್ ಕಲ್ಯಾಣ್​ರನ್ನು ಒಳಗೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋ ಸೋರಿಕೆಯಾಗಿದೆ ಎಂದು ಅನೇಕ ಅಭಿಮಾನಿಗಳು ಚಿತ್ರತಂಡದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಆದ್ರೆ, ಅಸಲಿಗೆ ಈ ಫೋಟೋಗಳು ಎಐ ಸಹಾಯದಿಂದ ಮಾಡಿರೋದು ಎಂದು ಹೇಳಲಾಗಿದೆ. ಚಿತ್ರ ತಯಾರಕರು ಇಲ್ಲಿಯವರೆಗೆ ಯಾವುದೇ ಅಧಿಕೃತ ಪೋಸ್ಟರ್​ ಬಿಡುಗಡೆ ಮಾಡಿಲ್ಲ.

ಸುಜೀತ್ ನಿರ್ದೇಶನದ 'ಓಜಿ' ಚಿತ್ರದಲ್ಲಿ ಪವನ್ ಕಲ್ಯಾಣ್​, ಪ್ರಿಯಾಂಕಾ ಮೋಹನ್, ಇಮ್ರಾನ್ ಹಶ್ಮಿ, ಪ್ರಕಾಶ್ ರಾಜ್, ಶ್ರೀಯಾ ರೆಡ್ಡಿ, ಅರ್ಜುನ್ ದಾಸ್, ಶಾಮ್ ಮತ್ತು ಹರೀಶ್ ಉತ್ತಮನ್ ಸೇರಿದಂತೆ ಮುಂತಾದವರ ತಾರಾಗಣವಿದೆ. ಡಿವಿವಿ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ಮಾಣವಾದ ಈ ಆಕ್ಷನ್ ಚಿತ್ರವು 2025ರ ಮಾರ್ಚ್ 27ರಂದು ತೆರೆ ಕಾಣಲು ಸಿದ್ಧವಾಗಿದೆ,(ಏಜೆನ್ಸೀಸ್).