ಮಳೆಯಲ್ಲಿ ಫುಟ್ಬಾಲ್ ಆಡುತ್ತಿರುವ ಪುಟ್ಟ ಆನೆ! ಇದು ಲಕ್ಷಾಂತರ ಜನರ ಮನಗೆದ್ದ ಮುದ್ದಾದ ವಿಡಿಯೋ

elephant video
Published on

ನವದೆಹಲಿ: ಆನೆಯೊಂದು ಫುಟ್ಬಾಲ್ ಆಡುವ ಅತ್ಯಂತ ಮುದ್ದಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮುದ್ದಾದ ಆನೆ ಮರಿ ತನ್ನ ತಾಯಿಯೊಂದಿಗೆ ಫುಟ್ಬಾಲ್ ಆಡುತ್ತಿರುವ ದೃಶ್ಯವನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿಕ್ಕ ಆನೆ ತನ್ನ ತಾಯಿಯೊಂದಿಗೆ ಮಳೆಯಲ್ಲಿ ಫುಟ್ಬಾಲ್ ಆಡುತ್ತಿದೆ. ಈ ಪುಟ್ಟ ಆನೆ ಮಳೆಯಲ್ಲಿ ಮೋಜು ಮಸ್ತಿ ಮಾಡುತ್ತಿದೆ.ಈ ವೀಡಿಯೊವನ್ನು @lek_chailert ಹೆಸರಿನ ಪುಟದಿಂದ Instagram ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಪೋಸ್ಟ್ ಮಾಡಿರುವ ಬಳಕೆದಾರರು ಈ ಪುಟ್ಟ ಆನೆಗೆ ವ್ಯಾನ್ ಮೈ ಎಂದು ಹೆಸರಿಟ್ಟಿದ್ದಾರೆ.

ವೀಡಿಯೊದಲ್ಲಿ, ಮರಿ ಆನೆ ಮಳೆಯಲ್ಲಿ ಸಂತೋಷದಿಂದ ಫುಟ್‌ಬಾಲ್ ಆಡುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಪುಟ್ಟ ಆನೆ ತನ್ನ ತಾಯಿಗೆ ಫುಟ್ಬಾಲ್ ಅನ್ನು ರವಾನಿಸುತ್ತದೆ. ಅದರ ನಂತರ ತಾಯಿ ಫುಟ್ಬಾಲ್ ಅನ್ನು ಒದ್ದು ನಂತರ ಮುಂದೆ ಸಾಗುತ್ತಾಳೆ. ನಂತರ ಪುಟ್ಟ ಆನೆ ಏಕಾಂಗಿಯಾಗಿ ಆಟ ಆಡುತ್ತಾ ಮುಂದೆ ಸಾಗುತ್ತದೆ, ಫುಟ್ಬಾಲ್ ಅನ್ನು ಒದೆಯುತ್ತದೆ. ಫುಟ್ ಬಾಲ್ ಆಡುವಾಗ ನೀರು ತುಂಬಿದ ಜಾಗಕ್ಕೆ ಹೋಗಿ ಫುಟ್ ಬಾಲ್ ಬಿಟ್ಟು ನೀರಿನಲ್ಲಿ ಆಟವಾಡುತ್ತದೆ.


ಕೇವಲ 35 ಸೆಕೆಂಡ್‌ಗಳ ಈ ವಿಡಿಯೋ ನೋಡಿದ ಜನರಿಗೆ ಸಮಾಧಾನವಾಗಿಲ್ಲ. ಜನರು ಈ ವಿಡಿಯೋವನ್ನು ಇಡೀ ದಿನ ನೋಡಿದರೂ ಈ ವಿಡಿಯೋದಿಂದ ತೃಪ್ತಿ ಪಡುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇದುವರೆಗೆ 1.5 ಲಕ್ಷ ಮಂದಿ ವಿಡಿಯೋ ವೀಕ್ಷಿಸಿದ್ದು, 10 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. '

ಜನರು ಕೂಡ ವಿಡಿಯೋಗೆ ಪ್ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಮುದ್ದಾದ ಆನೆ ಮಳೆಯಲ್ಲಿ ಆಡುವುದನ್ನು ನೋಡಿ ನನಗೆ ನನ್ನ ಬಾಲ್ಯದ ನೆನಪಾಯಿತು. ಆನೆಗಳ ಬಾಲ್ಯವು ಮನುಷ್ಯರಂತೆಯೇ ಇರುತ್ತದೆ. ಈ ಅದ್ಭುತ ಪ್ರಾಣಿಗಳಿಗಾಗಿ ನೀವು ಮಾಡುವ ಎಲ್ಲದಕ್ಕೂ ಧನ್ಯವಾದಗಳು ಎಂದು ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net