ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆಕೆಯ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ಬಳಿಕ ಕೋರ್ಟ್ ದರ್ಶನ್ರನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ, ಪವಿತ್ರಾರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿತು. ಇಂದಿಗೆ (ಜೂ.22) ದರ್ಶನ್ ಎರಡು ದಿನದ ಕಸ್ಟಡಿ ಅವಧಿ ಮುಕ್ತಾಯಗೊಂಡಿದ್ದು, ಮುಂದಿನ ಆದೇಶಕ್ಕೆ ಕೋರ್ಟ್ಗೆ ಕರೆತರಲಾಗುವುದು.
ಸದ್ಯ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜತೆ ಪವಿತ್ರಾ ಗೌಡ ಕೂಡ ಭಾಗಿಯಾಗಿದ್ದು, ಇದೀಗ ಕೋರ್ಟ್ ಆದೇಶದಂತೆ ಜೈಲುಪಾಲಾಗಿದ್ದಾರೆ. ಇನ್ನು ಪರಪ್ಪನ ಅಗ್ರಹಾರಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪರಿಸ್ಥಿತಿ ನೆನೆದು ಕಣ್ಣೀರಿಟ್ಟ ಪವಿತ್ರಾ, ಎಲ್ಲಾ ಖೈದಿಗಳಂತೆ ನ್ಯಾಯಾಂಗ ಬಂಧನ ಅನುಭವಿಸುತ್ತಿದ್ದಾರೆ. ಈ ಹಿಂದೆ ಐಷಾರಾಮಿ ಜೀವನ ನಡೆಸುತ್ತಿದ್ದ ನಟಿಗೆ ಈಗ ಜೈಲುವಾಸದ ಅನುಭವ ಅತೀವ ದುಃಖವನ್ನು ತಂದೊಡ್ಡಿದೆ.
ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿ ಇಂದಿಗೆ ಎರಡು ದಿನಗಳ ಜೈಲುವಾಸವನ್ನು ಅನುಭವಿಸಿದ್ದಾರೆ. ಇನ್ನು ತನ್ನನ್ನು ನೋಡಲು ಜೈಲಿಗೆ ಬಂದ ಕುಟುಂಬಸ್ಥರನ್ನು ಕಂಡು ಕಣ್ಣೀರಿಟ್ಟ ಪವಿತ್ರಾ, ಪರಿಸ್ಥಿತಿ ನೆನೆದು ಪೋಷಕರಲ್ಲಿ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಏಮ್ಸ್ ಬೇಡಿಕೆ ಮರುಜೀವ : ಕಾಸರಗೋಡಿನಲ್ಲಿ ಸ್ಥಾಪಿಸಲು ಎರಡು ದಶಕಗಳಿಂದ ಒತ್ತಾಯ : ಹೋರಾಟಕ್ಕೆ ಸಿದ್ಧಗೊಂಡ ಸಂಘಟನೆಗಳು
ಇನ್ನು ವರದಿಗಳ ಪ್ರಕಾರ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಿಗೆ ಮಾಂಸಹಾರಿ ಊಟವನ್ನು ಕೊಡಲಾಗಿದೆ. ಜೈಲಿನ ಮೆನುವಿನ ಪ್ರಕಾರ ಮಟನ್, ಚಪಾತಿ, ಮುದ್ದೆ, ಅನ್ನ ನೀಡಲಾಗಿದೆ.