ನವದೆಹಲಿ: ರಾಷ್ಟ್ರಾದ್ಯಂತ ಕರೊನಾ ಸೋಂಕಿನ ಹಾವಳಿ ಮುಂದುವರಿದಿದ್ದು, ಕರೊನಾ ನಿಯಂತ್ರಣಕ್ಕಾಗಿ ಸಾಕಷ್ಟು ಕೊಡುಗೆ ಸಲ್ಲಿಸಿರುವ ಪತಂಜಲಿ ಸಂಸ್ಥೆಯ ಮುಖ್ಯಸ್ಥರ ಪೈಕಿ ಪ್ರಮುಖರೊಬ್ಬರು ಕೋವಿಡ್ನಿಂದಾಗಿ ಮೃತಪಟ್ಟಿದ್ದಾರೆ.
ಪತಂಜಲಿ ಆಯುರ್ವೇದದ ಡೇರಿ ಬಿಜಿನೆಸ್ ಹೆಡ್ ಸುನಿಲ್ ಬನ್ಸಾಲ್ (57) ಕೆಲವೇ ದಿನಗಳ ಹಿಂದೆ ಮೃತಪಟ್ಟಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಬನ್ಸಾಲ್ ಮೇ 19ರಂದು ರಾಜಸ್ಥಾನದಲ್ಲಿ ಕೊನೆಯುಸಿರೆಳೆದರು. ಇವರು ಪತಂಜಲಿ ಆಯುರ್ವೇದದಲ್ಲಿನ ಡೇರಿ ವಿಭಾಗದ ಉಪಾಧ್ಯಕ್ಷರಾಗಿದ್ದರು. (ಏಜೆನ್ಸೀಸ್)