ನ್ಯೂಸ್

ಮಗಳ ಫೋಟೋ ಕುತ್ತಿಗೆಗೆ ನೇತಾಕೊಂಡು ರಸ್ತೆಗೆ ಬಂದ ಪಾಲಕರು: ವೃದ್ಧ ದಂಪತಿಗೆ ಆಗಿದ್ದಾರೂ ಏನು..? | Missing Daughter

Missing Daughter: ಕಳೆದ ಆರು ತಿಂಗಳಿಂದೆ ಕಾಣೆಯಾದ ತಮ್ಮ ಮಗಳನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಇಲ್ಲಿನ ಕಾನ್ಪೂರದ ಜಿಲ್ಲಾಧಿಕಾರಿ ಕಚೇರಿ ಎದುರು ಪಾಲಕರು ಬುಧವಾರ ವಿಭಿನ್ನ ಪ್ರತಿಭಟನೆ ಮಾಡಿದ್ದು, ಇದೀಗ ಧರಣಿಯ ಫೋಟೋ ಮತ್ತು ವಿಡಿಯೋಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಳೆದ ಆರು ತಿಂಗಳ ಹಿಂದೆ ಮಗಳು ಕಾಣೆಯಾದ ಬಗ್ಗೆ ಪೊಲೀಸ್​​ಗೆ ದೂರು ನೀಡಿದ್ದು. ಅಂದಿನಿಂದ ಇಂದಿನವರೂ ಹುಡುಕಾಟದ ಬಗ್ಗೆ ಪೊಲೀಸರು ಕ್ರಮಕೈಗೊಂಡಿಲ್ಲ. ಹೀಗಾಗಿ, ಈ ಪ್ರಕರಣದಿಂದ ಬೇಸರಗೊಂಡಿರುವ ಪಾಲಕರು ಕುತ್ತಿಗೆಗೆ ತಮ್ಮ ಮಗಳ ಫೋಟೋವನ್ನು ನೆತು ಹಾಕಿಕೊಂಡು ಜಿಲ್ಲಾಧಿಕಾರಿ ಧರಣಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಕಾನ್ಪೂರ ಜಿಲ್ಲೆಯ ಬಿಲೌರಿಯ ಉತ್ತರಿಪುರ ಪ್ರದೇಶ ನಿವಾಸಿ ರಾಕೇಶ್​ ದುಬೆ ದಂಪತಿಯ ಪುತ್ರಿ 26ರ ಆಕಾಂಕ್ಷಿ, 6 ತಿಂಗಳ ಹಿಂದೆ ಖೇರೆಶ್ವರ ದೇವಸ್ಥಾನಕ್ಕೆ ಹೋಗಿದ್ದಾಳೆ ಬಳಿಕ ಅಲ್ಲಿಂದ ಹಿಂತಿರುಗಿಲ್ಲ. ಮೂರು ದಿನಗಳ ಬಳಿಕ ಮಗಳು ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ. ಆದರೆ, ಪೊಲೀಸರ ಕ್ರಮದಿಂದ ಬೇಸರಗೊಂಡಿರು ವೃದ್ಧ ದಂಪತಿ ಮಗಳನ್ನು ಹುಡುಕಿಕೊಡುವಂತೆ ಸಾರ್ವಜನಿಕವಾಗಿ ಪ್ರತಿಭಟನೆ ಮುಂದಾಗಿದ್ದಾರೆ.

ಸತ್ತಿರಲಿ, ಬದುಕಿರಲಿ ಮಗಳನ್ನು ಕೊಡಿ!

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ದಂಪತಿಗಳು, '' ನಮ್ಮ ಮಗಳು ಸತ್ತಿರಲಿ, ಬದುಕಿರಲಿ ಮರಳಿ ಕೊಡುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್​ ವರಿಸ್ಠಾಧಿಕಾರಿ(ಎಸ್​ಪಿ) ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಡಿಸಿ ಮತ್ತು ಎಸ್ಪಿ ಭರವಸೆ ನೀಡಿದ್ದು, ಕೂಡಲೇ ನಿಮ್ಮ ಮಗಳ ಹುಡುಕಾಟದ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)