ನ್ಯೂಸ್

ಹಿಂದೂ ಸಮುದಾಯಕ್ಕೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ರಿಂದ ಹೋಳಿ ಶುಭಾಶಯ; ಶಾಂತಿಯಿಂದ ಹಬ್ಬ ಆಚರಿಸುವಂತೆ ಟ್ವೀಟ್

ಇಸ್ಲಾಮಾಬಾದ್​: ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದು ಸಮುದಾಯದವರಿಗೆ ಪ್ರಧಾನಿ ಇಮ್ರಾನ್​ ಖಾನ್​ ಅವರು ಹೋಳಿ ಶುಭಾಶಯ ಕೋರಿದ್ದಾರೆ.

ಪಾಕ್​ನಲ್ಲಿ ಮಾರ್ಚ್​ 9 ಹಾಗೂ 10ರಂದು ಹಿಂದುಗಳು ಬಣ್ಣಗಳ ಹಬ್ಬ ಹೋಳಿಯನ್ನು ಅದ್ದೂರಿಯಾಗಿ ಆಚರಿಸುತ್ತಿದ್ದು, ಇಮ್ರಾನ್ ಖಾನ್ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.

ನಮ್ಮ ಹಿಂದು ಸಮುದಾಯದ ಎಲ್ಲರಿಗೂ ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು. ಶಾಂತಿ ಹಾಗೂ ಸಂತೋಷದಿಂದ ಆಚರಿಸಿ ಎಂದು ಹೇಳಿದ್ದಾರೆ.

ಬಲೂಚಿಸ್ತಾನ ಪ್ರಾಂತೀಯ ಸರ್ಕಾರ ಹಿಂದುಗಳಿಗೆ ಹೋಳಿ ಹಬ್ಬದ ಆಚರಣೆಗಾಗಿ ಎರಡು ದಿನಗಳ ಸರ್ಕಾರಿ ರಜೆಯನ್ನು ಘೋಷಿಸಿದೆ. ಪಾಕ್​ನಲ್ಲಿ ಅಂದಾಜು 75 ಲಕ್ಷ ಜನ ಹಿಂದೂಗಳಿದ್ದಾರೆ.(ಎಜೆನ್ಸೀಸ್)