ನ್ಯೂಸ್

ಪಾಕಿಸ್ತಾನದಲ್ಲಿ ರ್‍ಯಾಲಿ ವೇಳೆ ಗುಂಡೇಟು ತಿಂದ ಇಮ್ರಾನ್​ ಖಾನ್​!

ಪಾಕಿಸ್ತಾನ: ಪಾಕ್​ನ ಮಾಜಿ ಪ್ರಧಾನಿ ಇಮ್ರಾನ್​ ಗುಂಡೇಟು ತಿಂದಿದ್ದಾರೆ. ಹಕೀಕಿ ಆಝಾದಿ ಹೆಸರಿನ ರ್‍ಯಾಲಿ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಹಿಂದೆ ಅವರು ಸೇನೆಯ ಹಾಗೂ ಸರ್ಕಾರದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು.

ಆಡಳಿತಾರೂಢ ಸರ್ಕಾರದ ವಿರುದ್ಧ ಪ್ರತಿಭಟಿಸಲು ನಡೆಸುತ್ತಿದ್ದ ರ್‍ಯಾಲಿ ವೇಳೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಕಂಟೈನರ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಹಕೀಕಿ ಆಝಾದಿ ರ್ ಯಾಲಿ ವಜೀರಾಬಾದ್ ಪ್ರವೇಶಿಸಿದಾಗ ಈ ಘಟನೆ ನಡೆದಿದೆ. ಗುಂಡಿನ ದಾಳಿಯ ನಂತರ, ಮೆರವಣಿಗೆಯಲ್ಲಿ ಕಾಲ್ತುಳಿತ ಸಂಭವಿಸಿದ್ದು ಕಂಟೈನರ್ ಮೇಲಿದ್ದ ಪಿಟಿಐ ಮುಖಂಡರು ಸೇರಿದಂತೆ ಎಲ್ಲರೂ ಗಾಬರಿಗೊಂಡರು.

ಗುಂಡಿನ ದಾಳಿಯ ಸಮಯದಲ್ಲಿ, ಬೆಂಗಾವಲು ಪಡೆ ಜಫರಾಲಿ ಖಾನ್ ಚೌಕ್ ಬಳಿ ತಲುಪಿದೆ. ಗುಂಡಿನ ದಾಳಿಯಲ್ಲಿ 5 ಮಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ. ಇದಲ್ಲದೆ, ಆಪಾದಿತ ಶೂಟರ್​ನನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)