ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆಯ ಪೋಸ್ಟ್ ಹಂಚಿಕೊಂಡಿದ್ದ ನಾಲ್ವರಿಗೆ ನ್ಯಾಯಾಲಯ (Court) ಮರಣದಂಡನೆ ವಿಧಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನದ ಲಾಹೋರ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು (Court) ಈ ಆದೇಶ ಹೊರಡಿಸಿದ್ದು, ಲಾಹೋರ್ ನಿವಾಸಿಗಳಾದ ವಾಜಿದ್ ಅಲಿ, ಅಸ್ಪಖ್ ಅಲಿ, ರಾಣಾ ಉಸ್ಮಾನ್ ಹಾಗೂ ಸುಲೇಮಾನ್ ಶಾಜಿದ್ಗೆ ಮರಣದಂಡನೆ ವಿಧಿಸಿ ನ್ಯಾಯಾಧೀಶ ತಾರೀಖ್ ಆಯುಬ್ ಅವರು ಈ ಆದೇಶ ಹೊರಡಿಸಿದ್ದಾರೆ.
ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಆರೋಪಿಗಳು ಫೇಸ್ಬುಕ್ನಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿಯಾಗಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದರು. ಈ ಸಂಬಂಧ ಸಿರಾಜ್ ಫಾರೂಕಿ ಎಂಬುವವರು ದೂರು ದಾಖಲಿಸಿದ್ದರು. ದೂರು ಆಧರಿಸಿ ಪಾಕಿಸ್ತಾನದ ಕೇಂದ್ರೀಯ ತನಿಖಾ ಸಂಸ್ಥೆ (ಎಫ್‌ಐಎ) ಸೈಬರ್ ಅಪರಾಧಗಳ ನಿಯಂತ್ರಣ ಕಾನೂನಿನ ಅಡಿ ಪ್ರಕರಣ ದಾಖಲಿಸಿತ್ತು.
ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ ಬಳಿಕ ವಿಚಾರಣೆ ಆರಂಭಿಸಿದ ನ್ಯಾಯಾಧೀಶರು ಪ್ರಾಸಿಕ್ಯೂಷನ್, ಡಿಫೆನ್ಸ್ ಮತ್ತು ಸಾಕ್ಷಿಗಳ ವಾದವನ್ನು ಆಲಿಸಿದ ನ್ಯಾಯಾಧೀಶರು ನಾಲ್ವರು ಆರೋಪಿಗಳಿಗೆ ತಲಾ 45 ಲಕ್ಷ ರೂಪಾಯಿ ದಂಡ ಮರಣದಂಡನೆ ಮತ್ತು 80 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದ್ದಾರೆ.
ನಾಲ್ವರಿಗೆ ಮರಣದಂಡನ ವಿಧಿಸಿರುವುನ್ನು ಅಮ್ನೆಸ್ಟಿ ಎನ್ಜಿಒ ವಿರೋಧಿಸಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿದೆ. ಪಾಕಿಸ್ತಾನದ ಧರ್ಮನಿಂದೆಯ ಕಾನೂನುಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಮತ್ತು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಜನರನ್ನು ಪ್ರೋತ್ಸಾಹಿಸುತ್ತವೆ ಎಂಬುದಕ್ಕೆ ಅಗಾಧ ಪುರಾವೆಗಳಿವೆ. ಒಮ್ಮೆ ಧರ್ಮನಿಂದೆಯ ಆರೋಪವನ್ನು ಮಾಡಿದ ನಂತರ, ಪೊಲೀಸರು ಆರೋಪಿಗಳನ್ನು ಬಂಧಿಸಿ, ಆರೋಪಗಳು ಅರ್ಥಪೂರ್ಣವಾಗಿದೆಯೇ ಎಂದು ಪರಿಶೀಲಿಸದೆಯೇ. ಧಾರ್ಮಿಕ ಮೌಲ್ವಿಗಳು ಮತ್ತು ಅವರ ಬೆಂಬಲಿಗರು ಸೇರಿದಂತೆ ಕೋಪಗೊಂಡ ಜನಸಮೂಹದಿಂದ ಸಾರ್ವಜನಿಕ ಒತ್ತಡಕ್ಕೆ ಮಣಿದು, ಅವರು ಸಾಕ್ಷ್ಯವನ್ನು ಪರಿಶೀಲಿಸದೆ ಪ್ರಾಸಿಕ್ಯೂಟರ್‌ಗಳಿಗೆ ಆಗಾಗ್ಗೆ ಪ್ರಕರಣಗಳನ್ನು ರವಾನಿಸುತ್ತಾರೆ ಎಂದು ಅಮ್ನೆಸ್ಟಿ ಎನ್ಜಿಒ ಆರೋಪಿಸಿದೆ.