ಲಕ್ನೋ: ಮನೆ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ್ದ ವ್ಯಕ್ತಿ ಮತ್ತು ಆತನ ಪುತ್ರ ನನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಮುರಾದಾಬಾದ್‌ನ ಭಗತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬುಧನ್‌ಪುರ ಅಲಿಗಂಜ್ ಗ್ರಾಮದ ಬಟ್ಟೆ ವ್ಯಾಪಾರಿ ರಯೂಸ್(45) ಮತ್ತು ಆತನ ಪುತ್ರ ಸಲ್ಮಾನ್(25) ತಮ್ಮ ಮನೆ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಕ್ಕಾಗಿ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿ ನಡೆಸಿ ನಂತರ ಧ್ವಜವನ್ನು ತೆಗೆದರು. ನಂತರ ಅಪ್ಪ, ಮಗನನ್ನು ಬಂಧಿಸಿದರು.
ಇದನ್ನೂ ಓದಿ
ದೇಶದ್ರೋಹ ಪ್ರಕರಣ ದಾಖಲು: ಇಬ್ಬರೂ ಆರೋಪಿಗಳ ವಿರುದ್ಧ ದೇಶದ್ರೋಹದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೧೫೩ ಎ ಮತ್ತು ೧೫೩ ಬಿ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ವಿಚಾರಣೆಯ ಜೊತೆಗೆ, ಅವರನ್ನು ಸ್ಥಳೀಯ ಗುಪ್ತಚರ ಘಟಕ ಸಹ ತನಿಖೆ ನಡೆಸುತ್ತಿದೆ. ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅವರ ಮನೆಯ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಎಎಸ್ಪಿ ಹೇಮರಾಜ್ ವೀಣಾ ತಿಳಿಸಿದ್ದಾರೆ.