Video Viral: ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋದ ಕುಟುಂಬವು ತಮ್ಮ ಮುದ್ದಿನ ನಾಯಿಯನ್ನು ಕಾರ್‌ನೊಳಗೆ ಲಾಕ್ ಮಾಡಿ ಹೋಗಿದ್ದರು. ಅವರು ದಶ೯ನ ಮುಗಿಸಿ ಬರುವುದರೊಳಗೆ ಕಾರಿನೊಳಗಡೆ ಗಾಳಿಯಾಡದ ಹಿನ್ನೆಲೆ ಬಿಸಿಲ ಶಾಖದಿಂದ ನಾಯಿ ಉಸಿರುಗಟ್ಟಿ ಸಾವನಪ್ಪಿದ ಘಟನೆ ವೃಂದಾವನದ ಶ್ರೀಯಾದ್ ಆಸ್ಪತ್ರೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ನಡೆದಿದೆ.
ಕಾರಿನ ಒಳಗಿನಿಂದ ನಾಯಿಯ ಕಿರುಚಾಟ ಕೇಳಿದ ಜನರು ತಕ್ಷಣ ಬಾಗಿಲು ತೆರೆಯಲು ಪ್ರಯತ್ನಿಸಿದರು, ಆದರೆ ಅದು ಲಾಕ್ ಆಗಿತ್ತು. ಕೆಲವರು ಒದ್ದಾಡುತ್ತಿರುವ ಪ್ರಾಣಿಯನ್ನು ರಕ್ಷಿಸಲು ಕಿಟಕಿ ಒಡೆಯಲು ಸೂಚಿಸಿದರು, ಆದರೆ ಬದಲಾಗಿ, ಅವರು ಮೆಕ್ಯಾನಿಕ್ ಅನ್ನು ಕರೆದರು. ಕೊನೆಗೆ ಬಾಗಿಲು ತೆರೆಯುವ ಹೊತ್ತಿಗೆ, ನಾಯಿ ಈಗಾಗಲೇ ಅರ್ಧ ಸತ್ತಿತ್ತು.
ಇದನ್ನೂ ಓದಿ: ಆಲಿಯಾ ಭಟ್ಗೆ 77 ಲಕ್ಷ ರೂ. ವಂಚನೆ ಮಾಡಿದ ಮಾಜಿ ಆಪ್ತ ಸಹಾಯಕಿ ಬೆಂಗಳೂರಿನಲ್ಲಿ ಅರೆಸ್ಟ್! Alia Bhatt
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಉಸಿರುಗಟ್ಟಿಸುತ್ತಿದ್ದ ಕಾರಿನೊಳಗೆ ಉಸಿರುಗಾಗಿ ಹೋರಾಡುತ್ತಿರುವ ಅಸಹಾಯಕ ಜೀವಿಯ ಹೋರಾಟದ ದೃಶ್ಯವು ನೋಡುಗರನ್ನು ಕಣ್ಣೀರು ಸುರಿಸುವಂತೆ ಮಾಡಿದೆ. ಬಿಡುಗಡೆಯಾದ ಸ್ವಲ್ಪ ಸಮಯದ ನಂತರ, ನಾಯಿ ತನ್ನ ಪ್ರಾಣವನ್ನೇ ಕಳೆದುಕೊಂಡಿದೆ.
ನಾಯಿಯ ಸಾವಿಗೆ ಉಸಿರುಗಟ್ಟುವಿಕೆ ಕಾರಣ ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ. ಘಟನೆಯ ನಂತರ, ಈ ಕುಟುಂಬದ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)