Richest Person: ಅಮೆರಿಕಾದ ಒರಾಕಲ್ ಎಂಬ ಬಹುರಾಷ್ಟ್ರೀಯ ಕಂಪ್ಯೂಟರ್ ತಂತ್ರಜ್ಞಾನ ಕಂಪನಿಯ ಸಹ ಸಂಸ್ಥಾಪಕ ಲ್ಯಾರಿ ಎಲಿಸನ್, ಫೇಸ್ಬುಕ್ ಸಂಸ್ಥಾಪಕ ಮಾರ್ಜ್ ಜುಕರ್ ಬರ್ಗ ಹಿಂದಿಕ್ಕಿ ವಿಶ್ವದ 2ನೇ ಶ್ರೀಮಂತರಾಗಿ ಹೊರ ಹೊಮ್ಮಿದ್ದಾರೆ.
ಅಮೆರಿಕ ಸರ್ಕಾರ ಎನ್ವಿಡಿಯಾ ಕಾರ್ಪ್ ಮತ್ತು ಅಡ್ವಾನ್ಸ್ ಮೈಕ್ರೋ ಡಿವೈಸಸ್ ಇಂಕ್ ಸೇರಿದಂತೆ ಚಿಪ್ ತಯಾರಿಕರಿಗೆ ಕೆಲವು ಸೆಮಿಕಂಡಕ್ಟರ್ ಗಳನ್ನ ಚೀನಾಕ್ಕೆ ರಪ್ಪು ಮಾಡಲು ಅವಕಾಶ ನೀಡುವ ಸುದ್ದಿ ಮಂಗಳವಾರ(ಜು.15) ಹೊರಬರುತ್ತಿದ್ದಂತೆ ಒರಾಕಲ್ ಕಂಪನಿಯ ಶೇರುಗಳು ಶೇ 5.7ರಷ್ಟು ಏರಿಕೆಯಾದ ಹಿನ್ನೆಲೆ, ಬ್ಲೂಮ್ ಬರ್ಗ್ ಬಿಲಿಯೇನರ್ಸ್ ಸೂಚ್ಯಂಕದ ಪ್ರಕಾರ ಲ್ಯಾರಿ ಎಲಿಸನ್ ಮೊದಲ ಬಾರಿಗೆ ವಿಶ್ವದ 2ನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ವರದಿಯಾಗಿದೆ.
ಒರಾಕಲ್ ಕಂಪನಿಯ ಷೇರು ಬೆಲೆಯಲ್ಲಿ ಭಾರಿ ಏರಿಕೆ ಕಂಡಿದ್ದು, ಲಾರಿ ಎಲಿಸನ್ ಅವರ ಆಸ್ತಿ ಮೌಲ್ಯ $251.2 ಬಿಲಿಯನ್ ಏರಿಕೆಯಾಗಿದೆ. ಲ್ಯಾರಿ ಎಲಿಸನ್ ಅವರ ಶೇ. 80ರಷ್ಟು ಆಸ್ತಿ ಒರಾಕಲ್ನ ಷೇರು & ಆಯ್ಕೆಗಳನ್ನ ಹೊಂದಿದೆ.
ಹೂಡಿಕೆದಾರರು, ಎಐ ತಂತ್ರಜ್ಞಾನದಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ. ಒರಾಕಲ್ ತಂತ್ರಜ್ಞಾನ ಕಂಪನಿಗೆ ಬಹಳ ಲಾಭವಾಗಿದೆ. 2022ರಲ್ಲಿ ಚಾಟ್ ಜಿಪಿಟಿಯನ್ನ ಬಿಡುಗಡೆ ಮಾಡಿದಾಗಿನಿಂದ ಕಂಪನಿಯ ಷೇರುಗಳು ಸುಮಾರು ಮೂರು ಪಟ್ಟು ಹೆಚ್ಚಾಗಿದೆ.(ಏಜೆನ್ಸೀಸ್)