Operation Sindoor: ಪಾಕ್ನ 9 ಭಯೋತ್ಪಾದಕ ಅಡಗುತಾಣವನ್ನು ಭಾರತೀಯ ಸೇನೆ ಉಡೀಸ್ ಮಾಡಿದ ಬೆನ್ನಲ್ಲೇ ಇದೀಗ ಭಾರತದ ಗಡಿಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಹಿಂದಿನಕ್ಕಿಂತ ಹೆಚ್ಚಿನ ಭದ್ರೆತೆಯನ್ನು ಒದಗಿಸಲಾಗಿದೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ಗೆ ರೋಹಿತ್ ನಿವೃತ್ತಿ; ಇಂಗ್ಲೆಂಡ್ ಸರಣಿಗೆ ಕ್ಯಾಪ್ಟನ್ ಯಾರು? ಈ ನಾಲ್ವರ ಹೆಸರು ಮುಂಚೂಣಿ | Rohit Sharma
ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಗೆ ಕಡೆಗೂ ಪ್ರತೀಕಾರ ತೀರಿಸಿಕೊಂಡಿರುವ ಭಾರತ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ‘ಆಪರೇಷನ್ ಸಿಂದೂರ್’ ಹೆಸರಿನಡಿ ದಾಳಿ ನಡೆಸಿತು. ಈ ದಾಳಿಯಲ್ಲಿ ಸುಮಾರು 9 ಉಗ್ರರ ನೆಲೆಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ದಾಳಿಯಲ್ಲಿ 80 ಉಗ್ರರು ಸಾವನ್ನಪ್ಪಿದರೆ, 60 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತದ ಗಡಿ ರಾಜ್ಯಗಳಾದ ರಾಜಸ್ಥಾನ ಮತ್ತು ಪಂಜಾಬ್ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಉಗ್ರರ ಅಡಗುತಾಣಗಳು ಛಿದ್ರಗೊಂಡ ಹಿನ್ನೆಲೆ ಪಾಕಿಸ್ತಾನ ಭಾರತ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ಹಂಚಿಕೊಂಡಿದೆ. ಎರಡು ದೇಶಗಳ ನಡುವೆ ಉಗ್ವಿಗ್ನತೆ ಹೆಚ್ಚಿದ್ದು, ಯಾವ ಸಮಯದಲ್ಲಿ ಏನೂ ಬೇಕಾದರೂ ಸಂಭವಿಸಬಹುದು. ಹೀಗಿರುವ ಕಾರಣ ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳ ರಜೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸಲಾಗಿದೆ.
ಪಾಕಿಸ್ತಾನದೊಂದಿಗೆ 1,037 ಕಿ.ಮೀ ಗಡಿಯನ್ನು ಹಂಚಿಕೊಂಡಿರುವ ರಾಜಸ್ಥಾನ ಸದ್ಯ ಹೈ ಅಲರ್ಟ್ ಪಟ್ಟಿಯಲ್ಲಿ ಮೊದಲಿಗಿದೆ. ಈಗಾಗಲೇ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಗಡಿ ಭದ್ರತಾ ಪಡೆ ಸಿಬ್ಬಂದಿಗೆ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ಗುಂಡು ಹಾರಿಸುವ ಆದೇಶವನ್ನು ನೀಡಲಾಗಿದೆ. ಭಾರತೀಯ ವಾಯುಪಡೆಯೂ ಕಟ್ಟೆಚ್ಚರದಲ್ಲಿದೆ. ಜೋಧ್‌ಪುರ, ಕಿಶನ್‌ಗಢ ಮತ್ತು ಬಿಕಾನೆರ್ ವಿಮಾನ ನಿಲ್ದಾಣಗಳಿಂದ ವಿಮಾನಗಳ ಸಂಚಾರವನ್ನು ಮೇ 9ರವರೆಗೆ ಸ್ಥಗಿತಗೊಳಿಸಲಾಗಿದೆ. ಪಶ್ಚಿಮ ವಲಯದಲ್ಲಿ ಯುದ್ಧ ವಿಮಾನಗಳು ಆಕಾಶದಲ್ಲಿ ಗಸ್ತು ತಿರುಗುತ್ತಿದ್ದು, ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಜಾರಿಯಲ್ಲಿರುವ ಕಾರಣ ರದ್ದುಪಡಿಸಲಾಗಿದೆ.
ಸುಖೋಯ್ -30 ಎಂಕೆಐ ಜೆಟ್‌ಗಳು ಗಂಗಾನಗರದಿಂದ ರಾನ್ ಆಫ್ ಕಚ್‌ಗೆ ವಾಯು ಗಸ್ತು ನಡೆಸುತ್ತಿವೆ. ಬಿಕಾನೆರ್, ಶ್ರೀ ಗಂಗಾನಗರ, ಜೈಸಲ್ಮೇರ್ ಮತ್ತು ಬಾರ್ಮರ್ ಜಿಲ್ಲೆಗಳಲ್ಲಿನ ಎಲ್ಲ ಶಾಲೆಗಳನ್ನು ಸದ್ಯ ಮುಚ್ಚಲಾಗಿದ್ದು, ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪೊಲೀಸರು ಮತ್ತು ರೈಲ್ವೆ ಸಿಬ್ಬಂದಿಗಳ ರಜೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ,(ಏಜೆನ್ಸೀಸ್).