ಬೆಂಗಳೂರು: ಚಂದ್ರಯಾನ-3 ವಿಚಾರದಲ್ಲಿ ವಿರೂಪಗೊಳಿಸಿದ್ದ ಚಾಯ್ವಾಲ್ ಫೋಟೋ ಪೋಸ್ಟ್ ಮಾಡಿ ವಿವಾದಕ್ಕೀಡಾಗಿ ಭಾರಿ ಟ್ರೋಲ್ಗೂ ಒಳಗಾಗಿದ್ದ ನಟ ಪ್ರಕಾಶ್ ರಾಜ್, ಇಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಅವರು ಇವತ್ತು ಇನ್ನಷ್ಟು ಟ್ರೋಲ್ಗೆ ಒಳಗಾಗಿದ್ದಾರೆ.
ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಘೆಗೆ ಹೋಲಿಕೆ ಮಾಡುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ವಿವಾದ ಸೃಷ್ಟಿಸಿದ್ದರು. ಅವರ ಬೆನ್ನಿಗೇ ಪ್ರಕಾಶ್ ರಾಜ್ ಕೂಡ ಹಿಂದೂಗಳನ್ನು ಕೆಣಕಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿಂದೂಗಳು ತನಾತನಿಗಳು ಅಲ್ಲ, ತನಾತನಿಗಳು ಮಾನವವಿರೋಧಿಗಳು. ನೀವು ಇದನ್ನು ಒಪ್ಪಿದರೆ ರಿಟ್ವೀಟ್ ಮಾಡಿ, ಎಲ್ಲರಿಗೂ ಹ್ಯಾಪಿ ಸಂಡೇ ಎಂದು ಪ್ರಕಾಶ್ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದ ಬಹಳಷ್ಟು ಮಂದಿ ತೀವ್ರ ಬೇಸರಗೊಂಡಿದ್ದು, ಪ್ರಕಾಶ್ ರಾಜ್ ಭಾರಿ ಟ್ರೋಲ್ಗೆ ಒಳಗಾಗಿದ್ದಾರೆ.