ನ್ಯೂಸ್

ಬನ್ನೇರುಘಟ್ಟ ಕಾಡಿಗೆ ಹೋದ ಓರ್ವ ಯುವತಿ, ಯುವಕರಿಬ್ಬರು ಶವವಾಗಿ ಪತ್ತೆ: ನಡೆದಿದ್ದಾರೂ ಏನು?

ಆನೇಕಲ್: ಬೆಂಗಳೂರು ಮೂಲದ ಓರ್ವ ಯುವತಿ ಇಬ್ಬರು ಯುವಕರು ಸೇರಿದಂತೆ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಬನ್ನೇರುಘಟ್ಟದಲ್ಲಿ ನಿನ್ನೆ (ಶುಕ್ರವಾರ) ನಡೆದಿದೆ.

ಮೃತ ಮೂವರು ಸಹ ಟೆಕ್ಕಿಗಳಾಗಿದ್ದು, ಬೆಂಗಳೂರಿನ ವಿಲ್ಸನ್ ಗಾರ್ಡನ್ ನಿವಾಸಿಗಳು ಎಂದು ತಿಳಿದುಬಂದಿದೆ. ಬನ್ನೇರುಘಟ್ಟ ಬಳಿಯ ಚಂಪಕದಾಮ ದೇವಸ್ಥಾನ ಬಳಿ ತಮ್ಮ ವಾಹನಗಳನ್ನು ನಿಲ್ಲಸಿ ಕಾಡಿನಲ್ಲಿರುವ ಸುವರ್ಣಮುಖಿ ಎಂಬ ಕೊಳದಲ್ಲಿ ಈಜಲು ತೆರಳಿದ್ದರು. ಈ ವೇಳೆ ಮೂವರು ನೀರು ಪಾಲಾಗಿದ್ದಾರೆ. ಮೂವರಲ್ಲಿ ಒಬ್ಬರ ಮೃತ ದೇಹ ನೀರಿನ ಮೇಲೆ ತೇಲುತ್ತಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಅಗ್ನಿಶಾಮಕ ದಳದವರಿಂದ ಶವಗಳನ್ನು ಮೇಲೆತ್ತುವ ಕಾರ್ಯ ನಡೆದಿದ್ದು, ನಿನ್ನೆ ರಾತ್ರಿಯೇ ಮೂವರ ಮೃತ ದೇಹವನ್ನು ಹೊರ ತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​) ಇದನ್ನೂ ಓದಿ: ನಾಳೆ ಅಮಾವಾಸ್ಯೆ ದಿನವೇ ಸಂಭವಿಸೋ ಸೂರ್ಯಗ್ರಹಣದಿಂದ ಯಾರಿಗೆ ತೊಂದರೆ: ರಾಜಗುರು ದ್ವಾರಕಾನಾಥ್ ಭವಿಷ್ಯ