ಮಂಡ್ಯ: ಮನುಷ್ಯನಿಗೆ ಅದೃಷ್ಟ (Luck) ಯಾವಾಗ, ಹೇಗೆ ಬರುತ್ತದೆ ಎಂದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಸಾಮಾನ್ಯ ವ್ಯಕ್ತಿಗಳಿಗೆ ಲಾಟರಿಯಲ್ಲಿ (Lottery) ಬಂಪರ್ ಹೊಡೆದಾಗ ನಮ್ಮ ಅದೃಷ್ಟ ಸರಿ ಇಲ್ಲ ಎಂದುಕೊಂಡಿರುತ್ತೇವೆ. ಆದರೆ, ಅದೆಲ್ಲಾ ಕಾಲದ ಮಹಿಮೆ ಎಂದರೆ ತಪ್ಪಾಗಲಾರದು. ಇದೀಗ ಅಂಥಹದ್ದೆ ಮಹಿಮೆಯೊಂದು ಮಂಡ್ಯ ಜಿಲ್ಲೆ (Mandya District) ಪಾಂಡವಪುರ (Pandavapura) ನಿವಾಸಿ ಬದುಕಲ್ಲಿ ನಡೆದಿದ್ದು, ಲಕ್ (Luck) ಎಂದರೆ ಇದಪ್ಪಾ ಎಂದು ನೀವು ಹೇಳುವುದರಲ್ಲಿ ಯಾವದೇ ಸಂಶಯ ಬೇಡ.
ಕೇರಳದ ಲಾಟರಿಯಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ನಿವಾಸಿ ಸ್ಕೂಟರ್ ಮೆಕ್ಯಾನಿಕ್ ಅಲ್ತಾಫ್ (Altaf) ಪಾಲಾಗಿದ್ದು, ಬರೋಬ್ಬರಿ 25 ಕೋಟಿ ರೂ. ಮೌಲ್ಯದ ಲಾಟರಿಯನ್ನು (Lottery) ಗೆದ್ದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಕೆಲಸದ ನಿಮಿತ್ತ ಕೇರಳಕ್ಕೆ ತೆರಳಿದ್ದ ಅಲ್ತಾಫ್ 500 ರೂ ಕೊಟ್ಟು ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಇದೀಗ ಅಲ್ತಾಫ್ ಖರೀದಿ ಮಾಡಿದ್ದ ಲಾಟರಿ ಟಿಕೆಟ್ಗೆ ಬಂಪರ್ ಬಹುಮಾನ ಬಂದಿದ್ದು, ತೆರಿಗೆ (Tax) ಕಳೆದು ಅಲ್ತಾಫ್ಗೆ 17.5 ಕೋಟಿ ರೂ. ಮೊತ್ತ ಸಿಗಲಿದೆ. ಬಹುಮಾನದ ಹಣ ತರಲು ಅಲ್ತಾಫ್ ಹಾಗೂ ಕುಟುಂಬಸ್ಥರು ಕೇರಳಕ್ಕೆ ದೌಡಾಯಿಸಿದ್ದು, ಲಾಟರಿ ಭಾಗ್ಯದಲ್ಲಿ ಬಡ ಮೆಕ್ಯಾನಿಕ್ ಕೋಟ್ಯಾಧಿಪತಿಯಾಗಿದ್ದಾರೆ.
ಪ್ರತಿ ವರ್ಷ ಓಣಂ (Onam) ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ನಡೆಯುವ ರಾಜ್ಯ ಲಾಟರಿಯ ಲಕ್ಕಿ ಡ್ರಾ ರಿಸಲ್ಟ್ (Lucky Draw Result) ಅಕ್ಟೋಬರ್ 09ರಂದು ಪ್ರಕಟವಾಗಿದ್ದು, ಇದರಲ್ಲಿ ಅಲ್ತಾಫ್ ಮಾತ್ರವಲ್ಲದೇ. ಓಣಂ ತಿರುಓಣಂ ಬಂಪರ್ ಬಿಆರ್ 99 ಹೆಸರಿನಲ್ಲಿ ಈ ಲಾಟರಿಯನ್ನು ನಡೆಸಲಾಗುತ್ತದೆ. ಈ ಬಾರಿ 71,35,938 ಟಿಕೆಟ್ಗಳು ಮಾರಾಟವಾಗಿದ್ದವು. ಪಾಲಕ್ಕಾಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ಟಿಕೆಟ್ಗಳು ಮಾರಟವಾಗಿದ್ದವು.
ಲಾಟರಿಯಲ್ಲಿ (Lottery) ಗೆದ್ದವರಿಗೆ ಮೊದಲ ಬಹುಮಾನವಾಗಿ 25 ಕೋಟಿ ರೂ. ಸಿಗಲಿದ್ದು, 2ನೇ ಬಹುಮಾನ ಪಡೆಯುವ 20 ಮಂದಿಗೆ ತಲಾ 1 ಕೋಟಿ ರೂ. ಹಾಗೂ 3ನೇ ಬಹುಮಾನ ಗೆಲ್ಲುವ 20 ಮಂದಿಗೆ ತಲಾ 50 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಮೂರನೇ ಬಹುಮಾನಗಳು ಘೋಷಣೆಯಾದ ಬಳಿಕ 20 ಮಂದಿಗೆ ಸಮಾಧಾನಕರ ಬಹುಮಾನವಾಗಿ ತಲಾ 5 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಇನ್ನು 4ನೇ ಶ್ರೇಣಿಯ ಬಹುಮಾನಗಳಡಿ 5 ಲಕ್ಷ, 5ನೇ ಶ್ರೇಣಿಯಲ್ಲಿ 2 ಲಕ್ಷ ರೂ., 6ನೇ ಶ್ರೇಣಿಯ ಬಹುಮಾನದಡಿ 5 ಸಾವಿರ ರೂ., 7ನೇ ಶ್ರೇಣಿಯಡಿ 1,000 ರೂ., 8ನೇ ಶ್ರೇಣಿಯಡಿ 1 ಸಾವಿರ ರೂ., 9ನೇ ಶ್ರೇಣಿಯಡಿ 500 ರೂ.ಗಳನ್ನು ನೀಡಲಾಗುತ್ತದೆ. ಈ ಎಲ್ಲಾ ಬಹುಮಾನಗಳ ಒಟ್ಟು ಮೊತ್ತ 125.54 ಕೋಟಿ ರೂ. ಆಗಲಿದೆ.