Yashwant Varma: ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ವೇಳೆ ಮನೆಯಲ್ಲಿ ಸುಟ್ಟ ನೋಟಿನ ಕಂತು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾ.ಯಶವಂತ ವರ್ಮಾ ವಿರುದ್ಧದ ಮಾಹಭಿಯೋಗ ನಿರ್ಣಯವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅಂಗೀಕರಿಸಿದ್ದಾರೆ.
146 ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ನೀಡಿದ್ದ ಮಹಾಭಿಯೋಗ ಪ್ರಸ್ತಾಪವನ್ನು ಲೋಕಸಭೆಯಲ್ಲಿ ಅಂಗೀಕರಿಸಿದ್ದು, ಭ್ರಷ್ಟಾಚಾರದ ವಿರುದ್ಧ ಸಂಸತ್ತು ಒಗ್ಗಟ್ಟಾಗಿದೆ. ಜನರು ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಓಂ ಬಿರ್ಲಾ ಹೇಳಿದರು.
ಪ್ರಕರಣದ ಆರೋಪಕ್ಕೆ ಸಂಬಂಧ ಪಟ್ಟಂತೆ ವಿಚಾರಣೆ ನಡೆಸಲು ಸ್ಪೀಕರ್, ಮೂವರು ಸದಸ್ಯರ ಸಮಿತಿ ರಚಿಸಿದ್ದಾರೆ. ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಎಂ.ಶ್ರೀವಾಸ್ತವ ಹಾಗೂ ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಬಿವಿ ಆಚಾರ್ಯ ಇದ್ದಾರೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಹೈಕೋರ್ಟ್ ನ್ಯಾಯಾಧೀಶರನ್ನು ಪದಚ್ಯತಗೊಳಿಸಲಾಗುತ್ತಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂವಿಧಾನದ 124, 217 ಹಾಗೂ 218ನೇ ವಿಧಿಗಳ ಅಡಿಯಲ್ಲಿ ಸಂಸತ್ತು ತನಿಖೆ ನಡೆಸುತ್ತಿದೆ.
ಸಾಕ್ಷ್ಯಗಳನ್ನು ಕರೆಯುವ ಮತ್ತು ವಿಚಾರಣೆ ಮಾಡುವ ಅಧಿಕಾರ ಹೊಂದಿರುವ ಮೂವರು ಸದಸ್ಯರ ಸಮಿತಿಯು ತನ್ನ ವರದಿಯನ್ನು ಲೋಕಸಭಾ ಸ್ಪೀಕರ್‌ಗೆ ಸಲ್ಲಿಸುತ್ತದೆ. ಅವರು ಅದನ್ನು ಸದನದ ಮುಂದೆ ಇಡುತ್ತಾರೆ. ನ್ಯಾಯಾಧೀಶರು ತಪ್ಪಿತಸ್ಥರೆಂದು ಕಂಡುಬಂದರೆ, ನ್ಯಾಯಮೂರ್ತಿ ವರ್ಮಾ ಅವರನ್ನು ದೋಷಾರೋಪಣೆ ಮಾಡುವ ನಿರ್ಣಯವನ್ನು ಮತಕ್ಕೆ ಹಾಕಲಾಗುತ್ತದೆ. ರಾಜ್ಯಸಭೆಯಲ್ಲಿಯೂ ಇದೇ ರೀತಿಯ ಅನುಸರಿಸಲಾಗುತ್ತದೆ. ನಂತರ ನಿರ್ಣಯವನ್ನು ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಲಾಗುತ್ತದೆ.
ನ್ಯಾಯಮೂರ್ತಿ ವರ್ಮಾ ಮತ್ತು ಮನೆಯಲ್ಲಿ ಸುಟ್ಟ ನಗದು ಹಣದ ಕಂತು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಒತ್ತಾಯಿಸಿ ವಿರೋಧ ಪಕ್ಷದ ಮತ್ತು ಆಡಳಿತ ಪಕ್ಷದ ಸಂಸದರು ಲೋಕಸಭಾ ಸ್ಪೀಕರ್‌ಗೆ ಪ್ರಸ್ತಾವನೆ ಸಲ್ಲಿಸಿದ ಒಂದು ವಾರದ ಬಳಿಕ ಮಹಾಭಿಯೋಗಕ್ಕೆ ಚಾಲನೆ ನೀಡಲಾಗಿದೆ.
ಘಟನೆ ಹಿನ್ನೆಲೆ ಏನು?
ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ವರ್ಮಾ ಅವರ ನಿವಾಸದಲ್ಲಿ ಆಗಸ್ಟ್ 15ರಂದು ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದರು. ಈ ವೇಳೆ ಬೆಂಕಿ ಸುಟ್ಟು ಹೋದ ಕಂತು ಕಂತಿನ ನೋಟಿನ ರಾಶಿ ಪತ್ತೆಯಾಗಿತ್ತು. ಇದು ದೇಶಾದ್ಯಂತ ಸುದ್ದಿಯಾಗಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ; ಮಧ್ಯ ಕಾಶ್ಮೀರದ ಹಲವೆಡೆ ಎಸ್ಐಎ ದಾಳಿ, ಶೋಧ|SIA Raid
ನ್ಯಾ. ವರ್ಮಾ ತಮ್ಮ ವಿರುದ್ಧ ಆರೋಪಗಳನ್ನು ನಿರಾಕರಿಸಿ, ಆ ಹಣಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದರು. ಘಟನೆ ಬಗ್ಗೆ ಆಂತರಿಕವಾಗಿ ತನಿಖೆ ನಡೆಸಿದ್ದ ಸುಪ್ರೀಂಕೋರ್ಟ್ ಅವರ ವಿರುದ್ಧ ದೋಷಾರೋಪಣೆ ಮಾಡಿತು. ತನಿಖೆಗೆ ಸಮಿತಿ ರಚಿಸಿತು. ಸಮಿತಿಯೂ ವರ್ಮಾವನ್ನು ವಜಾಗೊಳಿಸುವ ಶಿಫಾರಸನ್ನು ಅಂದಿನ ಸಿಜೆಐ ಸಂಜೀವ್ ಖನ್ನಾ, ರಾಷ್ಟ್ರಪತಿ ಮುರ್ಮು ಹಾಗೂ ಪ್ರಧಾನಿ ಮೋದಿಗೆ ಕಳುಹಿಸಿತ್ತು.
ಬಳಿಕ ಸುಪ್ರೀಂಕೋರ್ಟ್ ದೋಷಾರೋಪಣೆ, ಸಮಿತಿಯ ವಜಾಗೊಳಿಸುವ ಶಿಫಾರಸು ಪ್ರಶ್ನಿಸಿ ನ್ಯಾ.ವರ್ಮಾ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮ್ಮ ರಿಟ್ ಅರ್ಜಿಯಲ್ಲಿ, ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ಎಜಿ ಮಸಿಹ್ ಅವರ ದ್ವಿಸದಸ್ಯ ಪೀಠಕ್ಕೆ ತಮ್ಮನ್ನು ವಜಾಗೊಳಿಸಲು ಸಾಧ್ಯವಾಗದಿರಲು ಐದು ಕಾರಣಗಳನ್ನು ನೀಡಿದ್ದರು. ಜೊತೆಗೆ ಹಾಲಿ ನ್ಯಾಯಾಧೀಶರನ್ನು ತನಿಖೆ ಮಾಡಲು ಆಂತರಿಕ ಸಮಿತಿಯ ಅಧಿಕಾರ ವ್ಯಾಪ್ತಿ ಮತ್ತು ಅಧಿಕಾರದ ಕುರಿತಾದ ಪ್ರಶ್ನೆಗಳನ್ನು ಎತ್ತಿದ್ದರು.
ಆದ್ಯಾಗೂ ಜುಲೈ 30ರಂದು ವರ್ಮಾ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅವರ ನಡವಳಿಕೆ ವಿಶ್ವಾಸವನ್ನು ಹುಟ್ಟಿಸುವ ಆಗಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು. (ಏಜೆನ್ಸೀಸ್)