ನ್ಯೂಸ್

ಒಂದು ಕೋಟಿ ಗ್ರಾಹಕರಿಂದ ಗೃಹಜ್ಯೋತಿ ನೋಂದಣಿ! ಬೆಸ್ಕಾಂ ವಿಭಾಗವೇ ಮುಂದು…

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್​ ಎಲ್ಲರಿಗೂ 200 ಯೂನಿಟ್​ ವಿದ್ಯುತ್​ ಉಚಿತವಾಗಿ ನೀಡುವ ಭರವಸೆ ನೀಡಿತ್ತು.

ಈ ಯೋಜನೆಗೆ ಸಂಬಂಧಪಟ್ಟ ನೋಂದಣಿ ಕಾರ್ಯಕ್ಕೆ ಸರ್ಕಾರ ಜೂನ್​ 18ರಂದು ಅಧಿಕೃತವಾಗಿ ಚಾಲನೆ ನೀಡಿತ್ತು. ಇದೀಗ ಜುಲೈ 5ರವರೆಗೆ ಒಟ್ಟು ಒಂದು ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಜುಲೈ 5ರ ವರೆಗೆ 1 ಕೋಟಿ 20 ಸಾವಿರದ 163 ಮಂದಿಯಿಂದ ನೊಂದಣಿ ಮಾಡಿಸಿಕೊಂಡಿದ್ದು ಬೆಸ್ಕಾಂ ವಿಭಾಗದಲ್ಲೇ ಅತಿಹೆಚ್ಚು ಜನರು ನೊಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ ವಿದ್ಯುತ್​ ಮಾರಾಟಕ್ಕೆ ಸಂಬಂಧಪಟ್ಟಂತೆ ಒಟ್ಟು 6 ಸಂಸ್ಥೆಗಳಿದ್ದು ಅವುಗಳ ಪ್ರದೇಶದಲ್ಲಿ ಒಟ್ಟು ಎಷ್ಟು ಜನರು ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ:

  1. BESCOM -41,14,567
  2. CESC- 15,35,045
  3. GESCOM - 10,54,359
  4. HESCOM- 21,09,473
  5. HRECS -50,425
  6. MESCOM- 11,56,294