ನ್ಯೂಸ್

Metro ಕೇಬಲ್​ ಕಳ್ಳತನವಾಗಿ ರೈಲು ಸಂಚಾರ ವ್ಯತ್ಯಯ; ಅಮಿತ್​ ಷಾ ವಿರುದ್ಧ ಕೇಜ್ರಿವಾಲ್​ ವಾಗ್ದಾಳಿ

ನವದೆಹಲಿ: ದೆಹಲಿ ಮೆಟ್ರೋದ (Delhi Metro) ನೀಲಿ ಮಾರ್ಗದ ಕೇಬಲ್​ ಕಳ್ಳತನ ಮಾಡಿದ ಪರಿಣಾಮ ಕೆಲಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾದ ಘಟನೆ ನಡೆದಿದ್ದು, ದೆಹಲಿ ಮಾಜಿ ಸಿಎಂ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್​ ಕೇಜ್ರಿವಾಲ್​ ಕೇಂದ್ರ ಗೃಹಸಚಿವ ಅಮಿತ್​ ಷಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೋತಿ ನಗರ ಹಾಗೂ ಕೀರ್ತಿ ನಗರ ನಿಲ್ದಾಣಗಳ ನಡುವೆ ರೈಲು ಸಂಚರಿಸುವಾಗ ಈ ಘಟನೆ ನಡೆದಿದ್ದು, ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ಪ್ರಯಾಣಿಕರು ತೀವ್ರವಾಗಿ ಪರದಾಡಿದರು.

ಈ ಬಗ್ಗೆ ಮಾತನಾಡಿರುವ ದೆಹಲಿ ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು, ದ್ವಾರಕಾ ಪ್ರದೇಶವನ್ನು ವೈಶಾಲಿ ಜೊತೆ ಸಂಪರ್ಕಿಸುವ ಹಾಗೂ ನೊಯ್ಡಾ ಸಿಟಿ ಸೆಂಟರ್‌ಗೆ ಕೊಂಡಿಯಾಗಿರುವ ಈ ಮಾರ್ಗವು ದೆಹಲಿ ಮೆಟ್ರೋದಲ್ಲಿ ಅತ್ಯಂತ ಜನದಟ್ಟಣೆಯನ್ನು ಹೊಂದಿದೆ. ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಒಂದು ಲೇನ್‌ನಲ್ಲಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಗುರುವಾರ ಬೆಳಿಗ್ಗೆ ಎಂದಿನಂತೆಯೇ ಮೆಟ್ರೊ ರೈಲು ಸಂಚಾರ ಆರಂಭಗೊಂಡಿತ್ತು. ಆದರೆ ಮೋತಿ ನಗರ ಮತ್ತು ಕೀರ್ತಿ ನಗರ ನಡುವೆ ಸಿಗ್ನಲ್ ಕೇಬಲ್ ಕಳ್ಳತನವಾಗಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಈ ನಿಲ್ದಾಣಗಳ ನಡುವೆ ರೈಲು ಕಡಿಮೆ ವೇಗದಲ್ಲಿ ಸಂಚರಿಸುತ್ತದೆ. ಇದರಿಂದ ಪ್ರಯಾಣಿಕರು ಹೆಚ್ಚು ಹೊತ್ತು ಕಾಯಬೇಕಾಗುತ್ತದೆ. ಇದರಿಂದ ನಿಲ್ದಾಣ ಮತ್ತು ರೈಲಿನಲ್ಲಿ ಜನದಟ್ಟಣೆ ಹೆಚ್ಚಾಗಿತ್ತು ಎಂದು ದೆಹಲಿ ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಬಲ್​ ಕಳ್ಳತನಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿರುವ ದೆಹಲಿ ಮಾಜಿ ಸಿಎಂ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್​ ಕೇಜ್ರಿವಾಲ್​, ದೆಹಲಿಯ ಈ ನಕ್ಷೆ ನೋಡಿದರೆ ಅಮಿತ್​ ಷಾ ಅವರು ತಮ್ಮ ಮನೆಯ ವ್ಯಾಪ್ತಿಯಲ್ಲೂ ಭದ್ರತೆಯನ್ನು ಒದಗಿಸಲು ವಿಫಲರಾಗಿದ್ದಾರೆ ಎಂಬುದನ್ನು ತೋರುತ್ತದೆ. ಅಷ್ಟಕ್ಕೂ ಜನರು ಸುರಕ್ಷತೆಗಾಗಿ ಎಲ್ಲಿಗೆ ಹೋಗಬೇಕು? ಅಮಿತ್ ಶಾ ಜೀ, ದೆಹಲಿಯಲ್ಲಿ ಏನು ನಡೆಯುತ್ತಿದೆ? ದೆಹಲಿ ಮೆಟ್ರೋದ ಕೇಬಲ್​ ಕಳ್ಳತನವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಯಾವುದೂ ಸುರಕ್ಷಿತವಾಗಿಲ್ಲ  ಏನಾದರೂ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ. 

https://www.vijayavani.net/virat-kohli-india-dying-to-play-in-pakistan-shoaib-akhtars-strange-claim-amid-bcci-vs-pcb-champions-trophy-row

https://www.vijayavani.net/order-passed-to-stop-pushpa-2-screening-in-karnataka-i