ನ್ಯೂಸ್

ಬೈಬಲ್​ ಹೊಂದಿದ್ದ ಕಾರಣಕ್ಕೆ 2 ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಉತ್ತರ ಕೊರಿಯಾ!

ಉತ್ತರ ಕೊರಿಯಾ: ಕಳೆದ ಕೆಲವು ದಿನಗಳಿಂದ ಉತ್ತರ ಕೊರಿಯಾದಲ್ಲಿ ಕ್ರಿಶ್ಚಿಯನ್​ ಸಮುದಾಯದವರನ್ನು ಗುರಿಯಾಗಿಸಿ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಯುಎಸ್​ ಸ್ಟೇಟ್​ ಡಿಪಾರ್ಟ್​ಮೆಂಟ್​ ವರದಿಯಲ್ಲಿ ಬಯಲಾಗಿದೆ.

2022ರಲ್ಲಿ ಉತ್ತರ ಕೊರಿಯಾದಲ್ಲಿ ಸುಮಾರು 70,000 ಸಾವಿರಕ್ಕಿಂತ ಹೆಚ್ಚು ಕ್ರಿಶ್ಚಿಯನ್ನರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಬಂಧಿತರ ಪೈಕಿ ಎರಡು ವರ್ಷದ ಮಗು ಕೂಡ ಇದೆ ಎಂದು ತಿಳಿದು ಬಂದಿದೆ.

ಕ್ರಿಶ್ಚಿಯನ್​ ಸಮುದಾಯದ ಕುಟುಂಬಗಳು ಬೈಬಲ್​ ಹೊಂದಿರುವ ಕಾರಣಕ್ಕೆ ಮತ್ತು ಧಾರ್ಮಿಕ ಆಚರಣೆಯ ಸಂಬಂಧ ಅವರನ್ನು ಬಂಧಿಸಲಾಗುತ್ತಿದೆ. ಶಾಮನಿಕ್ ಅನುಯಾಯಿಗಳು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಪ್ರತಿನಿತ್ಯ ಹಲ್ಲೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕಿರುಕುಳವನ್ನು ನೀಡಲಾಗುವುದು

ಇದೀಗ ಪ್ರಕರಣ ಒಂದರಲ್ಲಿ 2ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆಯನ್ನು ಉತ್ತರ ಕೊರಿಯಾ ಸರ್ಕಾರ ವಿಧಿಸಿದೆ. ಬಾಲಕನ ಪೋಷಕರು ಮನೆಯಲ್ಲಿ ಬೈಬಲ್​ ಹೊಂದಿದ್ದರು ಎಂಬ ಕಾರಣಕ್ಕೆ ಅವರನ್ನು ಗಲ್ಲಿಗೇರಿಸಲಾಗಿದ್ದು ಆತನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಸರ್ಕಾರವು ಧಾರ್ಮಿಕ ಆಚರಣೆಯಲ್ಲಿ ತೊಡಗಿರುವ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿರುವವರಿಗೆ ಕಿರುಕುಳವನ್ನು ನೀಡಲಾಗುವುದು ಎಂದು ತಿಳಿಸಿದೆ.

ಕಿರುಕುಳಕ್ಕೊಳಗಾದ ವ್ಯಕ್ತಿಗಳನ್ನು ಬಂಧಿಸಿ ಕೆಲಸ ಮಾಡಲು ಹೇಳಬಹುದು, ಚಿತ್ರಹಿಂಸೆ, ಹಡಿಙಆರು ಅಥವಾ ಅಂತಹವರನ್ನು ಲೈಂಗಿಕ ದೌರ್ಜನ್ಯ ಎಸಗಬಹುದು ಎಂದು ಅಲ್ಲಿನ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.