ಭಾರತ ಹೊರತುಪಡಿಸಿ ಅಮೆರಿಕ ಯೂರೋಪ್ ರಾಷ್ಟ್ರಗಳಲ್ಲಿ ಗೋಚರಿಸುವ ಸೂರ್ಯಗ್ರಹಣವು ಬಹಳ ಕಡಿಮೆ ಅವಧಿಯದ್ದಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಶನಿವಾರ ರಾತ್ರಿ 11.29ರಿಂದ ಗ್ರಹಣ ಸಂಭವಿಸಲಿದೆ. ಭಾರತಕ್ಕೆ ಈ ಗ್ರಹಣದಿಂದ ಯಾವುದೇ ದೋಷವಿಲ್ಲ. ಆಚರಣೆಯ ಅಗತ್ಯವೂ ಇಲ್ಲ. ಗ್ರಹಣ ಗೋಚರಿಸುವ ರಾಷ್ಟ್ರಗಳಿಗೆ ಸೀಮಿತವಾಗಿ ಫಲಗಳು ನಿರ್ಣಯವಾಗುತ್ತದೆ. ಸಾಮಾನ್ಯವಾಗಿ ಬೇರೆ ರಾಷ್ಟ್ರಗಳಲ್ಲಿ ಗೋಚರಿಸುವ ಗ್ರಹಣಗಳಿಂದ ತಕ್ಕಮಟ್ಟಿನ ಪ್ರಭಾವ ಇತರೆ ದೇಶದ ಮೇಲೂ ಇರುವುದರಿಂದ ತಕ್ಕಮಟ್ಟಿನ ಯುದ್ಧಭಯ, ಆಹಾರದ ಕೊರತೆ, ಅಗ್ನಿಭೀತಿ ಮತ್ತು ಪ್ರಜೆಗಳಲ್ಲಿ ಅಶಾಂತಿ ತಲೆದೋರುವ ಸಾಧ್ಯತೆ ಕಂಡುಬರುತ್ತಿದೆ ಎಂದು ಅವರು ಹೇಳಿದ್ದಾರೆ.
ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಜಲಪ್ರಳಯ ಮತ್ತು ಭೂಮಿ ನಡುಗುವ (ಭೂಕಂಪ) ಸಾಧ್ಯತೆಯಿದ್ದು, ವಿಜ್ಞಾನಿಗಳು ಕೂಡ ಈ ಮುನ್ನೆಚ್ಚರಿಕೆ ನೀಡಿದ್ದಾರೆ. ಅ.14ರ ಸೂರ್ಯಗ್ರಹಣದ ದಿನ ಮಹಾಲಯ ಅಮಾವಾಸ್ಯೆ ಇರುವುದರಿಂದ ಪಿತೃತರ್ಪಣಾದಿ ಪೂಜೆಗಳ ಜತೆಗೆ ಜಗತ್ತಿಗೆ ಗ್ರಹಣದ ಹಾನಿಯಾಗದಂತೆ ದೇವರ ಪ್ರಾರ್ಥನೆ ಮಾಡಬೇಕು. ಹಾಗೂ ಅ.15ರಿಂದ ನವರಾತ್ರಿ ಆರಂಭವಾಗಲಿದ್ದು, ಆದಿಶಕ್ತಿ ಚಾಮುಂಡೇಶ್ವರಿ ಪ್ರಾರ್ಥನೆ ಮಾಡುವುದರಿಂದ ವಿಶ್ವಶಾಂತಿ ಸಾಧ್ಯ ಎಂದು ವಿವರಿಸಿರುವ ಅವರು, ಕೆಲವರು ಗ್ರಹಣದ ಹೆಸರಿನಲ್ಲಿ ಭಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಭಾರತೀಯರು ಗ್ರಹಣದ ಬಗ್ಗೆ ಭಯಪಡುವ ಅಥವಾ ಗ್ರಹಣದೋಷ ನಿವಾರಣೆಗಾಗಿ ಪ್ರತ್ಯೇಕ ಪೂಜೆಗಳನ್ನು ಮಾಡಿಸುವ ಅಗತ್ಯವಿಲ್ಲ. ನಿಮ್ಮ ಮನೆಗುರುಗಳ ಸ್ಮರಣೆ, ಗಾಯತ್ರಿ ಮಂತ್ರ ಜಪ, ಮಾತಾ-ಪಿತೃಗಳಿಗೆ ನಮಿಸುವುದೇ ಪರಿಹಾರವೆಂದು ಸಲಹೆ ನೀಡಿದ್ದಾರೆ.