More

    ಹಮಾಸ್ ದಾಳಿ: ಇದು ಬರ್ಬರ ಕ್ರೌರ್ಯದ ಅಬ್ಬರ; ದುರ್ಬಲ ಹೃದಯದವರು ಈ ಲಿಂಕ್ ತೆರೆಯಬೇಡಿ!

    ನವದೆಹಲಿ: ಹಮಾಸ್ ಉಗ್ರರ ಭೀಕರ ದಾಳಿಗೆ ತುತ್ತಾಗಿರುವ ಇಸ್ರೇಲ್​ ಕಳೆದ ಐದೂ ದಿನಗಳಿಂದ ರಣಾಂಗಣವಾಗಿದ್ದು, ಸದ್ಯಕ್ಕೆ ಪರಿಸ್ಥಿತಿ ಶಾಂತವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಏಟಿಗೆ ಎದಿರೇಟು, ಪ್ರತೀಕಾರ ಎಂದು ಎರಡೂ ಕಡೆಗಳಿಂದ ಗುಂಡಿನ ಮಳೆಯಾಗುತ್ತಿದ್ದು, ಸಾಲು ಸಾಲಾಗಿ ಹೆಣಗಳು ಬೀಳುತ್ತಿವೆ.

    ಹಮಾಸ್​ ಉಗ್ರರ ಭೀಕರ ದಾಳಿ, ರಕ್ತದಾಹ, ಹೆಣಗಳ ಹಪಾಹಪಿಗೆ ಅಲ್ಲಿನ ಜನತೆ ನಲುಗಿ ಹೋಗಿದ್ದು, ಅವರದ್ದು ಬರೀ ಭಯೋತ್ಪಾನೆಯಲ್ಲ, ಬರ್ಬರ ಕ್ರೌರ್ಯದ ಅಬ್ಬರ ಎಂಬುದನ್ನು ಅಲ್ಲಿನ ಸನ್ನಿವೇಶಗಳು, ಚಿತ್ರಣಗಳು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ-ವಿಡಿಯೋಗಳು ಹೇಳುತ್ತಿವೆ.

    ಹಮಾಸ್ ಉಗ್ರರ ಭೀಕರತೆ ಹೇಗಿತ್ತು, ಅವರ ವರ್ತನೆ ಅದೆಷ್ಟು ಭೀಭತ್ಸವಾಗಿತ್ತು ಎಂಬುದನ್ನು ಅಲ್ಲಿನ ಜನರೇ ಹೇಳಿಕೊಂಡಿರುವ ಸಂಗತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮಾತ್ರವಲ್ಲ, ಇಸ್ರೇಲ್​ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೇ ಇಂದು ಯುಎಸ್ ಸೆಕ್ರೆಟರಿ ಆಫ್ ಸ್ಟೇಟ್ ಆ್ಯಂಟನಿ ಬ್ಲಿಂಕೆನ್ ಅವರಿಗೆ ತಿಳಿಸಿದ್ದಾರೆ.

    ಇದು ಹಮಾಸ್ ರಕ್ಕಸರು ಕೊಂದ, ಸುಟ್ಟುಹಾಕಿದ ಮಕ್ಕಳ ಭಯಾನಕ ಫೋಟೋಗಳು ಎಂಬುದಾಗಿ ಮಕ್ಕಳ ಶವ, ಕರಕಲು ಮೃತದೇಹಗಳನ್ನು ಇಸ್ರೇಲ್ ಪ್ರಧಾನಿಯ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಹಂಚಿಕೊಳ್ಳಲಾಗಿದೆ. ಹಮಾಸ್ ಅಮಾನವೀಯ, ಹಮಾಸ್ ಎಂದರೆ ಐಸಿಸ್ ಎಂದೂ ಹೇಳಲಾಗಿದೆ.

    ಹಮಾಸ್ ದಾಳಿ: ಇದು ಬರ್ಬರ ಕ್ರೌರ್ಯದ ಅಬ್ಬರ; ದುರ್ಬಲ ಹೃದಯದವರು ಈ ಲಿಂಕ್ ತೆರೆಯಬೇಡಿ!

    https://x.com/IsraeliPM/status/1712471782303867144?s=20

    ಅದೆಷ್ಟೋ ಮಕ್ಕಳ ಶಿರಚ್ಛೇದನ, ಅಪಹರಣ, ಯುವತಿಯರನ್ನು ಒತ್ತೆಯಾಳಾಗಿಸಿ ಅತ್ಯಾಚಾರ, ಹಿರಿಯ ನಾಗರಿಕರು ಎಂಬುದನ್ನೂ ನೋಡದೆ ಹಿಂಸಾಚಾರ ಕೊಲೆ ಮಾಡಿರುವ ಹಮಾಸ್ ಉಗ್ರರ ಕ್ರೌರ್ಯವನ್ನು ಇಸ್ರೇಲ್ ಒಂದೊಂದಾಗಿ ಸೋಷಿಯಲ್ ಮೀಡಿಯಾ ಮೂಲಕ ಜಗತ್ತಿನ ಮುಂದೆ ಅನಾವರಣ ಮಾಡಲಾರಂಭಿಸಿದೆ. ಅಲ್ಲದೆ ಇಂಥ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳಲು ಮನಸಿಲ್ಲದ್ದಿದ್ದರೂ ಏನಾಗಿದೆ ಎಂದು ಜಗತ್ತಿಗೆ ತಿಳಿಸಲಿಕ್ಕಾದರೂ ಹಂಚಿಕೊಳ್ಳಲೇಬೇಕಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.

    ಮಾಯಾ, ಎಲಿರನ್ ಎಂಬ ಇನ್ನೇನು ಮದುವೆ ನಿಶ್ಚಯವಾಗಿದ್ದ ಯುವ ಜೋಡಿಯನ್ನು ಹಮಾಸ್ ಉಗ್ರರು ಅಕ್ಕಪಕ್ಕದಲ್ಲೇ ಹೂತು ಹಾಕಿದ್ದಾರೆ. ಮಕ್ಕಳು ಉಗ್ರರಿಗೆ ಹೆದರಿಗೆ ಮನೆಯವರಿಗೆ ಕರೆ ಮಾಡಿ ಹೇಳುತ್ತಿದ್ದಾಗಲೇ ಗುಂಡಿಕ್ಕಿದ್ದಾರೆ. ಅವರ ಭೀಕರ ಕ್ರೌರ್ಯಕ್ಕೆ ಉದಾಹರಣೆ ಆಗಿ ಇಂಥ ಲೆಕ್ಕಕ್ಕೆ ಸಿಗದಷ್ಟು ಪ್ರಕರಣಗಳಿಗೆ ಇಸ್ರೇಲ್ ಸಾಕ್ಷಿಯಾಗಿದೆ.

    ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts