ನ್ಯೂಸ್

ಜಗದೀಪ್​ ಧನಕರ್​ ವಿರುದ್ಧ ರಾಜ್ಯಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ! | Rajya Sabha

ನವದೆಹಲಿ: ರಾಜ್ಯಸಭಾ(Rajya Sabha) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಜಗದೀಪ್​ ಧನಕರ್​ ಅವರು ವಿರೋಧ ಪಕ್ಷದ ಸಂಸದರ ಜತೆ ಆಗಾಗ್ಗೆ ಘರ್ಷಣೆ ನಡೆಸುತ್ತಿದ್ದಾರೆ ಎಂಬ ಆರೋಪ ಉಲ್ಲೇಖಿಸಿ ಇಂಡಿಯಾ ಮೈತ್ರಿಕೂಟ ಸಂಸದರು ಧನಕರ್​ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ.

ಈ ಮಂಡನೆಯ ಪ್ರಸ್ತಾವನೆಯೂ ವಿವಿಧ ಬಣದ 70 ನಾಯಕರಿಂದ ಸಹಿಗಳನ್ನು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್(ಟಿಎಂಸಿ), ಆಮ್​ ಆದ್ಮಿ ಪಾರ್ಟಿ(ಎಎಪಿ), ಸಮಾಜವಾದಿ ಪಾರ್ಟಿ(ಎಸ್​ಪಿ) ಸೇರಿ ಇತರ ಮೈತ್ರಿ ಕೂಟದ ಅಭ್ಯರ್ಥಿಗಳು ಈ ಪ್ರಸ್ತಾಪವನ್ನು ಮುಂದುವರೆಸುವ ನಿರ್ಧಾರದಲ್ಲಿ ಒಗ್ಗೂಡಿದ್ದಾರೆ ಎಂದು ಹೇಳಲಾಗಿದೆ.

ಇಂಡಿಯಾ ಮೈತ್ರಿಕೂಟದ ಸದಸ್ಯರು ಮತ್ತು ಆಡಳಿತ ಪಕ್ಷದವರ ನಡುವೆ ಅಗಾಗ್ಗೆ ಪಕ್ಷಪಾತ ಮಾಡುತ್ತಿದ್ದಾರೆ ವಿರೋಧ ಪಕ್ಷವರು ಜಗದೀಪ್​ ಧನಕರ್​ ವಿರುದ್ಧ ಆರೋಪಿಸುತ್ತಿದ್ದಾರೆ. ನಮ್ಮ ಭಾಷಣಗಳಿಗೆ ಸದಸನದಲ್ಲಿ (ಮೇಲ್ಮನೆ) ಅಡ್ಡಿಪಡಿಸುತ್ತಿದ್ದಾರೆ. ನಿರ್ಣಯಕ ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆಗೆ ಅವಕಾಶ ಕೊಡುವುದಿಲ್ಲ. ಅಲ್ಲದೇ, ವಿವಾದತ್ಮಾಕ ಚರ್ಚೆಗಳಲ್ಲಿ ಆಡಳಿತ ಪಕ್ಷದ ಪರ ಇರುತ್ತಾರೆ ಎಂದು ಇಂಡಿಯಾ ನಾಯಕರು ಆರೋಪಿಸಿದ್ದಾರೆ,(ಏಜೆನ್ಸೀಸ್​).