ನ್ಯೂಸ್

VIDEO| ನಿತ್ಯಾ ಮೆನನ್ ಲೆಸ್ಬಿಯನ್​ ಲಿಪ್​ಲಾಕ್​ ವಿಡಿಯೋ ವೈರಲ್!

ಮುಂಬೈ: ಮೈನಾ ಹಾಗೂ ಕೋಟಿಗೊಬ್ಬ-2 ಚಿತ್ರದಿಂದ ಕನ್ನಡಿಗರ ಮನಗೆದ್ದಿರುವ ನಟಿ ನಿತ್ಯಾ ಮೆನನ್ ಅವರ ವೆಬ್​ ಸೀರಿಸ್​ ಚಿತ್ರದ ವಿಡಿಯೋವೊಂದು ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.​

ನಟ ಅಭಿಷೇಕ್​ ಬಚ್ಚನ್​ ಅಭಿನಯದ "ಬ್ರೀಥ್​​ ಇನ್​ಟೂ ದಿ ಶ್ಯಾಡೋಸ್​" ವೆಬ್​ಸೀರಿಸ್​ನಲ್ಲಿ ನಿತ್ಯಾ ಮೆನನ್​ ಸಹ ನಾಯಕಿಯಾಗಿದ್ದಾರೆ. ಇತ್ತೀಚೆಗಷ್ಟೇ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಬಿಡುಗಡೆಯಾಗಿದ್ದು, ಒಳ್ಳೆಯ ರೆಸ್ಪಾನ್ಸ್​ ಗಿಟ್ಟಿಸಿಕೊಳ್ಳುತ್ತಿದೆ.

ಇದೇ ಚಿತ್ರ ಇದೀಗ ಇನ್ನೊಂದು ವಿಚಾರಕ್ಕೆ ಸುದ್ದಿಯಾಗಿದೆ. ಚಿತ್ರದಲ್ಲಿ ಲೆಸ್ಬಿಯನ್​ ಕಿಸ್ಸಿಂಗ್​ ದೃಶ್ಯವಿದ್ದು, ನಿತ್ಯಾ ಮೆನನ್​ ಹಾಗೂ ಶ್ರುತಿ ಬಾಪ್ನಾ ಲಿಪ್​ಲಾಕ್​ ಮಾಡಿದ್ದಾರೆ. ಚಿತ್ರ ಬಿಡುಗಡೆಯ ಬೆನ್ನಲ್ಲೇ ವಿಡಿಯೋ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದೇ ಮೊದಲೇನಲ್ಲ

ಇದಕ್ಕೂ ಮೊದಲೇ ನಿತ್ಯಾ ಅವರು "AWE" ತೆಲುಗು ಚಿತ್ರದಲ್ಲಿ ಲೆಸ್ಬಿಯನ್​ ಆಗಿ ನಟಿಸಿದ್ದರು. ಈ ಚಿತ್ರದಲ್ಲಿ ನಟಿ ಈಶಾ ರೆಬಾರೊಂದಿಗೆ ಲಿಪ್​ಲಾಕ್​ ಮಾಡಿದ್ದರು.

ಇನ್ನು ಬ್ರೀಥ್​​ ಇನ್​ಟೂ ದಿ ಶ್ಯಾಡೋಸ್​ ವೆಬ್​ ಸೀರಿಸ್ ವಿಚಾರಕ್ಕೆ ಬರುವುದಾದರೆ, ಇದೊಂದು ಸೈಕಾಲಜಿಕಲ್​ ಥ್ರಿಲ್ಲರ್​ ಸ್ಟೋರಿ ಆಗಿದೆ. ಚಿತ್ರದುದ್ದಕ್ಕೂ ಇರುವ ಸಸ್ಪೆನ್ಸ್​ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. (ಏಜೆನ್ಸೀಸ್​)​