ಲಾಕ್​ಡೌನ್​ ಎಫೆಕ್ಟ್​: ಮಾಡೆಲಿಂಗ್​ ಬಿಟ್ಟು ಕೃಷಿಗೆ ಸೈ ಎಂದ ಮಿಸ್ಟರ್​ ಏಷ್ಯಾ ಖ್ಯಾತಿಯ ನಾಗೇಶ್​!

Mister Asia
Published on

ಮೈಸೂರು: ಮಾಡಲಿಂಗ್​ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ನಾಗೇಶ್​ ಇದೀಗ ಕೃಷಿಕನಾಗಿ ಜಮೀನಿಗೆ ಇಳಿದಿದ್ದಾರೆ.

ಮಿಸ್ಟರ್ ಏಷ್ಯಾ ಎಂಬ ಕೀರ್ತಿ ಗಳಿಸಿದ್ದ ಮಾಡಲ್ ನಾಗೇಶ್​ ಅವರು ಇದೀಗ ಚೆಂಡಯ ಹೂವು ಬೆಳೆಯುವ ರೈತನಾಗಿದ್ದಾರೆ. ಮೂಲತಃ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ನಿವಾಸಿಯಾಗಿರುವ ನಾಗೇಶ್​, ಮಾಡಲಿಂಗ್​ನಲ್ಲಿ ಖ್ಯಾತಿ ಗಳಿಸಿದ್ದಾರೆ.

ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದರು. ಹಲವು ಕಡೆ ತೀರ್ಪುಗಾರನಾಗಿಯೂ ಕೆಲಸ ಮಾಡಿದ್ದಾರೆ. ಲಾಕ್‌ಡೌನ್ ಪರಿಣಾಮ ಫ್ಯಾಷನ್ ಶೋ ಅಥವಾ ಬೇರಾವುದೇ ಈವೆಂಟ್ ಇಲ್ಲದಿರುವುದರಿಂದ ಹುಟ್ಟೂರಿಗೆ ಬಂದು ತಂದೆಗೆ ನೆರವಾಗಿದ್ದಾರೆ.

ತಮ್ಮ ತೋಟದಲ್ಲಿ ನಾಗೇಶ್​ ಅವರು ಚಂಡು ಹೂವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಅವರ ಫೋಟೋಗಳು ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net