ನ್ಯೂಸ್

11 ದಿನಗಳ ಹಿಂದೆ ಪತನಗೊಂಡ ನೌಕಾ ವಿಮಾನದ ಪೈಲಟ್​ ಮೃತ ದೇಹ ಪತ್ತೆ; ಸಮುದ್ರದ ಆಳದಲ್ಲಿತ್ತು ದೇಹ

Mandara

ನವದೆಹಲಿ: ಇಂದಿಗೆ ಸರಿಯಾಗಿ 11 ದಿನಗಳ ಹಿಂದೆ ಅಂದರೆ ನವೆಂಬರ್​ 26ರಂದು ಪತನಗೊಂಡಿದ್ದ ಮಿಗ್​ 29 ನೌಕಾ ವಿಮಾನದ ಪೈಲಟ್​ನ ಮೃತದೇಹ ಕೊನೆಗೂ ಪತ್ತೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ವಿಮಾನ ಅಪಘಾತವಾಗಿದ್ದು, ಸಮುದ್ರದಲ್ಲಿ 70 ಮೀಟರ್​ ಆಳದಲ್ಲಿ ಮೃತದೇಹ ಪತ್ತೆಯಾಗಿದೆ.

ನವೆಂಬರ್ 26ರಂದು ಐಎನ್ಎಸ್ ವಿಕ್ರಮಾದಿತ್ಯ ನೌಕೆಯಿಂದ ಹಾರಿದ್ದ ಮಿಗ್ ವಿಮಾನ ಸಂಜೆ 5 ಗಂಟೆಯ ಹೊತ್ತಿಗೆ ಅರಬ್ಬಿ ಸಮುದ್ರದ ಮೇಲ್ಭಾಗದಲ್ಲಿ ಪತನಗೊಂಡಿತ್ತು. ಆ ವಿಮಾನದಲ್ಲಿ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಹಾಗೂ ಅವರ ಸಹ ಪೈಲಟ್​ ಇದ್ದರು. ವಿಮಾನ ಪತನಗೊಳ್ಳುವುದಕ್ಕೂ ಮೊದಲೇ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಸಹ ಪೈಲಟ್​ ಹೊರಗೆ ಹಾರಿದ್ದರು. ಅವರನ್ನು ರಕ್ಷಿಸಲಾಗಿತ್ತು. ಅವರ ಬೆನ್ನಲ್ಲೇ ನಿಶಾಂತ್​ ಅವರೂ ಹಾಡಿದ್ದರಾದರೂ ಅವರ ದೇಹ ಪತ್ತೆಯಾಗಿರಲಿಲ್ಲ. ಇದೀಗ ಗೋವಾದ ಕರಾವಳಿಯಿಂದ ಸುಮಾರು 30 ಮೈಲು ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಹನ್ಸಾ ನೌಕಾಪಡೆ ನೆಲೆಯಿಂದ 50 ಕಿಮೀ ದೂರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದವು.

ಕಳೆದ ಎರಡು ವರ್ಷದಲ್ಲಿ ಪತನಗೊಂಡಿರುವ ನಾಲ್ಕನೇ ಮಿಗ್-29ಕೆ ವಿಮಾನ ಇದಾಗಿದೆ. (ಏಜೆನ್ಸೀಸ್​)