ಹೊಸದಿಲ್ಲಿ: ಇಂದು ಹೊಸ ಸಂಸತ್ತಿನಲ್ಲಿ ನಡೆದ ಮಧ್ಯಂತರ ಬಜೆಟ್ 2024 ಅನ್ನು ಅತ್ಯಂತ ಕಡಿಮೆ ಅವಧಿಯೊಳಗೆ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇವಲ 58 ನಿಮಿಷಗಳಲ್ಲಿ ಈ ಬಾರಿಯ ಬಜೆಟ್ ಮಂಡಿಸಿದ್ದಾರೆ. ಈ ಮೂಲಕ ಬಜೆಟ್ ಭಾಷಣದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ ಹಣಕಾಸು ಸಚಿವೆ, ಈ ಹಿಂದಿನ ವರ್ಷಗಳಲ್ಲಿ ಎಷ್ಟು ಅವಧಿಯಲ್ಲಿ ಬಜೆಟ್ ಮಂಡಿಸಿದ್ದಾರೆ ಎಂಬುದರ ಕಂಪ್ಲೀಟ್ ವಿವರ ಇಲ್ಲಿದೆ ಗಮನಿಸಿ.
ಗುರುವಾರ ಸಂಸತ್ತಿನಲ್ಲಿ 2024-25ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ ಹಣಕಾಸು ಸಚಿವರು 58 ನಿಮಿಷಗಳ ಭಾಷಣ ಮುಗಿಸಿ ಎಲ್ಲರಿಗೂ ಶಾಕ್ ನೀಡಿದರು. ಬೆಳಗ್ಗೆ 11 ಗಂಟೆಗೆ ತಮ್ಮ ಭಾಷಣ ಪ್ರಾರಂಭಿಸಿದ ಸಚಿವರು 11:58ಕ್ಕೆ ಸರಿಯಾಗಿ ಅಂತ್ಯಗೊಳಿಸಿದರು. ಈ ಮೂಲಕ ದಾಖಲೆ ನಿರ್ಮಿಸಿದ ನಿರ್ಮಲಾ ಸೀತಾರಾಮನ್, ಇಂದು ತಮ್ಮ ಆರನೇ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದರು.
ಪ್ರಧಾನಿ ಮೋದಿ ಅವರ ಎರಡನೇ ಅವಧಿಯ ಕೊನೆಯ ಬಜೆಟ್ ಇದಾಗಿದ್ದು, 17ನೇ ಲೋಕಸಭೆಯ ಅಧಿಕಾರಾವಧಿಯು ಜೂನ್ 16, 2024 ರಂದು ಕೊನೆಗೊಳ್ಳಲಿದೆ ಮತ್ತು 2024ರ ಲೋಕಸಭಾ ಚುನಾವಣೆಯು ಈ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿದೆ ಎಂಬುದು ವರದಿ. ಇಲ್ಲಿಯವರೆಗೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಅಷ್ಟು ಬಜೆಟ್ ಭಾಷಣದ ದಾಖಲೆಯ ವಿವರ ಹೀಗಿದೆ.
2024: 58 ನಿಮಿಷ
2023: 1 ಗಂಟೆ 27 ನಿಮಿಷ
2022: 1 ಗಂಟೆ 30 ನಿಮಿಷ
2021: 1 ಗಂಟೆ 50 ನಿಮಿಷ
2020: 2 ಗಂಟೆ 42 ನಿಮಿಷ
2019: 2 ಗಂಟೆ 15 ನಿಮಿಷ