Nikki Haley: ಕಳೆದ ಕೆಲವು ದಿನಗಳಿಂದ ಭಾರತದ ವಿರುದ್ಧ ಕಿಡಿಕಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುಂಕದ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡಿರುವುದು ಸಷ್ಟವಾಗಿದೆ. ಈಗಾಗಲೇ ವಿಧಿಸಿರುವ ಶೇ.25ರಷ್ಟು ಸುಂಕದ ಮೇಲೂ ಇನ್ನಷ್ಟು ಹೊರೆಯನ್ನು ಹೊರಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷರ ಈ ಮಾತಿಗೆ ಕಿಡಿಕಾರಿರುವ ಭಾರತೀಯ ಮೂಲದ ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲಿ, ಸದ್ಯ ಭಾರೀ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ ಜೋ ರೂಟ್ ಮೈಲಿಗಲ್ಲು! ವಿಶ್ವ ದಾಖಲೆ ಮುರಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ | Joe Root
ಭಾರತ ವಿರುದ್ಧ ಟ್ರಂಪ್ ಆಡಿರುವ ಮಾತಿಗೆ ಸಿಟ್ಟಾಗಿರುವ ನಿಕ್ಕಿ ಹ್ಯಾಲಿ, "ಭಾರತದಂತಹ ಪ್ರಬಲ ಮಿತ್ರ ರಾಷ್ಟ್ರದೊಂದಿಗಿನ ಒಳ್ಳೆಯ ಸಂಬಂಧವನ್ನು ಅಮೆರಿಕ ಈ ರೀತಿ ಹಾಳು ಮಾಡಿಕೊಳ್ಳಬಾರದು. ಭಾರತ ರಷ್ಯಾದಿಂದ ತೈಲ ಖರೀದಿಸಬಾರದು ಓಕೆ. ಆದರೆ, ಚೀನಾ ಅದನ್ನು ಮಾಡಬಹುದೇ?". ರಷ್ಯಾ ಮತ್ತು ಇರಾನ್‌ನಿಂದ ಚೀನಾ ಅತಿ ಹೆಚ್ಚು ಇಂಧನವನ್ನು ಖರೀದಿಸುತ್ತದೆ ಮತ್ತು ಅಂತಹ ದೇಶಕ್ಕೆ ಸುಂಕಗಳಿಂದ 90 ದಿನಗಳ ವಿನಾಯಿತಿ ಕೊಡಲಾಗಿದೆ ಏಕೆ?" ಎಂದು ಟ್ರಂಪ್ ಆಡಳಿತವನ್ನು ಟೀಕಿಸಿದ್ದಾರೆ.
“ಭಾರತ ಉತ್ತಮ ವ್ಯಾಪಾರ ಪಾಲುದಾರನಲ್ಲ. ಅವರು ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡುತ್ತಾರೆ. ಆದರೆ, ನಾವು ಅವರೊಂದಿಗೆ ಹೆಚ್ಚು ವ್ಯವಹಾರ ಮಾಡೋದಿಲ್ಲ. ಹೀಗಾಗಿಯೇ, ಶೇ.25ರಷ್ಟು ಸುಂಕ ವಿಧಿಸುವುದಾಗಿ ನಿರ್ಧರಿಸಿದೆವು. ಆದರೆ, ಈಗ ಅದನ್ನು ಇನ್ನಷ್ಟು ಹೆಚ್ಚಿಸಲಿದ್ದೇವೆ. ಕಾರಣ, ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಈ ಮೂಲಕ ದೇಶ, ಯುಕ್ರೇನ್ ಮತ್ತು ರಷ್ಯಾ ಯುದ್ಧಕ್ಕೆ ಇಂಧನ ತುಂಬುತ್ತಿದೆ” ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ:ಬ್ಯಾಂಕ್ ಖಾತೆದಾರ, ನಾಮಿನಿ ಇಬ್ಬರೂ ಮೃತಪಟ್ಟರೆ ಹಣ ಯಾರ ಪಾಲು? ನಿಯಮ ಹೇಳುವುದೇನು? ಇಲ್ಲಿದೆ ಮಾಹಿತಿ | Bank
ರಷ್ಯಾ ಮೇಲಿನ ಕೋಪವನ್ನು ಭಾರತದ ಮೇಲೆ ತೋರಿಸುತ್ತಿರುವ ಟ್ರಂಪ್, ದೇಶವು ರಷ್ಯಾದಿಂದ ತೈಲ ಖರೀದಿಸುತ್ತಿದೆ ಎಂಬ ಒಂದೇ ಒಂದು ಕಾರಣಕ್ಕೆ ಹೆಚ್ಚುವರಿ ಸುಂಕವನ್ನು ವಿಧಿಸುವುದಾಗಿ ಹೇಳಿದ್ದಾರೆ. ಇದನ್ನೇ ಬಲವಾಗಿ ಪ್ರಶ್ನಿಸಿರುವ ಭಾರತ, ‘ರಷ್ಯಾ ವಿರುದ್ಧ ಕಿಡಿಕಾರುತ್ತಿರುವ ಅಮೆರಿಕ, ಅದೇ ರಷ್ಯಾದೊಂದಿಗೆ ಇಂದಿಗೂ ವ್ಯಾಪಾರ ಮಾಡುತ್ತಿರುವುದು ಏಕೆ? ವ್ಯವಹಾರ ನಡೆಸುತ್ತಿರುವ ಕಾರಣವೇನು?’ ಎಂದಿದೆ.
ಪರಮಾಣು ಉದ್ಯಮ, ಇವಿ ವಾಹನ ಮತ್ತು ರಸಗೊಬ್ಬರ ಉತ್ಪಾದನೆಗೆ ರಷ್ಯಾದಿಂದ ಹಲವಾರು ವಸ್ತುಗಳನ್ನು ಅಮೆರಿಕ ಆಮದು ಮಾಡಿಕೊಳ್ಳುತ್ತಿರುವುದೇಕೆ? ಎಂದು ಭಾರತ ಪ್ರಶ್ನಿಸಿದೆ. ಮತ್ತೊಂದೆಡೆ, ಅಮೆರಿಕದ ನಿಲುವಿನಿಂದ ರಷ್ಯಾ ಕೂಡ ಕಿಡಿಕಾರಿದೆ. ಭಾರತದ ಮೇಲೆ ವ್ಯಾಪಾರ ಒತ್ತಡ ಏರುತ್ತಿರುವುದು ಸರಿಯಲ್ಲ. ಸಾರ್ವಭೌಮ ರಾಷ್ಟ್ರಗಳು ತಮ್ಮದೇ ಆದ ವ್ಯಾಪಾರ ಪಾಲುದಾರರನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿವೆ ಎಂದು ರಷ್ಯಾ ಟ್ರಂಪ್ ದೇಶದ ವಿರುದ್ಧ ಗುಡುಗಿದೆ,(ಏಜೆನ್ಸೀಸ್).