ನ್ಯೂಸ್

ಹುಟ್ಟಿದ ಮೂರುಗಂಟೆಯಲ್ಲೇ ಕೊವಿಡ್​- 19 ಸೋಂಕಿನಿಂದ ಮೃತಪಟ್ಟ ಶಿಶು; ಅಂತ್ಯಕ್ರಿಯೆಗೆ ಅಪ್ಪನೂ ಬರಲಿಲ್ಲ

ಬೆಂಗಳೂರು: ಇದೊಂದು ಮನಮಿಡಿಯುವ ಸುದ್ದಿ. ಕರೊನಾ ಸೋಂಕು ಈಗಾಗಲೇ ಹಲವು ಮಂದಿಯನ್ನು ಬಲಿಪಡೆದಿದೆ. ಆದರೆ ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಕರೊನಾ ಸೋಂಕಿನಿಂದ ಮೃತಪಟ್ಟಿದ್ದು, ಅದನ್ನು ಅಂತ್ಯಸಂಸ್ಕಾರಕ್ಕೆಂದು ಆಸ್ಪತ್ರೆ ಸಿಬ್ಬಂದಿ ಕರೆದೊಯ್ಯುವ ದೃಶ್ಯ ನೋಡಿದರೆ ಎಂಥವರಿಗಾದರೂ ಕರುಳು ಕಿವಿಚಿದಂತೆ ಆಗುತ್ತದೆ.

ದೊಡ್ಡಬಳ್ಳಾಪುರ ಮೂಲದ ದಂಪತಿಯ ಮಗು ಇದಾಗಿತ್ತು. ಜನಿಸಿ ಮೂರ್ನಾಲ್ಕು ಗಂಟೆಯಲ್ಲೇ ಕರೊನಾದಿಂದ ಈ ಪುಟ್ಟ ಕಂದ ಮೃತಪಟ್ಟಿದೆ.

ಕೊವಿಡ್​-19 ಸೋಂಕಿನಿಂದ ಮೃತಪಟ್ಟ ಮಗುವಿನ ಅಂತ್ಯಸಂಸ್ಕಾರವನ್ನು ಆಂಬ್ಯುಲೆನ್ಸ್ ಸಿಬ್ಬಂದಿಯೇ ನೆರವೇರಿಸಿದ್ದಾರೆ. ತಾಯಿಗೆ ಕರೊನಾ ಸೋಂಕು ಇದ್ದಿದ್ದರಿಂದ ಮಗು ಹುಟ್ಟುತ್ತಲೇ ಕರೊನಾ ಸೋಂಕಿಗೆ ಒಳಗಾಗಿತ್ತು. ಇದು ಕೊವಿಡ್​-19 ಪ್ರಕರಣ ಆಗಿದ್ದರಿಂದ ತಂದೆಯೂ ಅಂತ್ಯಸಂಸ್ಕಾರಕ್ಕೆ ಬರಲಿಲ್ಲ. ಇದನ್ನೂ ಓದಿ: ಅರ್ಜುನ್​ಗೆ ಅಜ್ಜ-ಅಜ್ಜಿಯಾದರು ಜಾನ್​ ಮತ್ತು ಅದಿತಿ … ಯಾವ ಚಿತ್ರ ಗೊತ್ತಾ?

ಈ ಮಗುವಿಗೆ ಜೆಜೆಆರ್​ ನಗರದ ಹಿಂದೂ ರುದ್ರಭೂಮಿಯಲ್ಲಿ, ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿದೆ. ಶಾಸಕ ಜಮೀರ್​ ಟೀಂ ಮುಂದಾಗಿ ಮಗುವಿಗೆ ಅಂತ್ಯಕ್ರಿಯೆ ನೆರವೇರಿಸಿದೆ. (ದಿಗ್ವಿಜಯ ನ್ಯೂಸ್​)