ವಾಷಿಂಗ್ಟನ್: ವಿಶ್ವದಲ್ಲಿ ಹಾವು ಕಡಿತದಿಂದ ಪ್ರತಿ ವರ್ಷ ಸುಮಾರು ಒಂದೂವರೆ ಮಿಲಿಯನ್ ಜನರು ಸಾಯುತ್ತಾರೆ. ನಾಲ್ಕು ಲಕ್ಷ ಮಂದಿ ಅಂಗವಿಕಲತೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಓ) ಹೇಳುತ್ತದೆ. ಹಾವು ಕಚ್ಚಿದೊಡನೆ ಸೂಕ್ಷ ಚಿಕಿತ್ಸೆ ನೀಡಿದರೆ ಕಡಿತಕ್ಕೊಳಗಾದ ವ್ಯಕ್ತಿ ಬದುಕುವ ಸಾಧ್ಯತೆ ಇರುತ್ತದೆ. ಆದರೆ ಹಲವು ಬಾರಿ ಸೂಕ್ತ ಔಷಧಿಯೂ ಸಿಗುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಎಂಬಂತೆ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕರು ಸರಳ ಪರಿಹಾರವನ್ನು ಕಂಡುಕೊಂಡಿದ್ದಾರೆ.
ಇದನ್ನೂ ಓದಿ: ಚಮ್ಮಾರನಿಗೆ ಚಪ್ಪಲಿ ಹೊಲಿಯುವ ಯಂತ್ರ ಕೊಡಿಸಿದ ರಾಹುಲ್ ಗಾಂಧಿ; ವ್ಯಾಪಕ ಮೆಚ್ಚುಗೆಗೆ ಪಾತ್ರವಾಯ್ತು ರಾಗಾ ನಡೆ
ಹೃದಯಾಘಾತವಾದ 24 ಗಂಟೆಗಳ ಒಳಗೆ ನೀಡಿದ ಹೆಪಾರಿನ್ ಹಾವು ಕಡಿತದಿಂದ ಎದುರಾಗುವ ಅಂಗಾಂಶದ ಅವನತಿಯನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಅಷ್ಟೇ ಅಲ್ಲ ಮನುಷ್ಯ ವಿರೂಪಗೊಳ್ಳುವುದನ್ನು ಯಶಸ್ವಿಯಾಗಿ ತಡೆಯಬಹುದು. ಇದು ರಾಮಬಾಣದಂತೆ ಕೆಲಸ ಮಾಡುತ್ತದೆ ಎಂದು ಕಂಡುಬಂದಿದೆ. ಹೆಪಾರಿನ್ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಅಂಗಾಂಶ ಹಾನಿಯಿಂದ ತಡೆಯುವ ಔಷಧವಾಗಿದೆ.
ಹಾವು ಕಚ್ಚಿದ ತಕ್ಷಣ ಹೆಪಾರಿನ್ ಅನ್ನು ನೀಡಿದರೆ, ಅಂಗಾಂಶಗಳ ಅವನತಿ ಮತ್ತು ಅದರ ಜೊತೆಗಿನ ವಿರೂಪತೆಯನ್ನು ನಿಲ್ಲಿಸಬಹುದು ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.
ಆದುದರಿಂದಲೇ ಹೆಪಾರಿನ್ ಚುಚ್ಚುಮದ್ದು ಗಾಯಗೊಂಡ ಜಾಗಕ್ಕೆ ಆದಷ್ಟು ಬೇಗ ಹಾಕಿದರೆ ಶೇಕಡ 90ರಷ್ಟು ಅಂಗವೈಕಲ್ಯವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ!