ನ್ಯೂಸ್

Narendra Modi | ಇದು ನವಭಾರತ.. ನ್ಯೂಕ್ಲಿಯರ್ ಬ್ಲ್ಯಾಕ್‌ಮೇಲ್‌ಗೆ ಹೆದರುವುದಿಲ್ಲ, ಅವರ ಮನೆಗೆ ನುಗ್ಗಿ ಹೊಡೆಯುತ್ತದೆ : ಪ್ರಧಾನಿ ನರೇಂದ್ರ ಮೋದಿ

Narendra Modi: ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದರು, ಅದಕ್ಕೆ ಪ್ರತಿಯಾಗಿ ನಾವು ಆಪರೇಷನ್ ಸಿಂಧೂರ ಕಾರ್ಯಚರಣೆ ನಡೆಸಿ ಅವರ ಶಿಬಿರಗಳನ್ನು ನಾಶಪಡಿಸಿದ್ದೇವೆ, ಅವರು ಕಣ್ಣು ಮಿಟುಕಿಸುವೊಳಗೆ ನಮ್ಮ ಕೆಚ್ಚೆದೆಯ ಸಶಸ್ತ್ರ ಪಡೆಗಳು ಪಾಕಿಸ್ತಾನವನ್ನು ಮಂಡಿಯೂರಿ ನಿಲ್ಲಿಸಿದವು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಮಧ್ಯಪ್ರದೇಶದ ಧಾರ್‌ನಲ್ಲಿ ನಡೆದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ ನಷ್ಟವಾಗಿದೆ ಎಂದು ಒಪ್ಪಿಕೊಂಡಿರುವ ಜೈಶ್-ಎ-ಮೊಹಮ್ಮದ್ ಹೇಳಿಕೆಯು ನವಭಾರತ ಭಯೋತ್ಪಾದನೆಗೆ ದೃಢವಾಗಿ ಪ್ರತಿಕ್ರಿಯಿಸುವುದಲ್ಲದೆ, ಯಾರ ಪರಮಾಣು ಬೆದರಿಕೆಗಳಿಗೂ ಹೆದರುವುದಿಲ್ಲ, ಭಯೋತ್ಪಾದಕರನ್ನು ಅವರ ಮನೆಗಳೊಳಗೆ ನುಗ್ಗಿ ಹೊಡೆದುರುಳಿಸುವ ಶಕ್ತಿ ನಮ್ಮ ಸೈನ್ಯಕ್ಕಿದೆ ಎಂದರು.

ಮೇ 7 ರಂದು ಬಹಾವಲ್ಪುರ್ ಪ್ರಧಾನ ಕಚೇರಿಯಾದ ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಮೇಲೆ ನಡೆದ ದಾಳಿಯಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಜೈಶ್ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ನಿನ್ನೆ ಒಪ್ಪಿಕೊಂಡಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಬಹವಾಲ್ಪುರ್ ಜೊತೆಗೆ, ಪಾಕಿಸ್ತಾನದೊಳಗೆ ಭಾರತ ನಡೆಸಿದ ಅತ್ಯಂತ ಧೈರ್ಯಶಾಲಿ ವೈಮಾನಿಕ ದಾಳಿಯಲ್ಲಿ ಇತರ ಎಂಟು ಭಯೋತ್ಪಾದಕ ಸ್ಥಳಗಳು ಸಹ ನಾಶವಾದವು.(ಏಜೆನ್ಸೀಸ್​​​)