ಜಾರ್ಖಂಡ್ ಪ್ರತಿಭಟನೆಗೆ'ಪುಷ್ಪಾ' ಎಂಟ್ರಿ 
ದೇಶ

ನ್ಯಾಯ ಸಿಗೋವರೆಗೂ ತಗ್ಗಲ್ಲ, ಬಗ್ಗಲ್ಲ: ಜಾರ್ಖಂಡ್​ ಹೋರಾಟಕ್ಕೆ 'ಪುಷ್ಪಾ' ಎಂಟ್ರಿ; ವಿಡಿಯೋ ವೈರಲ್! Pushpa in Jharkhand Protest

ಪ್ರಮುಖ ಮುಖ್ಯಾಂಶಗಳು

  • ನ್ಯಾಯ ಸಿಗೋವರೆಗೂ ತಗ್ಗಲ್ಲ, ಬಗ್ಗಲ್ಲ
  • ಜಾರ್ಖಂಡ್ ಪ್ರತಿಭಟನೆಗೆ'ಪುಷ್ಪಾ' ಎಂಟ್ರಿ
  • ನಮ್ಮ ಹೋರಾಟಕ್ಕೆ ಸಿನಿಮಾದವರು ಬೆಂಬಲ ನೀಡುತ್ತಿಲ್ಲ; ನವೇ ಅವರ ಗೆಟಪ್​ನಲ್ಲಿ ಬಂದಿದ್ದೇನೆ
ರಾಂಚಿ: ರಾಜ್ಯ ಸರ್ಕಾರದಿಂದ ನಡೆಸಲಾಗುವ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ ಜಾರ್ಖಂಡ್​​ನ ವಿದ್ಯಾರ್ಥಿಗಳು ಕಳೆದ 17 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ.
ಇಂದು (ಸೋಮವಾರ, ಆ.10) ಈ ಪ್ರತಿಭಟನೆ ತೀವ್ರಗೊಂಡಿದ್ದು, ವಿದ್ಯಾರ್ಥಿಗಳು ವಿಧಾನಸಭೆ ಮುತ್ತಿಗೆಗೆ ಮುಂದಾಗಿದ್ದು, ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್​, ಅಶ್ರುವಾಯು ಹಾಗೂ ಜಲ ಫಿರಂಗಿಗಳನ್ನು ಪ್ರಯೋಗಿಸಲಾಗಿದೆ ಎಂದು ವರದಿಯಾಗಿದೆ.

ಹೋರಾಟಕ್ಕೆ ಪುಷ್ಪಾ ಎಂಟ್ರಿ!

ಕಳೆದ ಕೆಲ ವರ್ಷಗಳಲ್ಲಿ JPSC ಹಾಗೂ JPSC-CGL ನಡೆಸುವ ಪರೀಕ್ಷೆಗಳಲ್ಲಿ ಭಾರಿ ಅಕ್ರಮ ನಡೆಯುತ್ತಿರುವ ಹಿನ್ನಲೆ, ಈ ಪ್ರತಿಭಟನೆ ನಡೆಯುತ್ತಿದ್ದು, ಇಂದು ಈ ಹೋರಾಟಕ್ಕೆ ಸೌತ್​ ಸೂಪರ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ ಸಿನಿಮಾ 'ಪುಷ್ಪಾ' ಗೆಟಪ್​ನಲ್ಲಿ (Pushpa in Jharkhand Protest) ಒಬ್ಬ ಹೋರಾಟಗಾರ ಕಾಣಿಸಿಕೊಂಡಿದ್ದಾನೆ.

ಮಾಧ್ಯಮದವರೊಂದಿಗೆ ಮಾತನಾಡಿದ ಇತ, ಜಾರ್ಖಂಡ್​ನ ವಿದ್ಯಾರ್ಥಿಗಳು ನ್ಯಾಯ ಸಿಗೋ ವರೆಗೆ ಯಾರಿಗೂ ತಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಡೈಲಾಗ್​ ಹೊಡೆದಿದ್ದಾರೆ. ಹಾಗೆಯೇ ನಮ್ಮ ಈ ಪ್ರತಿಭಟನೆಗೆ ಸಿನಿಮಾ ನಟರು ಬೆಂಬಲ ನೀಡುತ್ತಿಲ್ಲ, ಹೀಗಾಗಿ ನಾನು ನಟನ ವೇಷದಲ್ಲಿ ಬಂದಿದ್ದೇನೆಂದು ತಿಳಿಸಿದ್ದಾರೆ. 


ಪೊಲೀಸರಿಂದ ಲಾಠಿ ಚಾರ್ಜ್​!

ಇಂದು ವಿಧಾನಸಭೆ ಮುತ್ತಿಗೆಗೆ ಪ್ರತಿಭಟನಾಕಾರರು ಮುಂದಾದ ಹಿನ್ನಲೆ, ಜಾರ್ಖಂಡ್​ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್​, ಅಶ್ರುವಾಯು ಪ್ರಯೋಗ ಹಾಗೂ ಜಲ ಫಿರಂಗಿಗಳನ್ನು ಪ್ರಯೋಗಿಸಿದ್ದಾರೆಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಪರೀಕ್ಷಾ ಅಕ್ರಮಗಳಿಗೆ ಕಾರಣವಾಗಿರುವ ಈ JPSC ಮತ್ತು JPSC-CGL ಗಳನ್ನು ರದ್ದು ಮಾಡಬೇಕು ಹಾಗೂ ಇವುಗಳು ನಡೆಸಿರುವ ಪರೀಕ್ಷೆಗಳನ್ನು ಮತ್ತೊಮ್ಮೆ ನಡೆಸಬೇಕೆನ್ನುವುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ, (ಏಜನ್ಸೀಸ್​).