ಮಧ್ಯಪ್ರದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆ ಅಂಗೀಕಾರ!
- ಮಧ್ಯಪ್ರದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆ ಅಂಗೀಕಾರ!
- ದೇಶದಲ್ಲಿ UCC ಜಾರಿಗೊಳಿಸಿದ 4ನೇ ರಾಜ್ಯ ಎನಿಸಿಕೊಂಡ ಮಧ್ಯಪ್ರದೇಶ
- ಕಾಂಗ್ರೆಸ್ ವಿರೋಧದ ನಡುವೆಯೂ ಸಿಎಂ ಮೋಹನ್ ಯಾದವ್ ಬಿಗ್ ಸ್ಟೇಟ್‌ಮೆಂಟ್
ಮಧ್ಯಪ್ರದೇಶ: ಮಂಗಳವಾರ (ಜು.21) ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಜಾರಿ ಮಾಡುವ ಮೂಲಕ, ಮಧ್ಯಪ್ರದೇಶ ರಾಜ್ಯವು ಈ ಯುಸಿಸಿ (UCC Bill passed in Madhya Pradesh) ಅನ್ನು ಜಾರಿಗೆ ತಂದ ನಾಲ್ಕನೇ ರಾಜ್ಯ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಮಧ್ಯಪ್ರದೇಶಕ್ಕಿಂತ ಮೊದಲು, ಉತ್ತರಾಖಂಡ, ಅಸ್ಸಾಂ ಹಾಗೂ ಗುಜರಾತ್ ರಾಜ್ಯಗಳು ಏಕರೂಪ ನಾಗರಿಕ ಸಂಹಿತೆಯನ್ನು ತಮ್ಮ ರಾಜ್ಯದಲ್ಲಿ ಜಾರಿಗೊಳಿಸಿವೆ.
ನಮಗೆ ಹಿಂದೂ-ಮುಸ್ಲಿಮರು ಇಬ್ಬರೂ ಒಂದೇ!
ಏಕರೂಪ ನಾಗರಿಕ ಮಸೂದೆ ಅಂಗೀಕಾರವಾದ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ಸಿಎಂ ಮೋಹನ್ ಯಾದವ್, ಇಂದು ನಮ್ಮ ರಾಜ್ಯದಲ್ಲಿ ಏಕರೂಪ ನಾಗರಿಕ ಮಸೂದೆ ಅಂಗೀಕಾರವಾಗಿದೆ. ನಾವು ಕಾಂಗ್ರೆಸ್ ಅವರಂತೆ ಹಿಂದೂಗಳನ್ನು ಮತ್ತು ಮುಸ್ಲಿಮರನ್ನು ಕೇವಲ ಓಟ್ ಬ್ಯಾಂಕ್ ರೀತಿ ನೋಡುವುದಿಲ್ಲಿ. ನಮಗೆ ಇಬ್ಬರು ಒಂದೇ ಎಂದು ಯಾದವ್ ತಿಳಿಸಿದ್ದಾರೆ.
ಅವರು ಹೀಗೆ ಕೇವಲ ಒಂದು ಧರ್ಮಸ ಏಲೈಕೆ ಮಾಡಿದ ಕಾರಣಕ್ಕಾಗಿಯೇ ಇಂದು ಶೇ. 80 ಭಾರತದಿಂದ ಕಾಂಗ್ರೆಸ್ ಮುಕ್ತವಾಗಿದೆ, ಅವರು ಮಾಡಿದ ಪಾಪಕ್ಕೆ ಜನ ಉತ್ತರ ನೀಡಿದ್ದಾರೆಂದು ಹೇಳಿದ್ದಾರೆ.
ಕಾಂಗ್ರೆಸ್ನಿಂದ ವಿರೋಧ!
ಮಧ್ಯಪ್ರದೇಶ ಅಸೆಂಬ್ಲಿಯಲ್ಲಿ ಆರಂಭವಾಗಿರುವ ಮಳಗಾಲದ ಅಧಿವೇಶನದಲ್ಲಿ ಈ ಏಕರೂಪ ನಾಗರಿಕ ಮಸೂದೆಯನ್ನು ಅಂಗೀಕಾರ ಮಾಡುವುದಾಗಿ ಬಿಜೆಪಿ ತಿಳಿಸಿತ್ತು. ಇಂದು ನಡೆದ ಅಧಿವೇಶನದಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಅಧಿವೇಶನವನ್ನು ಅರ್ಧ ಗಂಟೆ ಮುಂದೂಡುವಂತೆ ಮಾಡಿತು.
ಕಾಂಗ್ರೆಸ್ ನಾಯಕ ನರೇಂದ್ರ ಸಿಂಗ್ ತೋಮರ್, ಸಿಎಂ ಮೋಹನ್ ಯಾದವ್ ಮೇಲೆ ಕೇಳಿ ಬಂದಿರುವ ಭೂ ಅಕ್ರಮದ ಬಗ್ಗೆ ಪ್ರಶ್ನಿಸಿದರು. ಆದರೆ ಬಿಜೆಪಿ ಇದೆಲ್ಲಾ ರಾಜಕೀಯ ಪಿತೂರಿ ಎಂದು ಆರೋಪಗಳನ್ನು ತಳ್ಳಿಹಾಕಿದೆ, (ಏಜನ್ಸೀಸ್).