ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆದ ಖಾಸಗಿ ಬಸ್ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿ 
ದೇಶ

ಕೇರಳದಲ್ಲಿ ಭೀಕರ ರಸ್ತೆ ದುರಂತ: ಸ್ಕಿಡ್ ಆದ ಬಸ್ ಪಲ್ಟಿ; ಬೆಚ್ಚಿ ಬೀಳಿಸುವ CCTV ವಿಡಿಯೋ ವೈರಲ್! Kerala Bus Accident

ಪ್ರಮುಖ ಮುಖ್ಯಾಂಶಗಳು

  • ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆದ ಖಾಸಗಿ ಬಸ್ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿ
  • ಕೇರಳದ ಮಲಪ್ಪುರಂ ಬಳಿ ನಡೆದ ಘಟನೆ
  • ಸೋಷಿಯಲ್​ ಮೀಡಿಯಾನಲ್ಲಿ ಸಿಸಿಟಿವಿ ದೃಶ್ಯ ವೈರಲ್​​
ಕೇರಳ: ಭಾರತದಲ್ಲಿ ಇಂಟರ್ನೆಟ್ ಕ್ರಾಂತಿ ಸಂಭವಿಸಿದ ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವು ವಿನೋದಾತ್ಮಕವಾಗಿದ್ದರೆ, ಇನ್ನು ಕೆಲವು ಕಣ್ಣಲ್ಲಿ ನಿರೂರುವಂತೆ ಮಾಡುತ್ತವೆ. ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿರುವ ಖಾಸಗಿ ಬಸ್​​ವೊಂದರ ಅಫಘಾತದ ವಿಡಿಯೋ (Kerala Bus Accident) ಈಗ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ.

ಸ್ಕಿಡ್​​, ಡಿಕ್ಕಿ; ಪಲ್ಟಿ!

ಭಾನುವಾರ (ಜು.26) ಕೇರಳದ ಕೊಟ್ಟಿಪುರಂನ ರಾಷ್ಟ್ರೀಯ ಹೆದ್ದಾರಿ 66 ನಲ್ಲಿ ನಡೆದಿರುವ ಈ ಘಟನೆ ನೆಟ್ಟಿಗರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯದಲ್ಲಿ, ಖಾಸಗಿ ಬಸ್ಸೊಂದು ರಸ್ತೆಯಲ್ಲಿ ಸುಮಾರು 25 ಮೀಟರ್​ವರೆಗೆ ಸ್ಕಿಡ್ ಆಗಿ, ನಂತರ ಡಿವೈಡರ್​ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿರುವ ಘೋರ ಘಟನೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
ಮಾಹಿತಿ ಪ್ರಕಾರ, ಈ ಅಫಘಾತದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು ಸುಮಾರು 26 ಜನ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಅತಿಯಾದ ವೇಗವೇ ಅಫಘಾತಕ್ಕೆ ಕಾರಣ!

ಈ ಘಟನೆ ಬಗ್ಗೆ ಸ್ಥಳೀಯ ಮಾಧ್ಯಮಗಳು ಮಾಡಿರುವ ವರದಿ ಪ್ರಕಾರ, ಕೇರಳದ ಖಾಸಗಿ ಬಸ್​​ಗಳು ಮೀತಿ ಮೀರಿದ ವೇಗದಲ್ಲಿ ಚಲಿಸುವುದು ಇದೇ ಮೊದಲಲ್ಲ. ಈ ಘಟನೆ ಕೂಡ ಅತಿವೇಗದಿಂದಲೇ ಸಂಭವಿಸಿದೆ ಎಂದು ಹೇಳಲಾಗಿದೆ.
ಗಾಡಿ ಹೆಚ್ಚಿನ ವೇಗದಲ್ಲಿದ್ದು, ಒಂದೇ ಸಮನೆ ಬ್ರೇಕ್​ ಹಾಕಿದಾಗ ಗಾಡಿ ಸ್ಕಿಡ್​​ ಆಗಿದೆ, ನಂತರ ಡಿವೈಡರ್​ಗೆ ಡಿಕ್ಕಿಯಾದ ಪರಿಣಾಮ ಬಸ್ಸು ಪಲ್ಟಿಯಾಗಿ ಬಿದ್ದಿದೆ ಎಂದು ತಿಳಿಸಲಾಗಿದೆ. ಹಾಗೆಯೇ ಬಸ್​​ ಕಂಪನಿ ಹಾಗೂ ಚಾಲಕನ ವಿರುದ್ಧ ಪೊಲೀಸರು ದೂರನ್ನು ದಾಖಲಿಸಿದ್ದು, ತನಿನೆ ಮುಂದುವರಿಸಿದ್ದಾರೆಂದು ಹೇಳಲಾಗುತ್ತಿದೆ, (ಏಜನ್ಸೀಸ್​​).