ದೇವರಿಗೆ ಆರತಿ ಬೆಳಗಿ, ಹೂವಿನ ಹೋಲಿಯಲ್ಲಿ ಭಾಗವಹಿಸಿದ ಸಿಂಗರ್
- ಅಂಬಾನಿ ಮನೆಗೆ ಆಗಮಿಸಿದ ಅಂತರಾಷ್ಟ್ರೀಯ ಗಾಯಕಿ ರಿಹಾನ್ನಾ
- ದೇವರಿಗೆ ಆರತಿ ಬೆಳಗಿ, ಹೂವಿನ ಹೋಲಿಯಲ್ಲಿ ಭಾಗವಹಿಸಿದ ಸಿಂಗರ್
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಮುಂಬೈ: ಭಾರತದ ಪ್ರವಾಸದಲ್ಲಿರು ಅಂತರಾಷ್ಟ್ರೀಯ ಗಾಯಕಿ ಹಾಗೂ ಮಹಿಳಾ ಉದ್ಯಮಿ ರಿಹಾನ್ನಾ ಭಾನುವಾರ (ಏ.26) ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Rihanna in Ambani House) ಅವರ ಮುಂಬೈನಲ್ಲಿರುವ ಮನೆ ಆಂಟಿಲಿಯಾಗೆ ಆಗಮಿಸಿದ್ದರು.
ದೇವರಿಗೆ ಆರತಿ ಬೆಳಗಿದ ಗಾಯಕಿ!
ಮನೆಗೆ ಆಗಮಿಸಿದ ಅಂತರಾಷ್ಟ್ರೀಯ ಗಾಯಕಿ ರಿಹಾನ್ನಾರನ್ನು ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ಸೊಸೆಯಂದಿರಾದ ಶ್ಲೋಕಾ ಮೆಹ್ತಾ, ರಾಧಿಕಾ ಮರ್ಚೆಂಟ್ ಹಾಗೂ ಮಗ ಅನಂತ್ ಅಂಬಾನಿ ಸ್ವಾಗತಿಸಿದರು.
ಮನೆಗೆ ಅತಿಥಿಯಾಗಿ ಆಗಮಿಸಿದ ರಿಹಾನ್ನಾಗಾಗಿ ವಿಶೇಷ ಪೂಜೆಯನ್ನು ಏರ್ಪಡಿಸಿದ್ದ ಅಂಬಾನಿ ಪರಿವಾರದ ಜೊತೆಗೆ ಎಲ್ಲಾ ರೀತಿಯ ಕಾರ್ಯಕ್ರಮದಲ್ಲಿ ರಿಹಾನ್ನಾ ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ.
ನಂತರ ದೇವರಿಗೆ ಆತರಿ ಬೆಳಗಿದ ರಿಹಾನ್ನಾ, ನಂತರ ಹೂನಿನ ಹೋಳಿ (ಫೂಲ್ ಕಿ ಹೋಲಿ) ಯಲ್ಲಿ ಭಾಗವಹಿಸಿ, ಅಂಬಾನಿ ಮನೆಯವರೊಂದಿಗೆ ಹೂವುಗಳನ್ನು ಪರಸ್ಪರ ಎರಚಿಕೊಳ್ಳುತ್ತಾ ನೃತ್ಯ ಮಾಡಿದ್ದಾರೆ. ಈ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಮುಂಬೈನಲ್ಲಿ ಉದ್ಯಮ ಆರಂಭಿಸಲಿರುವ ರಿಹಾನ್ನಾ!
ರಿಹಾನ್ನಾ ಭಾರತದಲ್ಲಿ ತನ್ನ ಬ್ಯೂಟಿ ಬ್ರಾಂಡ್ ಆದ ಫೆಂಟಿ ಬ್ಯೂಟಿ ಕಿ ಹವೆಲಿ (Fenty Beauty Ki Haveli) ಎಂಬ ಮಳಿಗೆಯನ್ನು ಮುಂಬೈನಲ್ಲಿ ಪ್ರಾರಂಭಿಸಲು ಮುಂದಾಗಿದ್ದು, ಇದರಿಂದ ಭಾರತ ಪ್ರವಾಸ ಕೈಗೊಂಡಿದ್ದಾರೆ. ಮಳಿಗೆ ಉದ್ಘಾಟನೆ ನಂತರದ ಪಾರ್ಟಿಯಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಮತ್ತು ಮನೀಶ್ ಮಲೋತ್ರಾ ಜೊತೆ ರಿಹಾನ್ನಾ ಕುಣಿಯುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಹಾಗೆಯೇ ರಿಹಾನ್ನಾ ಹಿಂದಿಯಲ್ಲಿ ಥ್ಯಾಂಕ್ಯೂ ಹೇಗೆ ಹೇಳುತ್ತಾರೆಂದು ಕೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಧೂಳೆಬ್ಬಿಸುತ್ತಿದೆ.
ಯಾರು ಈ ರಿಹಾನ್ನಾ?
ರಿಹಾನ್ನಾ ಪೂರ್ಣ ಹೆಸರು ರಾಬಿನ್ ರಿಹಾನ್ನಾ ಫೆಂಟಿ, ಇವರು 1988ರಲ್ಲಿ ಕೆರಿಬಿಯನ್ ದ್ವೀಪ ರಾಷ್ಟ್ರವಾದ ಬಾರ್ಬಡೋಸ್ನಲ್ಲಿ ಜನಿಸಿದರು.ಇವರು ವಿಶ್ವದ ಅತ್ಯಂತ ಪ್ರಸಿದ್ಧ ಗಾಯಕಿ, ಗೀತರಚನೆಗಾರ್ತಿ, ನಟಿ ಮತ್ತು ಯಶಸ್ವಿ ಉದ್ಯಮಿಯಾಗಿ ಗುರುತಿಸಿ ಕೊಂಡಿದ್ದಾರೆ. ಇವರು ಫೆಂಟಿ ಬ್ಯೂಟಿ (Fenty Beauty) ಎಂಬ ಪ್ರಸಿದ್ಧ ಸೌಂದರ್ಯವರ್ಧಕ ಬ್ರ್ಯಾಂಡ್ ಮತ್ತು ಸ್ಯಾವೇಜ್ ಎಕ್ಸ್ ಫೆಂಟಿ (Savage X Fenty) ಎಂಬ ಒಳ ಉಡುಪುಗಳ ಬ್ರ್ಯಾಂಡ್‌ನ ಮಾಲಕಿಯಾಗಿದ್ದಾರೆ.
ಇವರು ವಿಶ್ವದ ಅತ್ಯಂತ ಶ್ರೀಮಂತ ಮಹಿಳಾ ಸಂಗೀತಗಾರ್ತಿಯರಲ್ಲಿ ಒಬ್ಬರಾಗಿದ್ದು, ಇಲ್ಲಿಯವರೆಗೆ 9 ಗ್ರಾಮಿ ಪ್ರಶಸ್ತಿಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಬಾರ್ಬಡೋಸ್ ಸರ್ಕಾರವು ಇವರನ್ನು ರಾಷ್ಟ್ರೀಯ ನಾಯಕಿ ಎಂದು ಗೌರವಿಸಿದೆ,(ಏಜನ್ಸೀಸ್).