ಅಧಿವೇಶನಕ್ಕೆ ಕುಡಿದು ಬಂದ ಭಗವಂತ್​ ಮಾನ್​? 
ದೇಶ

ಅಧಿವೇಶನಕ್ಕೆ ಕುಡಿದು ಬಂದ ಪಂಜಾಬ್​ ಸಿಎಂ? ಭಗವಂತ್​ ಮಾನ್​ ಮೇಲೆ ವಿರೋಧ ಪಕ್ಷಗಳ ಗಂಭೀರ ಆರೋಪ! Bhagwant Mann

ಪ್ರಮುಖ ಮುಖ್ಯಾಂಶಗಳು

  • ಅಧಿವೇಶನಕ್ಕೆ ಕುಡಿದು ಬಂದ ಭಗವಂತ್​ ಮಾನ್​?
  • ಪಂಜಾಬ್​ ಸಿಎಂ ಮೇಲೆ ವಿರೋಧ ಪಕ್ಷಗಳ ಗಂಭೀರ ಆರೋಪ
  • ಎಲ್ಲಾ ಎಂಎಲ್​ಎಗಳು ಪರೀಕ್ಷೆಗೆ ಒಳಪಡಲಿ ಎಂದ ಕಾಂಗ್ರೆಸ್​ ನಾಯಕ
ಪಂಜಾಬ್​: ಇಂದು (ಮೇ.1) ಪಂಜಾಬ್​ ಸಂಸತ್ತಿನಲ್ಲಿ ಮುಖ್ಯಮಂತ್ರಿ ಭಗವಂತ್​​ ಮಾನ್ (Bhagwant Mann)​ ಕುಡಿದ ಅಮಲಿನಲ್ಲಿ ಬಂದಿದ್ದಾರೆಂದು ವಿರೋಧ ಪಕ್ಷಗಳು ಆರೋಪಿಸಿದ್ದು, ತಾವು ಕುಡಿದು ಬಂದಿಲ್ಲವೆಂದು ಸಾಭಿತು ಪಡಿಸುವಂತೆ ಸವಾಲನ್ನು ಒಡ್ಡಿದ್ದಾರೆ.

ಎಲ್ಲಾ ಎಂಎಲ್​ಎಗಳು ಪರೀಕ್ಷೆಗೆ ಒಳಪಡಲಿ

ಇಂದು ಕಾರ್ಮಿಕರ ದಿನದ ಅಂಗವಾಗಿ ಕಾರ್ಮಿಕ ವಿಶೇಷ ಅಧಿವೇಶನಕ್ಕೆ ಹಾಜರಾಗಿದ್ದ ಸಂದರ್ಭದಲ್ಲಿ, ಕಾಂಗ್ರೆಸ್​ ಶಾಸಕರೊಬ್ಬರು, ಮುಖ್ಯಮಂತ್ರಿಗಳು ಮಧ್ಯದೇಟಿನಲ್ಲಿ ಸಂಸತ್ತನ್ನು ಪ್ರವೇಶಿಸಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಪ್ರತಾಪ್​ ಸಿಂಗ್​ ಬಾಜ್ವಾ, ಕೇವಲ ಮುಖ್ಯಮಂತ್ರಿ ಮಾತ್ರವಲ್ಲ, ಪ್ರತಿ ಎಂಎಲ್​ಎ ಮಧ್ಯಪಾನ ಪರೀಕ್ಷೆಗೆ ಒಳಪಡೋಣ. ಆಗ ಯಾರ್ಯಾರು ಮಧ್ಯ ಸೇವನೆ ಮಾಡಿದ್ದಾರೆಂದು ಜನತೆಗೆ ತಿಳಿಯುತ್ತದೆ ಎಂದು ಹೇಳಿದ್ದಾರೆ.

ಇದು ನಾಚಿಕೆಗೇಡಿನ ಸಂಗತಿ : ಅಕಾಲಿದಳ

ಈ ಆರೋಪಕ್ಕೆ ಪುಷ್ಟಿ ನೀಡಿದ ಶಿರೋಮಣಿ ಅಕಾಲಿದಳದ ಶಾಸಕರು, ರಾಜ್ಯದ ಮುಖ್ಯಮಂತ್ರಿ ಮಧ್ಯ ಸೇವಿಸಿ ಸಂಸತ್​ ಪ್ರವೇಶಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದನ್ನು ಅಕಾಲಿದಳ ಖಂಡಿಸುತ್ತದೆ ಎಂದು ಹೇಳಿದೆ. ಆಮ್​ ಆದ್ಮಿ ಪಕ್ಷದ ಭಗವಂತ್​ ಮಾನ್​, ಮಧ್ಯ ಸೇವನೆಯ ಪರೀಕ್ಷೆಗೆ ಒಳಪಡಲೇ ಬೇಕು, ಒಂದು ವೇಳೆ ಮಧ್ಯ ಸೇವಿಸಿದ್ದು ಸಾಭಿತಾದರೆ, ಸಾರ್ವಜನಿಕರಲ್ಲಿ ಕ್ಷಮೆ ಕೇಳಬೇಕೆಂದು ಹೇಳಿದ್ದಾರೆ.

ಬಿಜೆಪಿಗೆ ಜಿಗಿದ ಪಂಜಾಬ್​ ಆಮ್​ ಆದ್ಮಿ ಸಂಸದರು

ಕಾರ್ಮಿಕರ ಕುಂದು ಕೊರತೆ ಬಗ್ಗೆ ಚರ್ಚಿಸಲು ಕರೆದಿದ್ದ ಅಧಿವೇಶನದಲ್ಲಿ, ಮುಖ್ಯಮಂತ್ರಿ ಮಧ್ಯಸೇವನೆ ಹಾಗೂ ಆಮ್​ ಆದ್ಮಿ ಪಕ್ಷ ಬಿಟ್ಟು, ಬಿಜೆಪಿ ಜಿಗಿದ 7 ಜನ ಸಂಸದರ ಬಗ್ಗೆಯೇ ಮಾತನಾಡಲಾಯಿತು.
ಕೆಲ ದಿನಗಳ ಹಿಂದೆ, ರಾಜ್ಯಸಭಾ ಸಂಸದ ರಾಘವ್​ ಚಡ್ಡಾ ಆಮ್​ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಇವರಿಗೆ ಬೆಂಬಲ ನೀಡಿ ಸ್ವಾತಿ ಮಹಿವಾಲ್​, ಹರ್ಭಜನ್​ ಸಿಂಗ್, ಸಂದೀಪ್​ ಪಾಠಕ್, ಅಶೋಕ್​ ಮಿತ್ತಲ್, ರಜೀಂದರ್​ ಗುಪ್ತಾ ಮತ್ತು ವಿಕ್ರಮ್​ ಸಹಾನಿ ಕೂಡ ಎಎಪಿ ಗೆ ಟಾಟಾ ಹೇಳಿ ಬಿಜೆಪಿಗೆ ಹಾಯ್​ ಹೇಳಿದ್ದಾರೆ, (ಏಜನ್ಸೀಸ್​).