ಆಮ್​ ಆದ್ಮಿ ಪಕ್ಷ ಬಿಟ್ಟ ರಾಘವ್ ಚಡ್ಡಾ: ಬಿಜೆಪಿ ಸೇರಲು ಪ್ರಿಯಾಂಕಾ ಚೋಪ್ರಾ ಕಾರಣ; ನವಜೋತ್​ ಕೌರ್​ ಹೊಸ ಬಾಂಬ್​! Navjot Kaur on Raghav Chadha

ಚಡ್ಡಾ ಬಿಜೆಪಿ ಸೇರಲು ಪ್ರಿಯಾಂಕಾ ಚೋಪ್ರಾ ಕಾರಣ
ಚಡ್ಡಾ ಬಿಜೆಪಿ ಸೇರಲು ಪ್ರಿಯಾಂಕಾ ಚೋಪ್ರಾ ಕಾರಣ
Published on

ಪ್ರಮುಖ ಮುಖ್ಯಾಂಶಗಳು

  • ಆಮ್​ ಆದ್ಮಿ ಪಕ್ಷ ಬಿಟ್ಟ ರಾಘವ್ ಚಡ್ಡಾ
  • ಚಡ್ಡಾ ಬಿಜೆಪಿ ಸೇರಲು ಪ್ರಿಯಾಂಕಾ ಚೋಪ್ರಾ ಕಾರಣ
  • ಸ್ಪೋಟಕ ಹೇಳಿಕೆ ನೀಡಿದ ನವಜೋತ್​ ಕೌರ್​ ಸಿಧು
ಪಂಜಾಬ್​: ಕೆಲ ದಿನಗಳ ಹಿಂದೆ ಆಮ್​ ಆದ್ಮಿ ಪಕ್ಷ (AAP) ದ ರಾಜ್ಯ ಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿದಿದ್ದ ಸಂಸದ ರಾಘವ್​ ಚಡ್ಡಾ ಇದೀಗ ಭಾರತೀಯ ಜನತಾ ಪಕ್ಷ (BJP) ವನ್ನು ಸೇರಿದ್ದಾರೆ. ಇವರ ಜೊತೆಗೆ ಆಮ್​ ಆದ್ಮಿ ಪಕ್ಷದ ಇತರ 6 ಜನ ಸಂಸದರು ಬಿಜೆಪಿಯನ್ನು ಸೇರಿದ್ದಾರೆ.

ರಾಘವ್​ ಬಿಜೆಪಿ ಸೇರಲು ಪ್ರಿಯಾಂಕಾ ಕಾರಣ

ರಾಘವ್​ ಚಡ್ಡಾ ಬಿಜೆಪಿಗೆ ಬೆಂಬಲ ಸೂಚಿಸಲು ಬಾಲಿವುಡ್​ ನಟಿ ಹಾಗೂ ಚಡ್ಡಾ ಪತ್ನಿ ಪರಿಣಿತಿ ಅಕ್ಕ ಪ್ರಿಯಾಂಕಾ ಚೋಪ್ರಾ ಕಾರಣವೆಂದು ಕಾಂಗ್ರೆಸ್​ ಪಕ್ಷದ ನವಜೋತ್​ ಕೌರ್​ ಸಿಧು (Navjot Kaur on Raghav Chadha) ಹೇಳಿದ್ದಾರೆ.
ರಾಘವ್​ ಚಡ್ಡಾ ಕೇಂದ್ರ ಸರ್ಕಾರಕ್ಕೆ ನಿರಂತರವಾಗಿ ಪ್ರಶ್ನಿಸುತ್ತಿದ್ದ ಹಿನ್ನಲೆಯಲ್ಲಿ ಅವರ ಮೇಲೆ ಇಡಿ ಹಾಗೂ ಸಿಬಿಐ ರೈಡ್​ ಮಾಡುವ ಪ್ರಯತ್ನ ನಡೆಯುತ್ತಿತ್ತು. ಅಷ್ಟರಲ್ಲಿ ಪ್ರಿಯಾಂಕಾ ಚೋಪ್ರಾ ಹಿರಿಯ ಬಿಜೆಪಿ ನಾಯಕರನ್ನು ಸಂಪರ್ಕಿಸಿ ರಾಘವ್​ ಬಿಜೆಪಿಯತ್ತ ಮುಖ ಮಾಡುವಂತೆ ಮಾಡಿದ್ದಾರೆ ಎನ್ನುವುದು ನವಜೋತ್​ ಕೌರ್​ ಅವರ ಅಭಿಪ್ರಾಯವಾಗಿದೆ.

ರಾಘವ್​ ಜೊತೆ ಬಂದ ಸಂಸದರಾರು?

ರಾಘವ್​ ಚಡ್ಡಾ, ಇದಾಗಲೇ ಎಎಪಿಯನ್ನು ತೊರೆದು ಬಿಜೆಪಿ ಸೇರಿದ್ದರೆ, ಇವರಿಗೆ ಬೆಂಬಲ ಎಂಬಂತೆ ಸ್ವಾತಿ ಮಹಿವಾಲ್​ (ದೆಹಲಿ), ಹರ್ಭಜನ್​ ಸಿಂಗ್ (ಪಂಜಾಬ್​)​, ಸಂದೀಪ್​ ಪಾಠಕ್ (ಪಂಜಾಬ್​)​, ಅಶೋಕ್​ ಮಿತ್ತಲ್ (ಪಂಜಾಬ್​)​, ರಜೀಂದರ್​ ಗುಪ್ತಾ (ಪಂಜಾಬ್​) ಮತ್ತು ವಿಕ್ರಮ್​ ಸಹಾನಿ (ಪಂಜಾಬ್​) ಇವರುಗಳು ಸ್ವಪಕ್ಷವನ್ನು ತೊರೆದು, ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಆಮ್​ ಆದ್ಮಿ ಪಕ್ಷದಲ್ಲಿ 10 ಜನ ಸಂಸದರಿದ್ದು, ಅದರಲ್ಲಿ ರಾಘವ್​ ಚಡ್ಡಾರನ್ನು ಸೇರಿಸಿ 7 ಜನ ಸಂಸದರು ಬಿಜೆಪಿ ಸೇರಲಿದ್ದಾರೆ. ಈ ಮೂಲಕ ರಾಜ್ಯಸಭೆಯಲ್ಲಿದ್ದ ಎಎಪಿ ಸಂಸದರಲ್ಲಿ 2/3 ಸಂಸದರು ಬಿಜೆಪಿ ಪಾಲಾಗರಿದ್ದಾರೆ.

ಪಕ್ಷ ಬಿಡಲು ಇದೇ ಕಾರಣ

ಕಳೆದ ಮೂರು ದಿನಗಳಿಂದ ದೇಶದಾದ್ಯಂತ ನಾನು ಪಕ್ಷ ಬಿಟ್ಟಿರುವುದೇ ಚರ್ಚೆಯಾಗುತ್ತಿರುವ ಕಾರಣ ಈ ವಿಡಿಯೋವನ್ನು ನಾನು ಹಂಚಿಕೊಳ್ಳುತ್ತಿದ್ದೆನೆ. ಆಮ್​ ಅದ್ಮಿ ಪಕ್ಷ ಈಗ ಮೊದಲಿನಂತಿಲ್ಲ, ಸರಿಯಾದ ವ್ಯಕ್ತಿ ತಪ್ಪಾದ ಪಕ್ಷದಲ್ಲಿದಿರಿ ಎಂದು ನನಗೆ ಹಲವಾರು ಜನ ಹೇಳುತ್ತಿದ್ದರು, ಅದ ನನಗೆ ಈಗ ಅರಿವಾಗಿದೆ.
ಆಮ್​ ಆದ್ಮಿ ಪಕ್ಷ ಕಟ್ಟುವಾಗ ಕೇಜ್ರಿವಾಲ್​ ಜೊತೆ ಇದ್ದ ಕೆಲವರಲ್ಲಿ ನಾನು ಒಬ್ಬ. ನಾನು ಈ ಪಕ್ಷದ ಸಂಘಟನೆಗಾಗಿ 15 ವರ್ಷ ನಿಡಿದ್ದೆನೆ. ನಾನು ನನ್ನ ಯೌವನದ 15 ವರ್ಷಗಳಲ್ಲಿ ಈ ಪಕ್ಷಕ್ಕಾಗಿ ಎಷ್ಟು ಶ್ರಮ, ಬೆವರು, ರಕ್ತ ಸುರಿಸಿದ್ದೆನೆಂದು ಪಕ್ಷದ ಹಿರಿಯರಿಗೆ ತಿಳಿದಿದೆ ಎಂದಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net