ಅಭ್ಯಾಸ ಪಂದ್ಯದ ದೃಶ್ಯಾವಳಿಗಳು 
ದೇಶ

ಕೊಹ್ಲಿ-ಗಂಭೀರ್ ನಡುವೆ ನೋ ಟಾಕ್; ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಏನಿದು ವೈಮನಸ್ಸು? | Virat Kohli

IND vs ENG: ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗಳ ಹೀನಾಯ ಸೋಲಿನ ಬಳಿಕ ಭಾರತ ತಂಡ ಈಗ ಮೂರು ಪಂದ್ಯಗಳ ಏಕದಿನ ಸರಣಿಯತ್ತ ಗಮನ ನೆಟ್ಟಿದ್ದು, ಅಭ್ಯಾಸ ಪಂದ್ಯದ ವೇಳೆ ವಿರಾಟ್ ಕೊಹ್ಲಿ(Virat Kohli) ಮತ್ತು ಗೌತಮ್ ಗಂಭೀರ್ ನಡುವಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ಕಂಡು ಬಂದಿದೆ.
ಸೋಮವಾರ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಭಾರತ ತಂಡದ ಅಭ್ಯಾಸ ಅವಧಿಯಲ್ಲಿ, ಮುಖ್ಯ ಕೋಚ್ ಗೌತಮ್ ಗಂಭೀರ್ ತಂಡದ ಇತರ ಹಲವಾರು ಸದಸ್ಯರೊಂದಿಗೆ ಮಾತನಾಡಿದ್ರೂ, ವಿರಾಟ್ ಕೊಹ್ಲಿ ಅವರೊಂದಿಗೆ ಪರಸ್ಪರ ಮಾತನಾಡದಿರುವುದು ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಊಹಾಪೋಹಗಳಿಗೆ ಪುಷ್ಠಿ ನೀಡಿದೆ.
ಅಭ್ಯಾಸದ ಅವಧಿಯ ಫೋಟೋಗಳು ಮತ್ತು ವೀಡಿಯೊ ದೃಶ್ಯಗಳನ್ನು ಆಧರಿಸಿ ಹಲವು ವೆಬ್‌ಸೈಟ್​ಗಳು ವರದಿ ಮಾಡಿದ್ದು, ವಿರಾಟ್ ಕೊಹ್ಲಿ, ಕೋಚ್ ಗಂಭೀರ್ ಅವರನ್ನು ನಿರ್ಲಕ್ಷಿಸಿದ್ದಾರೆ. ತರಬೇತಿಯ ಸಮಯದಲ್ಲಿ ಗಂಭೀರ್ ತಂಡದ ಬಹುತೇಕ ಎಲ್ಲ ಸದಸ್ಯರೊಂದಿಗೆ ಮಾತನಾಡಿದರು, ಆದರೆ ಕೊಹ್ಲಿಯೊಂದಿಗೆ ಮಾತನಾಡಲು ಸುತಾಂಶು ಕೊಟಕ್ ಅವರನ್ನು ಕಳುಹಿಸಿದರು ಎಂದು ಹೇಳಿವೆ.

ಅಭ್ಯಾಸ ಅವಧಿಯಲ್ಲಿ ಏನಾಯಿತು?

ಅಭ್ಯಾಸದ ವೇಳೆ ಕೊಹ್ಲಿ ಮೊದಲು ಫೀಲ್ಡಿಂಗ್ ಡ್ರಿಲ್ ಮಾಡಿದರು, ಬಳಿಕ ನೇರವಾಗಿ ನೆಟ್ಸ್‌ಗೆ ಹೋಗಿ 30-40 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿ ಹೊರಬಂದರು. ಕೊಹ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದನ್ನು ಗಂಭೀರ್ ದೂರದಿಂದ ವೀಕ್ಷಿಸಿದ್ದಾರೆ.
ನೆಟ್ಸ್​ನಲ್ಲಿ ಬ್ಯಾಟಿಂಗ್ ಬಳಿಕ ಕೊಹ್ಲಿ, ಬ್ಯಾಟಿಂಗ್ ಕೋಚ್ ಸಿಂತಾಶು ಕೊಟಕ್ ಅವರತ್ತಿ ಹೋಗಿ ದೀರ್ಘ ಮಾತುಕತೆ ನಡೆಸಿದರು. ಇದಲ್ಲದೆ, ಗಂಭೀರ್ ಇತರ ತಂಡದ ಸದಸ್ಯರೊಂದಿಗೆ ಮಾತನಾಡುತ್ತಿದ್ದಾಗ, ಕೊಹ್ಲಿ ಅವರನ್ನು ನಿರ್ಲಕ್ಷಿಸಿ ತನ್ನ ಕಿಟ್ ಬ್ಯಾಗ್‌ನೊಂದಿಗೆ ಅಲ್ಲಿಂದ ತೆರಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಆರೋಪಗಳು ಈ ಹಿಂದೆಯೂ ಕೇಳಿಬಂದಿದ್ದವು. ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗುವ ಮೊದಲು ಗಂಭೀರ್ ಕೊಹ್ಲಿ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. 2023ರ ಐಪಿಎಲ್​ನಲ್ಲೂ ಲಕ್ನೋ ಮತ್ತು ಬೆಂಗಳೂರು ನಡುವಿನ ಪಂದ್ಯದ ವೇಳೆಯೂ ಇಬ್ಬರೂ ಜಗಳವಾಡಿದ್ದರು (ಏಜೆನ್ಸೀಸ್).