ಮೊಘಲ್ ಯುಗದ ಲೂಟಿಗೆ ಹೋಲಿಸಿದ್ರೆ ದೇಣಿಗೆ ಕಳ್ಳತನ ಸಣ್ಣ ವಿಷಯ: ಅನುಪಮ್ ಖೇರ್ | Anupam Kher

ಬಾಲಿವುಡ್ ನಟ ಅನುಪಮ್ ಖೇರ್
ಬಾಲಿವುಡ್ ನಟ ಅನುಪಮ್ ಖೇರ್
Published on
ನವದೆಹಲಿ: ಅಯೋಧ್ಯೆ ರಾಮ ಮಂದಿರದಲ್ಲಿ ನಡೆದಿರುವ ದೇಣಿಗೆ ಕಳ್ಳತನ ಕುರಿತು ಬಾಲಿವುಡ್ ನಟ ಅನುಪಮ್ ಖೇರ್(Anupam Kher) ಪ್ರತಿಕ್ರಿಯಿಸಿದ್ದು, ಮೊಘಲ್ ಯುಗದ ಲೂಟಿಗೆ ಹೋಲಿಸಿದ್ರೆ ದೇಣಿಗೆ ಕಳ್ಳತನ ಸಣ್ಣ ವಿಷಯ ಎಂದು ಹೇಳಿದ್ದಾರೆ.
ಇತ್ತೀಚೆಗೆ ರಾಷ್ಟ್ರೀಯ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಶತಮಾನಗಳ ಹಿಂದೆ ಮೊಘಲರ ಕಾಲದಲ್ಲಿ ದೇವಸ್ಥಾನಗಳಲ್ಲಿ ನಿಜವಾದ ದರೋಡೆ ನಡೆದಿತ್ತು. ಅಂದು ಅನೇಕ ದೇವಾಲಯಗಳು ನಾಶವಾಗಿದ್ದರು ಎಂದಿದ್ದಾರೆ.
ಆ ಅವಧಿಯಲ್ಲಿ ಮಹಿಳೆಯರ ವಿರುದ್ಧ ಅನೇಕ ದೌರ್ಜನ್ಯಗಳು ನಡೆದಿವೆ.  ಅಂದಿನ ಘಟನೆಗಳಿಗೆ ಹೋಲಿಸಿದರೆ ಈಗ ಅಯೋಧ್ಯೆ ದೇಣಿಗೆಗಳ ಕುರಿತು ಮಾಡಲಾಗುತ್ತಿರುವ ಆರೋಪಗಳು ಚಿಕ್ಕದಾಗಿದೆ. ಆ ಕಾಲದ ಕಷ್ಟಗಳನ್ನು ನಿವಾರಿಸಲು ಇಂದು ಭಾರತಕ್ಕೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಅನುಪಮ್ ಖೇರ್ ಮಾತಿಗೆ ಸಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದ್ದು, ಪ್ರಸ್ತುತ ಪರಿಸ್ಥಿತಿಯನ್ನು ಇತಿಹಾಸದೊಂದಿಗೆ ಹೋಲಿಸುವುದಕ್ಕೆ ಅನೇಕ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಅಸಂಬದ್ಧ ವಾದ ಎಂದರೆ, ಮತ್ತೆ ಕೆಲವರು ಅವರನ್ನು ಬೆಂಬಲಿಸಿದ್ದಾರೆ.
ಇನ್ನೂ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಪ್ರಸ್ತುತ ವಿಚಾರಣೆ ನಡೆಸುತ್ತಿದೆ. ಇಲ್ಲಿಯವರೆಗೆ ನಡೆಸಲಾದ ತನಿಖೆಯ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಎಸ್‌ಐಟಿಗೆ ಆದೇಶಿಸಿದೆ. ಹಾಗೆಯೇ ಕೇಂದ್ರ, ಉತ್ತರ ಪ್ರದೇಶ ಸರ್ಕಾರ ಹಾಗೂ ಟ್ರಸ್ಟ್​ಗೆ ನೋಟಿಸ್ ಜಾರಿ ಮಾಡಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net