ಗುರುದ್ವಾರವನ್ನು ತಮ್ಮ ಹಿಡಿತಕ್ಕೆ ಪಡೆದ ನಿಹಾಂಗ್ ಸಿಖ್ಖರು
- ಉತ್ತರಾಖಂಡದ ರುದ್ರಪ್ರಯಾಗದ ಗುರುದ್ವಾರದಲ್ಲಿ ಹೈಡ್ರಾಮಾ
- ಶಸ್ತ್ರಸಜ್ಜಿತ ನಿಹಾಂಗ್ ಸಿಖ್ಖರು ಗುರುದ್ವಾರವನ್ನು ತಮ್ಮ ಹಿಡಿತಕ್ಕೆ ಪಡೆದಿದ್ದಾರೆ.
- . ಸ್ಥಳಕ್ಕೆ ಭಾರತೀಯ ಸೇನೆ ಹಾಗೂ ಪೊಲೀಸರು ಧಾವಿಸಿದ್ದು, ಮಿಲಿಟರಿ ಕಾರ್ಯಾಚರಣೆಯ ಸಾಧ್ಯತೆ!
ರುದ್ರಪ್ರಯಾಗ್: ಪಾರ್ಕಿಂಗ್ಗಾಗಿ ನಡೆದ ಒಂದು ಚಿಕ್ಕ ಗಲಾಟೆ ಈಗ ಭೀಕರ ರೂಪ ತೆಗೆದುಕೊಂಡಿದ್ದು, ಆರು ಜನ ಶಸ್ತ್ರ ಸಜ್ಜಿತ ನಿಹಾಂಗ್ ಸಿಖ್ಗಳು (Nihang Sikhs in Gurudwara) ಗುರುದ್ವಾರವೊಂದನ್ನು ತಮ್ಮ ಹಿಡಿತಕ್ಕೆ ತೆಗೆದದುಕೊಂಡಿರುವ ಘಟನೆ ಉತ್ತರಾಖಂಡದ ರುದ್ರಪ್ರಯಾಗ್ದಲ್ಲಿ ವರದಿಯಾಗಿದೆ.
ಪೊಲೀಸರ ಬಂಧನದಲ್ಲಿರುವ ತಮ್ಮ ಸಂಗಡಿಗರನ್ನು ಬಿಡುಗಡೆ ಮಾಡುವವರೆಗೆ ಗುರುದ್ವಾರ ತಮ್ಮ ಹಿಡಿತದಲ್ಲಿರಲಿದೆ ಎಂದು ನಿಹಾಂಗ್‌ಗಳು ಮೇಲ್ಛಾವಣಿ ಏರಿ ಘೋಷಣೆ ಮಾಡಿದ್ದಾರೆ. ಮಾಹಿತಿ ಪ್ರಕಾರ ಮೂರನೇ ಮಹಡಿಯನ್ನು ನಿಹಾಂಗ್‌ಗಳು ಸಂಪೂರ್ಣವಾಗಿ ಮುಚ್ಚಿದ್ದು, ಓರ್ವ ಹಿರಿಯ ವ್ಯಕ್ತಿಯನ್ನು ತಮ್ಮ ಬಂಧನದಲ್ಲಿ ಇರಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಸದ್ಯ ರುದ್ರಪ್ರಯಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಆಗಮಿಸಿದ್ದು, ನಿಹಾಂಗ್ಗಳ ಮನವೋಲಿಸಿ, ಗುರುದ್ವಾರದಲ್ಲಿರುವ ಭಕ್ತರನ್ನು ಹೊರತರುವ ಪ್ರಯತ್ನ ನಡೆಸುತ್ತಿದ್ದಾರೆ.
ಜೂನ್ 16 ರಂದು ಕರ್ಣಪ್ರಯಾಗದಲ್ಲಿ ಪಾರ್ಕಿಂಗ್ಗಾಗಿ ಸ್ಥಳೀಯರೊಂದಿಗೆ ನಿಹಾಂಗ್ ಸಿಖ್ರ ಜಗಳವಾಗಿತ್ತು. ಆಗ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ನಾಲ್ಕು ಜನ ನಿಹಾಂಗ್ಗಳನ್ನು ಬಂಧಿಸಿದ್ದರು.
ನಂತರ ಗುರುದ್ವಾರಾಗೆ ಆಗಮಿಸಿದ ನಿಹಾಂಗ್ಗಳಿ ಅಲ್ಲಿದ್ದ ಸ್ವಯಂ ಸೇವಕರೊಂದಿಗೆ ಜೊತೆ ಸಹ ಜಗಳವಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗೆಯೇ ಕರ್ಣಪ್ರಯಾಗದಲ್ಲಿ ನಡೆದ ಘಟನೆಯನ್ನು ಗುರುದ್ವಾರದ ವ್ಯವಸ್ಥಾಪಕರೊಂದಿಗೆ ಚರ್ಚಿಸಿದ ನಿಹಾಂಗ್‌ಗಳು ನಾಳೆ ನಮ್ಮ ಸಂಗಡಿಗರು ಇಲ್ಲಿಗೆ ಬರುತ್ತಾರೆ. ನಾವು ಹೋರಾಟ ಮಾಡಲಿದ್ದೆವೆ ನಮಗೆ 50-60 ಕೋಣೆಗಳ ವ್ಯವಸ್ಥೆ ಮಾಡಿ ಎಂದು ಹೇಳಿದ್ದಾರೆ. ನಿಹಾಂಗ್ಗಳ ಮನವಿಗೆ ಗುರುದ್ವಾರದ ವ್ಯವಸ್ಥಾಪಕರು ಒಪ್ಪದ ಹಿನ್ನಲೆ ಗುರುದ್ವಾರವನ್ನು ಇವರು ತಮ್ಮ ಹಿಡಿತಕ್ಕೆ ತೆಗೆದು ಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಶಸ್ತ್ರ ಸಜ್ಜಿತರಾಗಿರುವ ನಿಹಾಂಗ್‌ಗಳು!
ಈ ನಿಹಾಂಗ್ ಸಿಖ್ರೆಂದರೆ ಇವರು ಸಿಖ್ ಪಂಥದಲ್ಲಿರುವ ಯೋಧರಾಗಿರುತ್ತಾರೆ. ಇವರ ಕೈಯಲ್ಲಿ ತಲ್ವಾರ್, ಭರ್ಜಿ, ಕೃಪಾಣ್ ಮೊದಲಾದ ಶಸ್ತ್ರಗಳನ್ನು ಇವರು ದೈನಂದಿನ ಜೀವನದಲ್ಲಿ ತಮ್ಮ ಸಮವಸ್ತ್ರದ ರೀತಿಯಲ್ಲೇ ಶಸ್ತ್ರಗಳನ್ನು ಹೊಂದಿರುತ್ತಾರೆ.
ಈಗ ಗುರುದ್ವಾರವನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಇವರು ಶಸ್ತ್ರ ಸಜ್ಜಿತರಾಗಿರುವ ಕಾರಣ ಅಲ್ಲಿ ಒತ್ತೆಯಾಳಾಗಿರುವವರಿಗೆ ಏನಾದರೂ ತೊಂದರೆಯಾದರೆ ಏನು ಗತಿ? ಎಂಬ ಆತಂಕ ಮೂಡಿರುವುದಂತೂ ಸತ್ಯವಾಗಿದೆ.
ಸೈನ್ಯ ಮತ್ತು ಪೊಲೀಸ್ರ ಆಗಮನ!
ಒಂದು ಕಡೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ನಿಹಾಂಗ್ಗಳ ಜೊತೆಗೆ ಮಾತುಕತೆ ಮೂಲಕ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರೆ, ಇನ್ನೊಂದು ಕಡೆಯಿಂದ ಭಾರತೀಯ ಸೇನೆ ಗುರುದ್ವಾರವನ್ನು ಸುತ್ತುವರಿದ ಬಗ್ಗೆ ಮಾಹಿತಿ ದೊರೆಯುತ್ತಿದೆ. ಒಂದು ವೇಳೆ ನಿಹಾಂಗ್‌ಗಳು ಮಾತುಕತೆಗೆ ಒಪ್ಪದ್ದಿದ್ದರೆ ಮಿಲಿಟರಿ ಕಾರ್ಯಾಚರಣೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).