ರಾಘವ್ ಚಡ್ಡಾ ವಿಡಿಯೋಗೆ ಪ್ರಕಾಶ್ ರಾಜ್ ಕೌಂಟರ್
- ಬಿಜೆಪಿಗೆ ಬೆಂಬಲ ಸೂಚಿಸಿದ ಎಎಪಿ ಸಂಸದ ರಾಘವ್ ಚಡ್ಡಾ
- ನಾನೊಬ್ಬ ತಪ್ಪಾಗಬಹುದು ಆದರೆ ನಿಮ್ಮನ್ನು ಅನ್ಫಾಲೋ ಮಾಡಿದ ಲಕ್ಷಾಂತರ ಜನ ತಪ್ಪಾಗಲು ಸಾಧ್ಯವಿಲ್ಲ
- ರಾಘವ್ ಚಡ್ಡಾ ವಿಡಿಯೋಗೆ ಪ್ರಕಾಶ್ ರಾಜ್ ಕೌಂಟರ್
ನವದೆಹಲಿ: ಆಮ್ ಆದ್ಮಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಸೂಚಿಸಿರುವುದನ್ನು ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj on Raghav Chadha) ಕಟುವಾಗಿ ಟೀಕಿಸಿದ್ದು, ನಿಮ್ಮನ್ನು ಲಕ್ಷಾಂತರ ಜನ ಅನ್ಫಾಲೋ ಮಾಡಿದ್ದಾರೆಂದು ಕಿಡಿಕಾರಿದ್ದಾರೆ
ನಾನೊಬ್ಬ ತಪ್ಪಾಗಬಹುದು ಲಕ್ಷಾಂತರ ತಪ್ಪಾಗರು!
ಇಂದು (ಏ.27) ರಾಘವ್ ಚಡ್ಡಾ ತಾವು ಆಮ್ ಆದ್ಮಿ ಪಕ್ಷವನ್ನು ಬಿಟ್ಟು ಏಕೆ ಬಿಜೆಪಿಗೆ ವಿಲೀನವಾಗಿದ್ದೆನೆಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಚಡ್ಡಾ, ಬಿಜೆಪಿಗೆ ಬೆಂಬಲ ನೀಡುವುದು ನನ್ನೊಬ್ಬನ ನಿಲುವಾಗಿರಲಿಲ್ಲ, ಇತರ ಆರು ಜನ ಸಂಸದರು ಒಪ್ಪಿಗೆ ನೀಡಿದ ನಂತರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ನನ್ನೊಬ್ಬನ ನಿರ್ಧಾರ ತಪ್ಪಾಗಿರಬಹುದು, ಆದರೆ ಏಳು ಜನರ ನಿರ್ಧಾರ ಹೇಗೆ ತಪ್ಪಾಗಲು ಸಾಧ್ಯವೆಂದು ಚಡ್ಡಾ ಹೇಳಿದ್ದರು.
ಈ ಹೇಳಿಕೆಗೆ ಈಗ ವಿರೋಧ ವ್ಯಕ್ತ ಪಡಿಸಿರುವ ಪ್ರಕಾಶ್ರಾಜ್, ನೀವು ಬಿಜೆಪಿಗೆ ಬೆಂಬಲ ನೀಡಿದ ತರುವಾಯ ಲಕ್ಷಾಂತರ ಜನ ನಿಮ್ಮನ್ನು ಸೋಷಿಯಲ್ ಮೀಡಿಯಾನಲ್ಲಿ ಅಲ್ಫಾಲೋ ಮಾಡಿದ್ದಾರೆ. ಹಾಗಾದರೆ ನಿಮ್ಮ ವಿಷಯದಲ್ಲಿ ನಾನೊಬ್ಬ ತಪ್ಪಾದರೂ ಲಕ್ಷಾಂತರ ಜನ ತಪ್ಪಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಪಕ್ಷ ಭ್ರಷ್ಟನ ಕೈಲಿದೆ!
ಆಮ್ ಆದ್ಮಿ ಪಕ್ಷದ ಹಿಡಿತವು ಒಬ್ಬ ಪರಮ ಭ್ರಷ್ಟನ ಹಿಡಿತಲ್ಲಿದೆ. ಆ ಪಕ್ಷದಲ್ಲಿ ನೀವು ಸ್ವತಂತ್ರವಾಗಿ ಏನನ್ನು ಮಾಡಲು ಬಿಡುವುದಿಲ್ಲ. ಅದೊಂದು ವ್ಯಕ್ತಿ ಪ್ರಧಾನ ರಾಜಕೀಯ ಪಕ್ಷವೆಂದು ಚಡ್ಡಾ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆ ಪಕ್ಷದ ವಾತಾವರಣ ಈಗ ವಿಷಪೂರಿತವಾಗಿದೆ, ನಾನು ರಾಜಕಾರಣದಲ್ಲಿ ಕೆರಿಯರ್ ಬಿಲ್ಡ್ ಮಾಡಲು ಬಂದಿಲ್ಲ, ನಾನು ಆ ಪಕ್ಷಕ್ಕಾಗಿ ನನ್ನ ಯೌವನದ 15 ವರ್ಷಗಳನ್ನು ಮುಡಿಪಾಗಿಟ್ಟಿದ್ದು, ಪಕ್ಷವನ್ನು ಕಟ್ಟುವಲ್ಲಿ ಎಷ್ಟು ಶ್ರಮ ವಹಿಸಿದ್ದೆನೆಂದು ಅಲ್ಲಿರುವ ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ರಾಘವ್ ಕಳೆದುಕೊಂಡ ಫಾಲೋವರ್ಸ್ ಎಷ್ಟು?
ರಾಘವ್ ಚಡ್ಡಾ ಅವರು ಸಂಸತ್ತಿನಲ್ಲಿ ಗಿಗ್ ಕಾರ್ಮಿಕರ ಹಕ್ಕುಗಳ ಬಗ್ಗೆ, ಫೋನ್ ರೀಚಾರ್ಜ್ ಸರಯಾಗಿ ಮೂವತ್ತು ದಿನ ಇರಬೇಕು ಎನ್ನುವ ಬಗ್ಗೆ, ಬ್ಯಾಂಕ್ ದಂಡಗಳಂತಹ ವಿಚಾರದ ಬಗ್ಗೆ ಮಾತನಾಡಿ ಝೆನ್ ಜಿಗಳ ಮನಸ್ಸನ್ನು ಗೆದ್ದುಕೊಂಡಿದ್ದರು.
ಶುಕ್ರವಾರ ರಾಘವ್ ಚಡ್ಡಾ ಅವರು ಬಿಜೆಪಿಗೆ ಸೇರಿದ ಬಗ್ಗೆ ಸುದ್ದಿಯಾಗುತ್ತಲೇ ಶನಿವಾರ ಮಧ್ಯಾಹ್ನದ ವೇಳೆಗೆ ಈ ಸಂಖ್ಯೆ 13.5 ಮಿಲಿಯನ್‌ಗೆ ಇಳಿಕೆಯಾಗಿದೆ. ಈ ಮೊದಲು ಅವರಿಗೆ 14.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ಅಂದರೆ ಸುಮಾರು 10 ಲಕ್ಷ ಜನ ಅನ್ಫಾಲೋ ಮಾಡಿದ್ದಾರೆ.
ಪಕ್ಷ ಬಿಡಲು ಇದೇ ಕಾರಣ
ಕಳೆದ ಮೂರು ದಿನಗಳಿಂದ ದೇಶದಾದ್ಯಂತ ನಾನು ಪಕ್ಷ ಬಿಟ್ಟಿರುವುದೇ ಚರ್ಚೆಯಾಗುತ್ತಿರುವ ಕಾರಣ ಈ ವಿಡಿಯೋವನ್ನು ನಾನು ಹಂಚಿಕೊಳ್ಳುತ್ತಿದ್ದೆನೆ. ಆಮ್ ಅದ್ಮಿ ಪಕ್ಷ ಈಗ ಮೊದಲಿನಂತಿಲ್ಲ, ಸರಿಯಾದ ವ್ಯಕ್ತಿ ತಪ್ಪಾದ ಪಕ್ಷದಲ್ಲಿದಿರಿ ಎಂದು ನನಗೆ ಹಲವಾರು ಜನ ಹೇಳುತ್ತಿದ್ದರು, ಅದ ನನಗೆ ಈಗ ಅರಿವಾಗಿದೆ.
ಆಮ್ ಆದ್ಮಿ ಪಕ್ಷ ಕಟ್ಟುವಾಗ ಕೇಜ್ರಿವಾಲ್ ಜೊತೆ ಇದ್ದ ಕೆಲವರಲ್ಲಿ ನಾನು ಒಬ್ಬ. ನಾನು ಈ ಪಕ್ಷದ ಸಂಘಟನೆಗಾಗಿ 15 ವರ್ಷ ನಿಡಿದ್ದೆನೆ. ನಾನು ನನ್ನ ಯೌವನದ 15 ವರ್ಷಗಳಲ್ಲಿ ಈ ಪಕ್ಷಕ್ಕಾಗಿ ಎಷ್ಟು ಶ್ರಮ, ಬೆವರು, ರಕ್ತ ಸುರಿಸಿದ್ದೆನೆಂದು ಪಕ್ಷದ ಹಿರಿಯರಿಗೆ ತಿಳಿದಿದೆ ಎಂದಿದ್ದಾರೆ,(ಏಜನ್ಸೀಸ್).