ಅಲಹಾಬಾದ್ ಹೈಕೋರ್ಟ್ ನ್ಯಾಯಾಲಯದ ಲೋಗೋ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ಸಾಂಕೇತಿಕ ಚಿತ್ರ.
ಅಲಹಾಬಾದ್: 2025 ರಲ್ಲಿ ಬರೇಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಲಾನಾ ತೌಕೀರ್ ರಜಾ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ (Allahabad High Court) ಅರ್ಜಿ ವಜಾ ಮಾಡಿ ಆದೇಶಿಸಿದೆ.
ಈ ಸಂದರ್ಭದಲ್ಲಿ ಸರ್ ತನ್ ಸೇ ಜುದಾ ಘೋಷಣೆ ಹಾಗೂ ಜೈ ಶ್ರೀ ರಾಮ್ ಘೋಷಣೆ ಎರಡು ಪ್ರತ್ಯೇಕವಾಗಿದ್ದು, ಒಂದಕ್ಕೊಂದು ಹೋಲಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಸರ್ ತನ್ ಸೇ ಜುದಾ ಧಾರ್ಮಿಕ ಹೇಳಿಕೆಯಲ್ಲ!
ಸೋಮವಾರ (ಸೆ.8) ಬರೇಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಲಾನಾ ತೌಕೀರ್ ರಜಾ ಖಾನ್, ಪ್ರಕರಣದಿಂದ ಜಾಮೀನು ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸಿತು.ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಜಸ್ಟೀಸ್ ಆಶುತೋಶ್ ಶ್ರೀವತ್ಸ ಅವರು ಪೊಲೀಸರ ಮೇಲೆ ದಾಳಿ ಮಾಡುವಾಗ, ಕಿಡಿಗೇಡಿಗಳು ಸರ್ ತನ್ ಸೇ ಜುದಾ ಘೋಷಣೆ ಕೂಗಿದ್ದಾರೆ.
ಈ ಸರ್ ತನ್ ಸೇ ಜುದಾ ಘೋಷಣೆ ಜೈ ಶ್ರೀ ರಾಮ್ ಹಾಗೂ ಅಲ್ಲಾ ಹು ಅಕ್ಬರ್ ರೀತಿ ಧಾರ್ಮಿಕ ಘೋಷಣೆಯಲ್ಲ. ಧಾರ್ಮಿಕ ಘೋಷಣೆಯಲ್ಲಿ ದೇವರಿಗೆ ನಮನ ಅಥವಾ ತಮಗೆ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುವುದಾಗಿದೆ. ಆದರೆ, ಈ ಸರ್ ತನ್ ಸೇ ಜುದಾ ಹೇಳಿಕೆ, ಅದು ಪೊಲೀಸರ ವಿರುದ್ಧ ಬಳಸಿದ್ದು, ಭಾರತದ ಸಾರ್ವಭೌಮತ್ವಕ್ಕೆ ಒಡ್ಡಿರುವ ಬೆದರಿಕೆಯಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತ ಪಡಿಸಿದೆ.
ಪ್ರಕರಣದ ಹಿನ್ನಲೆ!
2025 ರಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಐ ಲವ್ ಮೊಹಮ್ಮದ್ ಎನ್ನುವ ಟ್ರೆಂಡ್ ಪ್ರಾರಂಭಬವಾಗಿತ್ತು. ಇದರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಾದ ನಂತರ ಪೊಲೀಸರು ತನಿಖೆಗೆ ಮುಂದಾಗಿದ್ದರು.
ಈ ಹಿನ್ನಲೆಯಲ್ಲಿ ಶುಕ್ರವಾರ್ ರಂಜಾನ್ ನಂತರ ಕೆಲವರನ್ನು ಬಂಧಿಸಲು ಪೊಲೀಸರು ಮುಂದಾದಾಗ ಕೆಲ ಕಿಡಿಗೇಡಿಗಳು, ಪೊಲೀಸರ ಮೇಲೆ ಕಲ್ಲೆಸಿದ್ದರು. ಈ ಸಂದರ್ಭದಲ್ಲಿ ಆರೋಪಿ ಮೌಲಾನಾ ತೌಕೀರ್ ರಜಾ ಖಾನ್ ಸರ್ ತನ್ ಸೇ ಜುದಾ ಘೋಷಣೆ ಕೂಗಿ ಉದ್ವಿಗ್ನ ಗುಂಪನ್ನು ಪೊಲೀಸರ ಮೇಲೆ ಎತ್ತಿಕಟ್ಟಿದ್ದ ಆರೋಪವನ್ನು ಹೊತ್ತಿದ್ದಾನೆ. ಈಗ, ಈ ಪ್ರಕರಣದಿಂದ ಪಾರಾಗಲು ಮೌಲಾನಾ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ನ್ಯಾಯಪೀಠ ವಜಾ ಮಾಡಿ ಆದೇಶಿದೆ, (ಏಜನ್ಸೀಸ್).