ಪ್ರಶಾಂತ್ ಕಿಶೋರ್, ಸಾಮ್ರಾಟ್ ಚೌಧರಿ  
ದೇಶ

“ನಾನು ಅಸಹಾಯಕನಿರಬಹುದು, ಆತ ಅನಕ್ಷರಸ್ಥ ಅಪರಾಧಿ!”: ಸಿಎಂ ಸಾಮ್ರಾಟ್ ಚೌಧರಿಗೆ ಪ್ರಶಾಂತ್ ಕಿಶೋರ್ ತಿರುಗೇಟು | Prashant Kishor on Samrat Choudhary

ಪಾಟ್ನಾ: ಬಿಹಾರದ ರಾಜಕಾರಣದಲ್ಲಿಗ ಸಿಎಂ ಸಾಮ್ರಾಟ್ ಚೌಧರಿ ಹಾಗೂ ಜನ್​ ಸುರಾಜ್​ ಪಕ್ಷದ ಸ್ಥಾಪಕ ಹಾಗೂ ಬಂಕಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಶಾಂತ್​ ಕಿಶೋರ್ (Prashant Kishor on Samrat Choudhary) ನಡುವೆ ಮಾತಿನ ಮಲ್ಲ ಯುದ್ಧ ತೀವ್ರಗೊಂಡಿದೆ.
ಭಾರತೀಯ ಜನತಾ ಪಾರ್ಟಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್ ವಿಧಾನಸಭಾ ಚುನಾವಣೆ ನಂತರ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಸಿಕೊಂಡಿದ್ದರು.ನಂತರದ ದಿನಗಳಲ್ಲಿ ನಿತೀಶ್ ಕುಮಾರ್​ ರಾಜ್ಯಸಭೆಗೆ ಆಯ್ಕೆಯಾದ ಹಿನ್ನಲೆ, ಬಿಜೆಪಿಯ ಸಾಮ್ರಾಟ್​ ಚೌಧರಿಯನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು. ಚೌಧರಿ ಸಿಎಂ ಅಗಿ ಆಯ್ಕೆಯಾದ ದಿನದಿಂದ ಪ್ರಶಾಂತ್​ ಕಿಶೋರ್ ಹಾಗೂ ಸಾಮ್ರಾಟ್​ ಚೌಧರಿ ನಡುವೆ ಜಟಾಪಟಿ ನಡೆಯುತ್ತಾ ಬಂದಿದೆ.

ಅವನೊಬ್ಬ ಅನಕ್ಷರಸ್ಥ ಅಪರಾಧಿ!

ಸಹರ್ಸಾ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಶಾಂತ್​ ಕಿಶೋರ್​ಗೆ ಮಾಧ್ಯಮದವರು, ಸಿಎಂ ಸಾಮ್ರಾಟ್​ ಚೌಧರಿ ನಿವೊಬ್ಬ ಅಸಾಯಕ (Helpless) ಎಂಎಲ್​ಎ ಎಂದಿದ್ದಾರೆ, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನೆಂದು ಕೇಳಿದಾಗ, ಹೌದು, ನಾನು ಅಸಹಾಯಕನಾಗಿರಬಹುದು ಆದರೆ, ಅವನು ಅನಕ್ಷರಸ್ಥ ಅಪರಾಧಿ ಆಗಿದ್ದಾನೆಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಶಾಂತ್ ಕಿಶೋರ್, ಈ ಮೊದಲು ಕೂಡ ಸಾಮ್ರಾಟ್​ ಚೌಧರಿವೊಬ್ಬ ಕ್ರಿಮಿನಲ್​ ಸಿಎಂ ಎಂದು ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷತರಾಗಿ ನಿತಿನ್​ ನಬಿನ್​ ಆಯ್ಕೆಯಾದ ನಂತರ ತೆರವಾದ ಬಂಕಿಪುರ ಕ್ಷೇತ್ರದಿಂದ ಜೆಎಸ್​ಪಿ ಪಕ್ಷದಿಂದ ಪ್ರಶಾಂತ್​ ಕಿಶೋರ್​ ಸ್ಪರ್ಧೆ ಮಾಡಿ ತಮ್ಮ ಪಕ್ಷದ ಮೊದಲ ಹಾಗೂ ಏಕೈಕ ಎಂಎಲ್​ಎ ಆಗಿ ಆಯ್ಕೆಯಾಗಿದ್ದರು.

ಬಿಹಾರ ಭ್ರಷ್ಟಾಚಾರದಿಂದ ಮುಳುಗಿದೆ!

ಬಿಹಾರದಲ್ಲಿ ಉಂಟಾಗಿರುವ ಪ್ರವಾಹದ ಬಗ್ಗೆ ಮಾತನಾಡಿರುವ ಪ್ರಶಾಂತ್​ ಕಿಶೋರ್​, ಬಿಹಾರ ಕಳೆದ 80 ವರ್ಷಗಳಿಂದ ಪ್ರವಾಹಕ್ಕೆ ತುತ್ತಾಗುತ್ತಿದೆ. ಅದರಲ್ಲೂ ಕೋಸಿ ನದಿ ಪ್ರದೇಶ ಅಧಿಕ ನಷ್ಟವನ್ನು ಅನುಭವಿಸುತ್ತಿದೆ. ಆದರೆ ಅಧಿಕಾರದಲ್ಲಿ ಕುಳಿತವರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ, ಕೇವಲ ಬೊಗಸ್​​ ಯೋಜನೆ, ಪರಿಹಾರ ಎಂದು ಹೇಳುತ್ತಾ ಸಮಯ ಹಾಳು ಮಾಡುತ್ತಿದ್ದಾರೆ. ಬಿಹಾರ ಕೇವಲ ಪ್ರವಾಹದ ನೀರಿನಿಂದ ಮಾತ್ರವಲ್ಲ, ಭ್ರಷ್ಟಾಚಾರದಿಂದ ಕೂಡ ಮುಳುಗುತ್ತಿದೆ ಎಂದು ಕಿಡಿ ಕಾರಿದ್ದಾರೆ, (ಏಜನ್ಸೀಸ್​).