'ಬಿಲಾಂಗ್‌ಗಿಂಗ್: ಅ ಜರ್ನಿ ಆಫ್ ಲವ್' ಆತ್ಮಕತೆಯಲ್ಲಿ ತಮ್ಮ ಮೊದಲ ಮಗುವಿನ ಸಾವು ಮತ್ತು ಆ ಸಮಯದಲ್ಲಿ ಎದುರಿಸಿದ ಕಠಿಣ ಪರಿಸ್ಥಿತಿಯನ್ನು ನೆನೆದು ಭಾವುಕರಾದ ಸೋನಿಯಾ ಗಾಂಧಿ. 
ದೇಶ

"ಅವನು ನನ್ನ ಮೊದಲ ಮಗ, ಆಸ್ಪತ್ರೆಯಲ್ಲಿ ಕೊನೆಯ ಬಾರಿ ನೋಡಿದೆ": ಆತ್ಮಕತೆಯಲ್ಲಿ 'ಪುತ್ರ ಶೋಕ' ಬಿಚ್ಚಿಟ್ಟ ಸೋನಿಯಾ ಗಾಂಧಿ! Sonia Gandhi Memoir

ನವದೆಹಲಿ: ಇಂದು (ನವೆಂಬರ್​​, 10) ಷ್ಟ್ರೀಯ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅವರ ಜೀವನ ಚರಿತ್ರೆಯ ಪುಸ್ತಕವು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಇದರಲ್ಲಿ ದಾಖಲಾದ ಸಂಗತಿಗಳ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದರಲ್ಲಿ ದೇಶ-ವಿದೇಶದ ರಾಜಕೀಯ ಹಾಗೂ ತಮ್ಮ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಸೋನಿಯಾ ಗಾಂಧಿ ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.

ಬಿಲಾಂಗ್​ಗಿಂಗ್​: ಅ ಜರ್ನಿ ಆಫ್​ ಲವ್​ (Belonging: A Journey of Love) ಎನ್ನುವುದು ಸೋನಿಯಾ ಅವರ ಆತ್ಮಕತೆಯಾಗಿದ್ದು, ಇದರಲ್ಲಿ ಅವರು ತಮ್ಮ ರಾಜಕೀಯ ಜೀವನದ ಜತೆಗೆ ತಮ್ಮ ಖಾಸಗಿ ಜೀವನದ ಕೆಲ ಸಂಗತಿಗಳನ್ನು ಇಲ್ಲಿ ದಾಖಲಿಸಿದ್ದಾರೆ.

ಅವನು ನನ್ನ ಮೊದಲ ಮಗ!

ತಮ್ಮ ಹಾಗೂ ರಾಜೀವ್​ ಗಾಂಧಿ ಜತೆಗಿನ ವೈವಾಹಿಕ ಜೀವನದ ಬಗ್ಗೆ ಬರೆದುಕೊಂಡಿರುವ ಸೋನಿಯಾ ಗಾಂಧಿ, 1969 ರಲ್ಲಿ ರಾಹುಲ್​ ಗಾಂಧಿಗೆ ಜನ್ಮ ನೀಡುವ ಪೂರ್ವದಲ್ಲಿ, ಇನ್ನೊಂದು ಮಗುವಿಗೆ ಜನ್ಮ ನೀಡಿದ್ದು, ಆ ಶಿಶುವಿನ ಅಕಾಲಿಕ ಮರಣದ ಬಗ್ಗೆ ಮುಕ್ತವಾಗಿ ಬರೆದುಕೊಂಡಿದ್ದಾರೆ.

ಅಂದು 1969 ರ ಸಮಯ ನಾನು ಗರ್ಭಿಣಿಯಾಗಿದ್ದೇನೆಂದು ರಾಜೀವ್​ಗೆ ತಿಳಿಯಿತು. ನಂತರ, ಅತ್ತೆ ಇಂದಿರಾ ಗಾಂಧಿ ಇದು ಗಮನಕ್ಕೆ ಬಂದು, ಒಂದು ದೊಡ್ಡ ಮಗು, ಚಿಕ್ಕ ಮಗುವಿಗೆ ಜನ್ಮ ನೀಡಲಿದ್ದಾಳೆ, ಚೆನ್ನಾಗಿ ಆರೈಕೆ ಮಾಡಿಕೊ ಎಂದು ಆದೇಶಿಸಿದ್ದರಂತೆ.

ದಿನಾಲೂ ವ್ಯಾಯಾಮ ಮಾಡಬೇಕು, ಆರೋಗ್ಯಯುತ ಆಹಾರವನ್ನು ಮಾತ್ರ ಸೇವಿಸಬೇಕೆಂದು, ಇಂದಿರಾಗಾಂಧಿ ಆದೇಶಿಸಿದ್ದರೆಂದು, ಸೋನಿಯಾ ಗಾಂಧಿ ತಿಳಿಸಿದ್ದು, ತಾವು ಅದನ್ನು ಪಾಲಿಸಲು ವಿಫಲವಾಗಿದ್ದಾಗಿ ಕೂಡ ಬರೆದುಕೊಂಡಿದ್ದಾರೆ.

ಏಳನೇ ತಿಂಗಳು ತಂದ ಆಘಾತ!

ಸುಮಾರು ಏಳು ತಿಂಗಳು ನಾನು ಆರಾಮವಾಗಿಯೇ ಇದ್ದೆ, ಆದರೆ ಏಳನೇ ತಿಂಗಳಿನ ಪ್ರಾರಂಭದಲ್ಲಿ ವೀಪರೀತ ಹೊಟ್ಟೆ ನೋವು ಆರಂಭವಾಯಿತು. ಕೂಡಲೇ, ಆಸ್ಪತ್ರೆಗೆ ದಾಖಲಾದೆ, ಗಂಡು ಮಗುವಿಗೆ ಜನ್ಮ ನೀಡಿದೆ. ಅವನು ಸಪೂರವಾಗಿ, ಕಪ್ಪು ಕೂದಲನ್ನು ಹೊಂದಿದ್ದನೆಂದು ಸೋನಿಯಾ ಬರೆದಿದ್ದಾರೆ.

ನಾನು ಜನ್ಮ ನೀಡುತ್ತಲೇ, ರಾಜೀವ್​ ಆಸ್ಪತ್ರೆಗೆ ಬಂದರು. ಆದರೆ ಆ ಮಗು ಬದುಕುವುದು ಕಷ್ಟವೆಂದು ಅವರಿಗೆ ತಿಳಿದಿತ್ತು. ಹೀಗಾಗಿ ನನಗೆ ಆ ಮಗುವನ್ನು ಕೊನೆಯ ಬಾರಿಗೆ ತೋರಿಸಿದರು. ನಂತರ ಸಂಜೆಯೊಳಗೆ ಆ ಮಗು ಪ್ರಾಣ ಕಳೆದುಕೊಂಡಿತು.

ಈ ಸುದ್ದಿ ತಿಳಿಯುತ್ತಲೇ, ಇಂದಿರಾಗಾಂಧಿ ನನ್ನನ್ನು ನೋಡಲು ಬಂದರು. ಅವರು ಕೂಡ ತುಂಬಾ ದುಃಖಿತರಾಗಿದ್ದರು. ನಂತರ ಸಂಜಯ್​ ಗಾಂಧಿ ಆಗಮಿಸಿದರು. ಅವರು ನೋಡಲು ಸ್ಪಲ್ಪ ಒರಟರಾಗಿದ್ದರೂ ಅಂದು ಅವರು ತುಂಬಾ ಬೇಸರ ಮಾಡಿಕೊಂಡಿದ್ದರು ಎಂದು ದಾಖಲಿಸಿದ್ದಾರೆ.

ನೀರಿಗೆ ಹಾಕಬೇಡಿ!

ಮಗುವೇನೋ ಸತ್ತುಹೋಗಿದೆ. ಆದರ ಅಂತ್ಯಸಂಸ್ಕಾರ ಹೇಗೆ ಮಾಡುವುದು? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತು. ಮಗು ತುಂಬಾ ಚಿಕ್ಕವನಿದ್ದ ಕಾರಣ ಹಿಂದೂ ಸಂಪ್ರದಾಯದಂತೆ ಅಗ್ನಿಸ್ಪರ್ಶ ಅಸಾಧ್ಯವಾಗಿತ್ತು. ಕ್ರಿಶ್ಚಿಯನ್​ ಅಥವಾ ಪಾರ್ಸಿ ಸಂಪ್ರದಾಯದಂತೆ ಮಾಡಲು ಸಹಮತ ದೊರೆಯಲಿಲ್ಲ. ಹಾಗಾದರೆ, ಹಿಂದೂಗಳು ನವಜಾತ ಶಿಶುಗಳನ್ನು ನೀರಲ್ಲಿ ಬಿಡುತ್ತಾರೆ ನಾವು ಹಾಗೆ ಮಾಡೋಣ ಎಂದು ರಾಜೀವ್​​ ಹೇಳಿದರು. ಆದರೆ, ನಾನು ಇದಕ್ಕೆ ಸುತಾರಾಂ ಒಪ್ಪಲ್ಲಿಲ್ಲ. ಕೊನೆಗೆ, ರಾಜೀವ್​ ಮತ್ತು ಸಂಜಯ್​, ಆ ಮಗುವನ್ನು ತಮ್ಮ ತಾತ, ಜವಹರಲಾಲ್​ ನೆಹರೂ ಅವರಿಗೆ ಸೇರಿದ್ದ ಗಾರ್ಡನ್​ವೊಂದರಲ್ಲಿ ಆ ಮಗುವನ್ನು ಹೂತು, ಅಲ್ಲಿ ಹೂವಿನ ಗಿಡಗಳನ್ನು ನೆಟ್ಟರೆಂದು ಸೋನಿಯಾ ಗಾಂಧಿ ತಮ್ಮ ಆತ್ಮಕಥೆಯಲ್ಲಿ ತಿಳಿಸಿದ್ದಾರೆ.

ನನ್ನ ಚಾರಿತ್ರ್ಯ ಹರಣ ನಡೆದಿತ್ತು!

ಆದರೆ, ಈ ಸನ್ನಿವೇಶವನ್ನು ಕೆಲ ಬಲಪಂಥೀಯ ಪತ್ರಿಕೆಗಳು ಈ ಘಟನೆಯನ್ನು ತಮ್ಮ ಲಾಭಕ್ಕಾಗಿ ನನ್ನ ಚಾರಿತ್ರ್ಯವನ್ನು ನಾಶ ಪಡಿಸಿದರು. ಒಂದು ಪತ್ರಿಕೆಯಲ್ಲಿ, " ಒಂದು ಜಾರಜ ಮಗು (Bastard Child) ವಿಗೆ ಅಜ್ಜಿಯಾಗುವ ಇಂದಿರಾ ಗಾಂಧಿಯ ಪ್ರಯತ್ನ ವಿಫಲವಾಯಿತು" ಎಂದು ಬರೆದಿದ್ದರು. ಇದನ್ನು ನೋಡಿ ನನ್ನ ದುಃಖ ಇಮ್ಮುಡಿಯಾಯಿತು ಎಂದಿದ್ದಾರೆ. ಇದನ್ನು ನಾನು ರಾಜೀವ್​ಗೆ ತೋರಿಸಿದಾಗ, ನಮ್ಮ ಕುಟುಂಬದ ಬಗ್ಗೆ ಪತ್ರಿಕೆಗಳು, ಹೀಗೆ ಏನೇನೋ, ಕಪೋಲಕಲ್ಪಿತ ಕತೆಗಳನ್ನು ಬರೆಯುತ್ತಾರೆ. ನೀನು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡ ಎಂದು ಹೇಳಿ ಸಮಾಧಾನ ಮಾಡಿರು. ಕೆಲ ತಿಂಗಳು ನಂತರ ನಾನು ಮತ್ತೊಮ್ಮೆ ಗರ್ಭ ಧರಿಸಿ 1970 ರಲ್ಲಿ ರಾಹುಲ್​ ಗಾಂಧಿಗೆ ಜನ್ಮ ನೀಡಿದೆ ಎಂದು ಬೆರೆದಿದ್ದಾರೆ, (ಏಜೆನ್ಸೀಸ್).