ಪಾರ್ಕಿಂಗ್ನಲ್ಲಿದ್ದ ಜೀಪ್ ಹಿಮ್ಮುಖ ಚಲಿಸಿ ಅಜ್ಜಿ ಸಾವು
- ಉತ್ತರ ಪ್ರದೇಶದ ಫರುಕಾಬಾದ್‌ನಲ್ಲಿ ಭೀಕರ ದುರಂತ
- ಪಾರ್ಕಿಂಗ್ನಲ್ಲಿದ್ದ ಜೀಪ್ ಹಿಮ್ಮುಖ ಚಲಿಸಿ ಅಜ್ಜಿ ಸಾವು
- ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಫರುಕಾಬಾದ್: ಉತ್ತರ ಪ್ರದೇಶದ ಫರುಕಾಬಾದ್ನ ಮನೆಯೊಂದರಲ್ಲಿ ಪಾರ್ಕಿಂಗ್ನಲ್ಲಿ ನಿಲ್ಲಿಸಿಟ್ಟ ಮಹೀಂದ್ರಾ ಥಾರ್ ಜೀಪ್ನ ಹ್ಯಾಂಡ್ ಬ್ರೇಕ್ ಕೈಕೊಟ್ಟ ಕಾರಣ ಜೀಪ್ ಹಿಮ್ಮುಕ ಚಲಿಸಿ ಗೇಟನ್ನು ಮುಚ್ಚುತ್ತಿದ್ದ ಅಜ್ಜಿಯನ್ನು ಬಲಿ ಬಡಿದ ಘಟನೆ ವರದಿಯಾಗಿದೆ.
ಈ ಭೀಕರ ಘಟನೆಯು ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೊಮ್ಮಗ ವಾಹನವನ್ನು ಚಲಾಯಿಸುತ್ತಿದ್ದ ಎಂದ ತಿಳಿದು ಬಂದಿದೆ. ಸದ್ಯ ಈ ಅಫಘಾತದ ವಿಡಿಯೋ ಸೋಶಿಯಲ್ ಮೀಡಿಯಾನಲ್ಲಿ ಸಾಕಷ್ಟು ವೈರಲ್ (Viral Video) ಆಗುತ್ತಿದೆ.
ವಿಡಿಯೋನಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋನಲ್ಲಿ ಮೊಮ್ಮಗ ಜೀಪನ್ನು ಆಚೆಯಿಂದ ಮನೆಗೆ ತೆಗೆದುಕೊಂಡು ಬಂದಿದ್ದಾನೆ. ನಂತರ ಜೀವನ್ನು ಪಾರ್ಕಿಂಗ್ ಸ್ಥಳದಲ್ಲಿ ಗಾಡಿಯನ್ನು ನಿಲ್ಲಿಸಿದ್ದಾನೆ. ಗಾಡಿ ನಿಲ್ಲಿಸಿದ ನಂತರ ಅಜ್ಜಿ ಪಾರ್ಕಿಂಗ್ನ ಗೇಟನ್ನು ಮುಚ್ಚಲು ತೆರೆಳಿದಾಗ, ಜೀಪ್ ಇದ್ದಕ್ಕಿಂದೆ ಹಿಂದಕ್ಕೆ ಬಂದು ಅಜ್ಜಿಯನ್ನು ಕೌಪೌಂಡ್ ಗೋಡೆಗೆ ಜಜ್ಜಿದೆ.
ಜೀಪ್ ಅಜ್ಜಿಯನ್ನು ತಳ್ಳಿದ ಕೂಡಲೇ ಆಕೆ ಜೋರಾಗಿ ಕೂಗಿಕೊಂಡಿದ್ದಾಳೆ. ಆದರೆ ಮೊಮ್ಮಗ ಅಜ್ಜಿ ಬಳಿ ಬರುವ ಮೊದಲೇ ಪ್ರಾಣ ಪಕ್ಷಿ ಹಾರಿಹೋಗಿದೆ. ಆದರೂ ಅಜ್ಜಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಜ್ಜಿ ಆಸ್ಪತ್ರೆ ತಲುಪುವ ಮೊದಲೆ ಸಾವನ್ನಪ್ಪಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ.
ಪೊಲೀಸರಲ್ಲಿ ದೂರು ದಾಖಲು
ಈ ಘಟನೆ ನಡೆದ ತರುವಾಯ ಕುಟುಂಬದವರು ಪೊಲೀಸರಲ್ಲಿ ಅನೌಪಚಾರಿಕವಾಗಿ ದೂರೊಂದನ್ನು ದಾಖಲಿಸಿದ್ದಾರೆ. ಈ ಘಟನೆ ಸಂಪೂರ್ಣವಾಗಿ ಅಫಘಾತವಾಗಿದೆ ಎಂದು ಪೊಲೀಸರು ಸಹ ದೃಢೀಕರಿಸಿದ್ದಾರೆ. ನಿಮ್ಮ ಕಾರಿನ ಹ್ಯಾಂಡ್ ಬ್ರೇಕ್ನ್ನು ಪರೀಕ್ಷಿಸಿಕೊಳ್ಳಿ ಎಂದು ಫರುಕಾಬಾದ್ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿ ಕೊಂಡಿದ್ದಾರೆ,(ಏಜನ್ಸೀಸ್).