ಗುಂಪುಗಾರಿಕೆ ವಿರುದ್ಧ ಪ್ರಜಾಪ್ರಭುತ್ವದ ವಿಜಯ ಸಾಧಿಸಿದೆ ಎಂದ ಬಿಜೆಪಿ ನಾಯಕ 
ದೇಶ

ಅರಾಜಕತೆ ಸೃಷ್ಟಿಸುವವರ ನಾಟಕ ಫ್ಲಾಪ್‌, ಗುಂಪುಗಾರಿಕೆ ವಿರುದ್ಧ ಪ್ರಜಾಪ್ರಭುತ್ವ ವಿಜಯ ಸಾಧಿಸಿದೆ ಎಂದ ಬಿಜೆಪಿ ನಾಯಕ! | Sambit Patra

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಸಂಸದ ಸಂಬಿತ್ ಪಾತ್ರ (Sambit Patra) ಟೀಕಿಸಿದ್ದು, ಇದು ರಾಷ್ಟ್ರಧಾನಿಯಲ್ಲಿ ಅಶಾಂತಿಯನ್ನು ಸೃಷ್ಟಿಸಲು ವಿರೋಧ ಪಕ್ಷಗಳು ನಡೆಸಿದ ಸಂಘಟಿತ ಪ್ರಯತ್ನ ಎಂದು ಆರೋಪಿಸಿದ್ದಾರೆ.

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಸಂಸದ ಸಂಬಿತ್ ಪಾತ್ರ (Sambit Patra) ಟೀಕಿಸಿದ್ದು, ಇದು ರಾಷ್ಟ್ರಧಾನಿಯಲ್ಲಿ ಅಶಾಂತಿಯನ್ನು ಸೃಷ್ಟಿಸಲು ವಿರೋಧ ಪಕ್ಷಗಳು ನಡೆಸಿದ ಸಂಘಟಿತ ಪ್ರಯತ್ನ ಎಂದು ಆರೋಪಿಸಿದ್ದಾರೆ.

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸದ ಪಾತ್ರ, ಈ ಪ್ರದರ್ಶನವು ದೇಶದ ಮನಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ, ಭಾರತವು ಶಾಂತಿಯುತವಾಗಿದೆ ಮತ್ತು ಉತ್ತಮ ಆಡಳಿತದೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಪ್ರತಿಭಟನಾಕಾರರು ರಾಷ್ಟ್ರ ರಾಜಧಾನಿಯನ್ನು ಬಂಧನದಲ್ಲಿ ಇಡಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಇಂದು ಗುಂಪುಗಾರಿಕೆ (ಮೋಬಕ್ರಸಿ) ವಿರುದ್ಧ ಪ್ರಜಾಪ್ರಭುತ್ವವೇ ಗೆಲುವು ಸಾಧಿಸಿದೆ ಎಂದಿದ್ದಾರೆ.

ಇದನ್ನೂ ಓದಿ:ಅಭಿಜಿತ್ ದೀಪ್ಕೆ ಗ್ಯಾಂಗ್​ ಅನ್ನು ಮಹಿಳಾ ಪೊಲೀಸರು ಬಂಧಿಸಿದ್ದೇಕೆ? ಈ ಮಾಸ್ಟರ್‌ಪ್ಲ್ಯಾನ್​ ಹಿಂದಿದೆ ರೋಚಕ ಸಂಗತಿ! CJP Protest

ರಾಷ್ಟ್ರಪತಿಗಳೊಂದಿಗಿನ ಭೇಟಿಯ ನಂತರದ ಹೇಳಿಕೆಗಳಿಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಪಾತ್ರ, ಅವರೊಬ್ಬ ಅಯೋಗ್ಯ ನಾಯಕ ಎಂದು ಕರೆದಿದ್ದಲ್ಲದೆ, ರಾಷ್ಟ್ರಪತಿಗಳನ್ನು ಬೀದಿ ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಾಕಿಂಗ್​ ಹೇಳಿಕೆ ನೀಡಿದ್ದ ರಾಹುಲ್​!

ಶುಕ್ರವಾರ ರಾತ್ರಿ ರಾಷ್ಟ್ರಪತಿಗಳ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತ ಕಳ್ಳತನ ನಡೆಯುತ್ತಿದೆ ಎಂಬುದನ್ನು ರಾಷ್ಟ್ರಪತಿಗಳು ನಿರಾಕರಿಸುತ್ತಾರೆ, ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ವ್ಯವಸ್ಥೆ ಇದೆ ಎಂದು ಅವರು ಹೇಳುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ನಾವು ಹೇಳಿದ್ದನ್ನು ಅವರು ಒಪ್ಪಿಕೊಂಡಿದ್ದು ನನಗೆ ಆಘಾತ ಮತ್ತು ತೀವ್ರ ಅಚ್ಚರಿಯನ್ನುಂಟುಮಾಡಿತು ಎಂದು ಕಾಂಗ್ರೆಸ್​ ನಾಯಕರು ತಿಳಿಸಿದ್ದಾರೆ. ಮುಂದುವರೆದು ಮಾತನಾಡಿದ ರಾಹುಲ್​, ನಾವು ಸೋಮವಾರ ಸುಪ್ರೀಂಕೋರ್ಟ್‌ಗೆ ತೆರಳಿ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:ನಾಗಾಂವ್‌ನಲ್ಲಿ 'ಕೈ' ಹಿಡಿಯದ ಮುಸ್ಲಿಂ ಸಮುದಾಯ: ಅಲ್ಪಸಂಖ್ಯಾತರೂ ಕಾಂಗ್ರೆಸ್​ ಜೊತೆ ಇಲ್ಲ, ಗೌರವ್‌ರನ್ನು ಮೊದಲು ಕೆಳಗೆಳಿಸಿ ಎಂದ ಮಾಜಿ ಮಿತ್ರ! | Nagaon Bypoll

ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ರಾಷ್ಟ್ರ ರಾಜಧಾನಿಯ ಪ್ರಮುಖ ಸ್ಥಳಗಳಲ್ಲಿ, ವಿಶೇಷವಾಗಿ ಜಂತರ್ ಮಂತರ್ ಕಡೆಗೆ ಸಾಗುವ ಮಾರ್ಗಗಳು ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತಾ ವ್ಯವಸ್ಥೆಗಳಲ್ಲಿ ಸಿಸಿಟಿವಿ ಕಣ್ಗಾವಲು, ಸಾರ್ವಜನಿಕ ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸುತ್ತಿರುವ ಶಂಕಿತ ವ್ಯಕ್ತಿಗಳ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಪ್ರತಿಭಟನೆಗೆ ಕಾರಣವೇನು..?

ಎಸ್​ಐಆರ್​​ ಪ್ರಕ್ರಿಯೆಗಳಲ್ಲಿ ಲೋಪಗಳು ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವಾದಗಳನ್ನು ಮುಂದಿಟ್ಟುಕೊಂಡು ಸಿಜೆಪಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿ ಹಾಗೂ ರಾಷ್ಟ್ರಪತಿ ಭವನದವರೆಗೆ ಮಾರ್ಚ್ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ಈ ವೇಳೆ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು(ಏಜೆನ್ಸೀಸ್​).