ಬಿಎಸ್ಎಫ್ಗೆ ಬಾಂಗ್ಲಾದೇಶಕ್ಕೆ ಬೇಲಿಹಾಕಲು ಒಪ್ಪಿಗೆ ನೀಡಿದ ಸಿಎಂ ಸುವೇಂದು
- ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸುವೇಂದು ಅಧಿಕಾರಿ
- ಬಿಎಸ್ಎಫ್ಗೆ ಬಾಂಗ್ಲಾದೇಶಕ್ಕೆ ಬೇಲಿಹಾಕಲು ಒಪ್ಪಿಗೆ ನೀಡಿದ ಸಿಎಂ ಸುವೇಂದು
- ನುಸುಳುಕೋರರ ನಿಗ್ರಹ ನಮ್ಮ ಮೊದಲ ಆದ್ಯತೆ ಎಂದ ನೂತನ ಮುಖ್ಯಮಂತ್ರಿ
ಕೊಲ್ಕತ್ತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಸುವೇಂದು ಅಧಿಕಾರಿ (Suvendu Adhikari) , ಬಾಂಗ್ಲಾದೇಶದ ಸುತ್ತ ಬೇಲಿಹಾಕಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗೆ ಭೂಮಿ ಬಿಟ್ಟುಕೊಡಲು ಒಪ್ಪಿಗೆ ನೀಡಿದ್ದಾರೆ. ಈ ಭೂಮಿ ಹಸ್ತಾಂತರ ಪ್ರಕ್ರಿಯೆಯು ಸೋಮವಾರ (ಮೇ.11) ರಿಂದ ಆರಂಭವಾಗಲಿದ್ದು, ಮುಂದಿನ 45 ದಿನಗಳಲ್ಲಿ ಇದು ಸಂಪೂರ್ಣವಾಗಲಿದೆ ಎಂದು ಸುವೇಂದು ಅಧಿಕಾರಿ ತಿಳಿಸಿದ್ದಾರೆ.
ಮೊದಲ ಕ್ಯಾಬಿನೆಟ್ನಲ್ಲೇ ಅನುಮೋದನೆ!
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸುವೇಂದು ನಡೆಸಿದ ಮೊದಲ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಗಡಿ ರಕ್ಷಣೆ ನಮ್ಮ ಮೊದಲ ಆಧ್ಯತೆಯಾಗಿದ್ದು, ನುಸುಳುಕೋರರನ್ನು ತೆಡೆಯಲು ಬೇಲಿ ಹಾಕುವುದು ಅತಗ್ಯವಾಗಿದೆ. ಆದ್ದರಿಂದ ಮುಂದಿನ 45 ದಿನಗಳ ಕಾಲಮಿತಿಯಲ್ಲಿ ಬಿಎಸ್ಎಫ್ಗೆ ಈ ಭೂಮಿ ಹಸ್ತಾಂತರವನ್ನು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಮ್ಮ ಮೇಲೆ ಬಂಗಾಳದ ಜನ ನಂಬಿಕೆಯಿಟ್ಟು ಅಧಿಕಾರವನ್ನು ನೀಡಿದ್ದಾರೆ, ಅದನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಡಬಲ್ ಎಂಜಿನ್ ಸರ್ಕಾರ ಹೇಗೆ ಕೆಲಸ ಮಾಡಲಿದೆ ಎನ್ನುವುದನ್ನು ನಾವು ಸಾಭೀತು ಪಡಿಸಬೇಕಾಗಿದೆ ಎಂದು ಸುವೇಂದು ಹೇಳಿದ್ದಾರೆ.
ಕೇಂದ್ರದ ಯೋಜನೆಗಳಿಗೆ ಸ್ವಾಗತ
ತಮ್ಮ ಮೊದಲ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಸುವೇಂದು ಅಧಿಕಾರಿ, ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಸ್ಕಿಮ್ ಹಾಗೂ ಜನ್ ಆರೋಗ್ಯ ಯೋಜನಾ ಮೊದಲಾದ ಜನೋಪಕಾರಿ ಯೋಜನೆಗಳನ್ನು ಬಂಗಾಳದಲ್ಲಿ ಪ್ರಾರಂಭಿಸಲು ಒಪ್ಪಿಗೆ ನೀಡಿದ್ದಾರೆ. ನಬಾನಾದಲ್ಲಿ ನಡೆದ ಈ ಮೀಟಿಂಗ್ನಲ್ಲಿ ಅಗ್ನಿಮಿತ್ರ ಪಾಲ್, ಖುದಿರಾಮ್ ತುಡು, ಅಶೋಕ್ ಕೀರ್ತಾನಿಯಾ ಮತ್ತು ನಿಸಿತ್ ಪ್ರಮಾಣಿಕ್ ಮೊದಲಾದವರು ಹಾಜರಿದ್ದರು.
ಈ ಹಿಂದಿನ ಅವಧಿ (ಮಮತಾ ಬ್ಯಾನರ್ಜಿ ಆಡಳಿತದಲ್ಲಿ) ಯಲ್ಲಿ ರಾಜ್ಯದಲ್ಲಿದ್ದ ಐಎಎಸ್, ಐಪಿಎಸ್, ಐಆರ್ಎಸ್ ಅಧಿಕಾರಿಗಳಿಗೆ ಇತರೆ ರಾಜ್ಯಗಳಿಗೆ ತರಬೇತಿಗೆ ಕಳುಹಿಲಾಗುತ್ತಿರಲಿಲ್ಲ. ಆದರೆ ನಾವು ನಮ್ಮ ರಾಜ್ಯದಲ್ಲಿರುವ ಅಧಿಕಾರಿಗಳನ್ನು ದೇಶದ ಎಲ್ಲಾ ರಾಜ್ಯಗಳಲ್ಲಿ ನಡೆಯುವ ತರಬೇತಿಗಳಿಗೆ ಕಡ್ಡಾಯವಾಗಿ ಕಳುಹಿಸುತ್ತೇವೆಂದು ಸುವೇಂದು ಅಧಿಕಾರಿ ತಿಳಿಸಿದ್ದಾರೆ,(ಏಜನ್ಸೀಸ್).