ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ಜೋಸೆಫ್ ವಿಜಯ್ ಮಾಡಿದ ಕೈಸನ್ನೆ ಭಾರಿ ವೈರಲ್
- ಸಿಎಂ ಜೋಸೆಫ್ ವಿಜಯ್ ಮಾಡಿದ ಕೈಸನ್ನೆ ಈಗ ಭಾರಿ ವೈರಲ್
- ಅಂದು ಎಂ.ಕೆ. ಸ್ಟಾಲಿನ್ ಮಾಡಿದ್ದ ಸನ್ನೆಗೆ ಕೌಂಟರ್ ಕೊಟ್ಟರಾ ವಿಜಯ್?
- ಇದು ಸಿನಿಮಾ ಶೂಟಿಂಗ್ ಅಲ್ಲ ಎಂದು ಕಿಡಿಕಾರಿದ ಡಿಎಂಕೆ ಬೆಂಬಲಿಗರು
ಚೆನ್ನೈ: ತಮಿಳುನಾಡು ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ, ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ಸಲ್ಲಿಸಿದ ಸಿಎಂ ಜೋಸೆಫ್ ವಿಜಯ್ ಕೊನೆಯಲ್ಲಿ ಮಾಡಿರುವ ಕೈಸನ್ನೆಯೊಂದು (CM Vijay Hand Gesture) ಈಗ ವೈರಲ್ ಆಗುತ್ತಿದೆ.
ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ಸಲ್ಲಿಸಿದ ವಿಜಯ್ ಕೊನೆಯಲ್ಲಿಲೊಂದು ಕೈಸನ್ನೆ ಮಾಡಿದ್ದಾರೆ. ಇದೇ ರೀತಿ ಕೈಸನ್ನೆಯನ್ನು ಹಿಂದಿನ ಸಿಎಂ ಎಂ.ಕೆ.ಸ್ಟಾಲಿನ್ ಕೂಡ ಪ್ರದರ್ಶಿಸಿದ್ದರು. ಈಗ ವಿಜಯ್, ಸ್ಟಾಲಿನ್ಗೆ ಕೊಟ್ಟ ಕೌಂಟರ್ ಡಿಎಂಕೆ ಪಕ್ಷದ ಬೆಂಬಲಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಇದೇನು ಸಿನಿಮಾ ಎಂದುಕೊಂಡಿದ್ದಿರಾ?
ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಸಂಸತ್ತಿನ ಅಧಿವೇಶನವನ್ನು ನಿಸಿಮಾ ಥಿಯೇಟರ್ ಮಾಡಿಕೊಂಡಿದ್ದಾರೆ. ಬೆಕಾಬಿಟ್ಟಿ ಡೈಲಾಗ್ ಹೊಡೆಯುವುದು, ಅಭಿನಯ ಮಾಡುವುದನ್ನು ಈಗ ನಿಲ್ಲಿಸಬೇಕು. ಇದರಿಂದ ಕಲಾಪದ ಸಮಯ ವ್ಯರ್ಥವಾಗುತ್ತದೆ ಹಾಗೂ ಜನರ ಕಷ್ಟಗಳ ಪರಿಹಾರ ವಿಳಂಬವಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.
ವಿಜಯ್ ಸಂಸತ್ತಿನಲ್ಲಿ ತೋರಿದ ವರ್ತನೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ, ಇನ್ನು ಇದಕ್ಕೆ ರಾಜ್ಯಪಾಲು ಹೇಗೆ ಅನುಮತಿ ನೀಡಿದರು. ವಿಜಯ್ ಅವರ ಭಾಷಣ ಸಿಎಂನ ಮಾತಿಗಿಂತ ಸಿನಿಮಾ ಶೂಟಿಂಗ್ ಎನ್ನಿಸುತ್ತದೆ ಎಂದು ಡಿಎಂಕೆ ಪಕ್ಷ ಆಕ್ರೋಶವನ್ನು ಹೊರಹಾಕಿದೆ.
ತಮಿಳುನಾಡು ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಡಿಎಂಕೆ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನಡೆಸಿದ್ದ ಸೀಟ್ ಹಂಚಿಕೆ ಸಭೆ ಮುಗಿಸಿ ಹೊರಬಂದ ಅಂದಿನ ಸಿಎಂ ಎಂ.ಕೆ.ಸ್ಟಾಲಿನ್ ಎಲ್ಲಾ ಫಿನಿಶ್ ಎಂಬರ್ಥದಲ್ಲಿ ಕೈ ಸನ್ನೆಯೊಂದನ್ನು ಮಾಡಿದ್ದರು. ಇದು ಆ ಸಂದರ್ಭದಲ್ಲಿ ಸಖತ್ ವೈರಲ್ ಆಗಿತ್ತು. ಈಗ ಇದೇ ಸನ್ನೆಯನ್ನು ವಿಜಯ್ ಮಾಡಿರುವುದು, ಒಂದರ್ಥದಲ್ಲಿ ಎಂ.ಕೆ. ಸ್ಟಾಲಿನ್ಗೆ ಕೌಂಟರ್ ಕೊಟ್ಟ ರಿತಿಯಲ್ಲಿಯೇ ಇದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ, (ಏಜನ್ಸೀಸ್).