ಎಸಿ ಹೆಲ್ಮೆಟ್ ಹಾಗೂ ಕೈಯಲ್ಲಿ ಫ್ಯಾನ್ ಹಿಡಿದು ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸ್
ನವದೆಹಲಿ: ದೇಶದೆಲ್ಲಡೆ ಬಿಸಿಲಿನ ಕಾವು ಏರಿಕೆ ಕಾಣುತ್ತಲೇ ಇದೆ. ಜಗತ್ತಿನ ನೂರು ಅಧಿಕ ಉಷ್ಣಾಂಶ ಪ್ರದೇಶಗಳಲ್ಲಿ ಸುಮಾರು 95 ಪ್ರದೇಶಗಳು ಭಾರತದಲ್ಲಿಯೇ ಇದೆ ಎಂಬ ವರದಿ ಸಹ ಹೊರಬಿದ್ದಿದೆ. ಇನ್ನು ಇಷ್ಟೊಂದು ಬಿಸಿಲನ್ನು ಸಹಿಸಿಕೊಂಡು ರಸ್ತೆಯಲ್ಲಿ ಕೆಲಸ ಮಾಡಲು ಟ್ರಾಫಿಕ್ ಪೊಲೀಸ (Delhi Traffic Police) ರಿಗೆ ಕಷ್ಟವಾಗುತ್ತಿರುವ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಹೊಸ ಪ್ರಯೋಗವೊಂದನ್ನು ಕೈಗೊಂಡಿದೆ.
ತಲೆಗೆ ಎಸಿ ಹೆಲ್ಮೆಟ್; ಕೈಯಲ್ಲಿ ಫ್ಯಾನ್!
ರಾಷ್ಟ್ರ ರಾಜಧಾನಿಯಲ್ಲಿ ದಿನ ಕಳೆದಂತೆ ಸೂರ್ಯ ದೇವನ ಕೋಪ ತೀವ್ರವಾಗುತ್ತಿರುವ ಹಿನ್ನಲೆ, ದಿನದ ಬಹುಪಾಲು ಸಮಯವನ್ನು ರಸ್ತೆಯಲ್ಲಿಯೇ ಕಳೆಯುವ ಟ್ರಾಫಿಕ್ ಪೊಲೀಸರಿಗೆ ಎಸಿ ಚಾಲಿತ ಹೆಲ್ಮೆಟ್ ಹಾಗೂ ಕೈಗೆ ಒಂದು ಪೋರ್ಟಬಲ್ ಫ್ಯಾನ್‌ಗಳನ್ನು ನೀಡಲಾಗಿದೆ. ಇದರಿಂದ ಬಿಸಿಲನ್ನು ಸಂಪೂರ್ಣವಾಗಿ ಎದುರಿಸಲು ಸಾಧ್ಯವಾಗದಿದ್ದರೂ, ಸ್ವಲ್ಪವಾದರೂ ತಡೆಗಟ್ಟಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್!
ಸದ್ಯ ದೆಹಲಿಯಲ್ಲಿ ಸುಮಾರು 43 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಈ ಬಿಸಿಲಿನಲ್ಲಿ ಕೆಲಸ ಮಾಡುವುದು ಸಾಮಾನ್ಯ ಸಂಗತಿಯಲ್ಲ. ಇತ್ತೀಚೆಗೆ ಎಸಿ ಹೆಲ್ಮೆಟ್ ಧರಿಸಿ ಟ್ರಾಫಿಕ್ ಕಂಟ್ರೋಲ್ ಮಾಡುತ್ತಿರುವ ಪೊಲೀಸ್ ಒಬ್ಬರ ವಿಡಿಯೋ ವೈರಲ್ ಆದ ನಂತರ ಸರ್ಕಾರ ಈ ರೀತಿಯ ಕ್ರಮವೊಂದನ್ನು ಕೈಗೊಂಡಿದೆ ಎಂದು ತಿಳಿದು ಬಂದಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಕೈಗೆ ಕೆಲಸ ಕೊಟ್ಟಿದ್ದಾರೆ. ಅಂತೂ ದೆಹಲಿಯ ಬಿಸಿಲನ್ನು ಎದುರಿಸಲು ಹೆಲ್ಮೆಟ್ಗೆ ಎಸಿ ಕೂರಿಸುವ ಪ್ರಯೋಗ ಮಾಡಬೇಕಾಯಿತು ಎಂದು ಒಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.
ಪಾಪ ಈ ಬಿಸಿನಲ್ಲಿ ಟ್ರಾಫಿಕ್ ಪೊಲೀಸರು ಹೇಗೆ ಕೆಲಸ ಮಾಡುತ್ತಾರೋ ಏನೋ? ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಆದರೆ ನಮ್ಮ ದೆಹಲಿ ಬಿಸಿಲಿಗೆ ಈ ಎಸಿ ಕೆಲಸ ಮಾಡುವುದು ಯಾಕೋ ಡೌಟು ಎಂದು ಮತ್ತೊಬ್ಬರು ಅನುಮಾನ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್).