ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಬರ್ತ್‌ಡೇ ದಿನವೇ ವಿವಾದ! 
ದೇಶ

ಸರ್ಕಾರಿ ಶಾಲೆಯಲ್ಲಿ ಸಿಎಂ ವಿಜಯ್ ಫೋಟೊ ಹಂಚಿಕೆ: ಇವನು ಅಂಬೇಡ್ಕರ್‌, ತಿರುವಳ್ಳುವರ್​ಗೆ ಸಮಾನನೇ? TVK ಕಾರ್ಯಕರ್ತರಿಗೆ ನೆಟ್ಟಿಗರ ಕ್ಲಾಸ್​! CM Vijay Photo Controversy

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಬರ್ತ್‌ಡೇ ದಿನವೇ ವಿವಾದ!
  • ಸರ್ಕಾರಿ ಶಾಲೆಯ ತರಗತಿಯಲ್ಲಿ ಅಂಬೇಡ್ಕರ್, ತಿರುವಳ್ಳುವರ್ ಪಕ್ಕದಲ್ಲೇ ಸಿಎಂ ವಿಜಯ್ ಫೋಟೋ
  • ಇವನು ಅಂಬೇಡ್ಕರ್‌ಗೆ ಸಮಾನನೇ? ಎಂದ ನೆಟ್ಟಿಗರು
ಚೆನ್ನೈ: ಇವತ್ತು (ಸೋಮವಾರ, ಜೂ.22) ತಮಿಳುನಾಡು ಮುಖ್ಯಮಂತ್ರಿ ಜೋಸೆಫ್​ ವಿಜಯ್​ ಅವರ 52 ನೇ ಹುಟ್ಟುಹಬ್ಬವಾಗಿದೆ. ಹೀಗಾಗಿ ಟಿವಿಕೆ ಪಕ್ಷದ ಕಾರ್ಯಕರ್ತರಲ್ಲಿ ಹಾಗೂ ವಿಜಯ್​ ಅಭಿಮಾನಿಗಳಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗಿದೆ.
ಆದರೆ, ಕಾಂಚೀಪುರಂ ಜಿಲ್ಲೆಯ ತಲವರಂಪೂಂಡಿಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಸಿಎಂ ವಿಜಯ್ (CM Vijay Photo Controversy)​ ಅವರ ಭಾವಚಿತ್ರವನ್ನು ಟಿವಿಕೆ ಕಾರ್ಯಕರ್ತರು ತರಗತಿಯಲ್ಲಿ ಅಂಟಿಸಿರುವುದು ವಿರೋಧಕ್ಕೆ ಕಾರಣವಾಗಿದೆ.

ವಿಡಿಯೋ ತಂದ ಅವಾಂತರ!

ಶಾಲೆಯೊಂದಕ್ಕೆ ಎಂಟ್ರಿ ಕೊಟ್ಟಿರುವ ಟಿವಿಕೆ ಪಕ್ಷದ ಶಾಲನ್ನು ಹೊದ್ದಿರುವ ಯುವಕರು ವಿದ್ಯಾರ್ಥಿಗಳಿಗೆ ಸಿಹಿಯನ್ನು ಹಂಚಿದ್ದಾರೆ. ನಂತರ ಶಾಲೆಯ ಮುಖ್ಯ ಶಿಕ್ಷಕರ ಕೈಗೆ ವಿಜಯ್​ ಅವರ ಭಾವಚಿತ್ರವನ್ನು ನೀಡಿ ಕೊಟಠಿಯಲ್ಲಿ ಅಳವಡಿಸುವಂತೆ ಹೇಳಿದ್ದಾರೆ.
ರಾಜಕೀಯ ಕಾರ್ಯಕರ್ತರು ನೀಡಿದ ಭಾವಚಿತ್ರವನ್ನು ನಗುಮೊಗದಿಂದಲೇ ಸ್ವೀಕರಿಸಿದ ಮುಖ್ಯ ಶಿಕ್ಷಕರು, ಮಕ್ಕಳಿಗೆ ಫೋಟೊವನ್ನು ತೋರಿಸುತ್ತಾ, ಇವರು ಯಾರು ಮಕ್ಕಳೇ ಎಂದು ಕೇಳಿದ್ದಾರೆ? ಇದಕ್ಕೆ ವಿದ್ಯಾರ್ಥಿಗಳು ವಿಜಯ್​ ಮಾಮಾ ಎಂದು ಉತ್ತರ ನೀಡಿದ್ದಾರೆ.
ಇವೆಲ್ಲಾ ಸನ್ನಿವೇಶವನ್ನು ವಿಡಿಯೋ ಮಾಡಲಾಗಿದ್ದು, ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ಜನರ ಆಕ್ರೋಶದ ಕಟ್ಟೆ ಒಡೆದಿದೆ.

ಇವನ್ಯಾವ ದೊಣ್ಣೆ ನಾಯಕ?

ನಟ, ಸಿಎಂ ವಿಜಯ್​ನ ಫೋಟೊವನ್ನು ಶಾಲೆಯ ಕೊಠಡಿಯಲ್ಲಿ ಅಳವಡಿಸಿ ಎಂದು ಹೇಳಿರುವ ಮಾತು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಇವನ್ಯಾವ ದೊಣ್ಣೆ ನಾಯಕನೆಂದು ಇವನ ಫೋಟೊವನ್ನು ಶಾಲೆಯಲ್ಲಿ ನೇತುಹಾಕ ಬೇಕೆಂದು ಪ್ರಶ್ನಿಸಿದ್ದಾರೆ.
ಇವನು ಕೇವಲ ಒಬ್ಬ ರಾಜ್ಯದ ಮುಖ್ಯಮಂತ್ರಿ ಅಷ್ಟೇ. ಹಲವಾರು ವರ್ಷಗಳ ಕಾಲ ಆಡಳಿತ ನಡೆಸಿದ ಕರುಣಾನಿಧಿಯಾಗಲೀ, ಜಯಲಲಿತಾ ಅಗಲೀ ಈ ಕೆಲಸವನ್ನು ಮಾಡಿಲ್ಲ. ಇನ್ನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದೇ ಇವನ ಫೋಟೊವನ್ನು ಶಾಲೆಗೆ ಅಳವಡಿಸಬೇಕೆ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಇವನು ಬಾಬಾ ಸಾಹೇಬರಿಗೆ ಸಮಾನನೇ?

ಇನ್ನೂ ಕೆಲ ನೆಟ್ಟಿಗರು, ವಿಡಿಯೋದಲ್ಲಿರುವ ಶಾಲೆಯಲ್ಲಿ ಸಂವಿಧಾನ ನಿರ್ಮಾತ ಡಾ. ಬಿ.ಆರ್. ಅಂಬೇಡ್ಕರ್​, ಸಿಎನ್ ಅಣ್ಣಾದೊರೈ, ತಿರುವಳ್ಳುವರ್ ಮತ್ತು ಭಾರತಿಯಾರ್ ಅವರ ಭಾವಚಿತ್ರಗಳಿವೆ.
ಈ ವಿಜಯ್​ ಅಲ್ಲಿರುವ ವ್ಯಕ್ತಿಗಳ ಸಮಾನವಾಗಿ ಏನು ಸಾಧನೆ ಮಾಡಿದ್ದಾನೆಂದು ಇವನ ಫೋಟೊವನ್ನು ಅಲ್ಲಿಡಬೇಕು? ಕೇವಲ ಒಂದು ಚುನಾವಣೆ ಗೆದ್ದರೆ ಅಜಾರಮರವಾಗಲೂ ಸಾಧ್ಯವಿಲ್ಲ ಎಂದು ನೆಟ್ಟಿಗರು ಜರಿದಿದ್ದಾರೆ, (ಏಜನ್ಸೀಸ್​). ​​