ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಪುತ್ರ ಶಿವಂ ಮಿಶ್ರಾ 
ದೇಶ

ಬಂಧನವಾದ ಒಂದೇ ದಿನದಲ್ಲಿ ಉದ್ಯಮಿ ಪುತ್ರನಿಗೆ ಜಾಮೀನು! ಲ್ಯಾಂಬೋರ್ಗಿನಿ ಅಪಘಾತದ ಆರೋಪಿ ಶಿವಂ ಮಿಶ್ರಾ ಬಿಡುಗಡೆ | Shivam Mishra

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ನಡೆದಿದ್ದ ಕಾನ್ಪುರ ಲಂಬೋರ್ಘಿನಿ ಅಪಘಾತ
  • ಪ್ರಕರಣಕ್ಕೆ ಸಂಬಂಧಿಸಿದಂತೆ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಬಂಧನ
  • ಬಂಧನವಾದ ಕೆಲವೆ ಗಂಟೆಗಳಲ್ಲಿ ಜಾಮೀನು ಪಡೆದ ಶಿವಂ ಮಿಶ್ರಾ
  • 20,000 ಬಾಂಡ್​ ಬರೆಸಿಕೊಂಡು ಜಾಮೀನು ನೀಡಿದ ನ್ಯಾಯಾಲಯ
ಕಾನ್ಪುರ: ಫೆ.8 ರಂದು ಕಾನ್ಪುರದಲ್ಲಿ ನಡೆದಿದ್ದ ಲ್ಯಾಂಬೋರ್ಗಿನಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಪುತ್ರ ಶಿವಂ ಮಿಶ್ರಾ (Shivam Mishra) ಅವರಿಗೆ ನ್ಯಾಯಾಲಯವು ಪೊಲೀಸ್​ ಕಸ್ಟಡಿಯ ಬದಲಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಫೆಬ್ರವರಿ 8 ರಂದು ಕಾನ್ಪುರದ ವಿಐಪಿ ರಸ್ತೆಯಲ್ಲಿ ನಡೆದ ಅಪಘಾತದ ನಂತರ ಉದ್ಯಮಿಯ ಮಗನನ್ನು ರಕ್ಷಿಸಲು ಪ್ರಯತ್ನಗಳು ನಡೆದಿವೆ ಎಂಬ ಆರೋಪ ಮತ್ತು ಸಾರ್ವಜನಿಕರ ಆಕ್ರೋಶ ಹೆಚ್ಚಾದ ನಂತರ ಶಿವಂ ಮಿಶ್ರಾ ಅವರನ್ನು ಗುರುವಾರ (ಫೆ.12) ಪೊಲೀಸರು ಬಂಧಿಸಿದ್ದರು.
ಗುರುವಾರ ಬೆಳಿಗ್ಗೆ ಶಿವಂ ಅವರನ್ನು ಆರ್ಯ ನಗರದ ಅವರ ನಿವಾಸದ ಹೊರಗೆ ಬಂಧಿಸಲಾಯಿತು ಮತ್ತು ನಂತರ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಜೆಸಿಎಂ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ಆಟೋರಿಕ್ಷಾ ಮತ್ತು ನಿಂತಿದ್ದ ಮೋಟಾರ್‌ಸೈಲ್​​ಗಳಿಗೆ ಮಿಶ್ರಾ ಅವರ ಲ್ಯಾಂಬೋರ್ಗಿನಿ ಡಿಕ್ಕಿ ಹೊಡಿದ ಪರಿಣಾಮ 6 ಜನ ತೀವ್ರವಾಗಿ ಗಾಯಗೊಂಡಿದ್ದರು.
ಘಟನೆಯ ನಂತರ ಪೊಲೀಸರು ಲ್ಯಾಂಬೋರ್ಗಿನಿ ಕಾರನ್ನು ಠಾಣೆಗೆ ತೆಗೆದುಕೊಂಡು ಹೋಗಿ ಅದಕ್ಕೆ ಭದ್ರತೆ ವಹಿಸಿದ್ದರೂ ಮತ್ತು ಶಿವಂ ಮಿಶ್ರಾ ವಿರುದ್ಧ ಎಫ್​ಐಆರ್​ ಸಹ ದಾಖಲಾಗಿಲ್ಲ ಎಂಬ ವದಂತಿಗಳು ಹರಡಲಾರಂಭಿಸಿದವು.
ಫೆ.11 ಶಿವಂ ಮಿಶ್ರಾ ಅವರ ವಾಹನ ಚಾಲಕ ಎಂದು ಮೋಹನ್​ ಎಂಬ ವ್ಯಕ್ತಿ ನ್ಯಾಯಾಲಯದ ಮುಂದೆ ಬಂದು ಅಫಘಾತಕ್ಕೆ ತಾನೇ ಕಾರನವೆಂದು, ಶಿವಂ ತನ್ನ ಪಕ್ಕದ ಆಸನದಲ್ಲಿ ಕುಳಿತಿದ್ದರೆಂದು ಹೇಳಿಕೆ ನೀಡಿದರು. ಆದರೆ ಎಫ್​ಐಆರ್​ನಲ್ಲಿ ಮೋಹನ್​ ಅವರ ಹೆಸರಿನ ಬಗ್ಗೆ ಉಲ್ಲೇಖವಿರದ ಹಿನ್ನಲೆಯಲ್ಲಿ ನ್ಯಾಯಾಲಯ ಮೋಹನ್​ ಅವರ ಹೇಳಿಕೆಯನ್ನು ತಿರಸ್ಕರಿಸಿ, ಶಿವಂ ಮಿಶ್ರಾರನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿತ್ತು.
ನ್ಯಾಯಾಲಯ ಮತ್ತು ರಾಜಕೀಯ ಒತ್ತಡದ ಹಿನ್ನಲೆ ಗುರುವಾರ ಬೆಳಿಗ್ಗೆ ಶಿವಂ ಮಿಶ್ರಾರನ್ನು ಬಂಧಿಸಿದ್ದ ಪೊಲೀಸರು, ತಾವು ಕಲೆಹಾಕಿದ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಸಾಕ್ಷಿಗಳ ಕೊರತೆ ಹಿನ್ನಲೆ ಈದೀಗ ನ್ಯಾಯಾಲಯದವು ಶಿವಂ ಮಿಶ್ರಾ ಅವರಿಗೆ 20,000 ರೂಪಾಯಿ ಬಾಂಡನ್ನು ಪಡೆದು ಜಾಮೀನನ್ನು ನೀಡಿ ಆದೇಶಿಸಿದೆ. ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ನಾಲ್ಕು ದಿನ ತಗುಲಿತು, ಆದರೆ ಜಾಮೀನನ್ನು ಒಂದು ದಿನದಲ್ಲೇ ಪಡೆಯಲಾಯಿತು ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ,(ಏಜನ್ಸೀಸ್​).